ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಮತ್ತು ಪುಸ್ತಕ ಬಿಡುಗಡೆ:

Belgaum District Authority's Association Anniversary and Book Release:

0

ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಮತ್ತು ಪುಸ್ತಕ ಬಿಡುಗಡೆ:
ಬೆಳಗಾವಿ:(news belgaum) ಸಮಾಜದಲ್ಲಿಯ ವಿದ್ಯಮಾನಗಳನ್ನು ತೆರೆದ ಮನಸ್ಸಿನಿಂದ ನೋಡಿ ಸಂವೇದನೆಗಳನ್ನು ಅಕ್ಷರ ರೂಪದಲ್ಲಿ ಬರೆದು ಸಮಾಜಕ್ಕೆ ನೀಡುವುದು,ನೈಜತೆಗೆ ಕನ್ನಡಿ ಹಿಡಿಯುವುದು,ಇತರರೊಂದಿಗೆ ಸಂವಹನ ಮಾಡುವುದು,ನಮ್ಮ ಸಂಸ್ಕøತಿಯ ಬಿಳಲುಗಳನ್ನು ಮುಂದಿನ ಪೀಳಿಗೆಗೆ ಹರಿಬಿಡುವುದು ಸಮರ್ಥ ಲೇಖಕರ ಲಕ್ಷಣ.ಅದರಲ್ಲೂ ಮಹಿಳೆಯರು ಕೀಳರಿಮೆ ಬಿಟ್ಟು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಮಾಜದಲ್ಲಿಯ ಮೌಢ್ಯಗಳ ಮೇಲೆ ಬೆಳಕು ಚಲ್ಲುವ ಕೆಲಸವಾಗಬೇಕು,ಸಾಹಿತ್ಯದ ವಿವಿಧ ಮಜಲುಗಳ ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿಕೊಂಡು ಚಿರ ಸಾಹಿತ್ಯ ರಚನೆಗೆ ತೊಡಗಬೇಕು ಎಂದು ಬೆಂಗಳೂರಿನ ಖ್ಯಾತ ಪತ್ರಕರ್ತೆ ಹಾಗೂ ಸಾಹಿತಿ ಡಾ.ಆರ್.ಪೂರ್ಣಿಮಾ ಲೇಖಕಿಯರಿಗೆ ಕಿವಿ ಮಾತು ಹೇಳಿದರು.
News Belgaum-ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಮತ್ತು ಪುಸ್ತಕ ಬಿಡುಗಡೆ: News Belgaum-ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಮತ್ತು ಪುಸ್ತಕ ಬಿಡುಗಡೆ: 1ಸೋಮವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಜಿಲ್ಲಾ ಲೇಖಕಿಯರ ಸಂಘದ ವಾರ್ಷಿಕೋತ್ಸವ ಸಂದರ್ಭದಲ್ಲಿ ಅವರು ಮಾತನಾಡಿದರು.ಮುಂದುವರೆದು ಮಾತನಾಡುತ್ತ,ಸಾಹಿತ್ಯ ರಚನೆ ರಕ್ತಗತವಾಗಿ ಬರುವುದಿಲ್ಲ,ಸತತ ಅಧ್ಯಯನ ಮತ್ತು ಸಂವಾದಗಳಿಂದ ಜನಮನಕ್ಕೆ ವಿಶಿಷ್ಟ ಕಲೆಯಾದ ಲೇಖನ,ಕತೆ,ಕಾದಂಬರಿಗಳ ಮೂಲಕ ಮನದಟ್ಟಾಗುವಂತೆ ಬಿಂಬಿಸಿ ಉತ್ತಮ ಲೇಖಕರಾಗಬೇಕು ಎಂದರು.
ಡಾ.ಗುರುದೇವಿ ಹುಲೆಪ್ಪನವರ ಆಶಯ ನುಡಿಯಲ್ಲಿ ಜಿಲ್ಲಾ ಲೇಖಕಿಯರ ಸಂಘ ಕನ್ನಡ ಭಾಷೆಯ ಬೆಳವಣಿಗೆಗೆ ಹಲವಾರು ವರ್ಷಗಳಿಂದ ವಿವಿಧ ವಿಷಯಗಳ ಮೇಲೆ ಕಾರ್ಯಕ್ರಮ ಹಮ್ಮಿಕೊಂಡು ಹೊಸ ಸ್ವರೂಪ ನೀಡಿದ ಅಧ್ಯಕ್ಷೆಯ ಕಾರ್ಯವೈಖರಿಯನ್ನು ಮೆಚ್ಚಿದರು.ಎಲ್ಲ ಲೇಖಕಿಯರ ಸಾಹಿತ್ಯ ಸೇವೆಯ ಪರಿಚಯ ಮಾಡಿಸಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ದೀಪಿಕಾ ಚಾಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಾವು ಬರೆದ ಸಂಘದ ಕಾರ್ಯಕ್ರಮಗಳ ಸಮಗ್ರ ಚಿತ್ರಣ ನೀಡುವ ಸಂವೇದನೆ ಮತ್ತು ಸ್ಪಂದನ ಪುಸ್ತಕಗಳ ಬಿಡುಗಡೆಗೊಳಿಸಿದರು.
ಸಾಹಿತಿಗಳಾದ ಅಂಟಿನ,ಎಲ್ ಎಸ್ ಶಾಸ್ತ್ರೀ,ಮಧುಕರ ಗುಂಡೇನಟ್ಟಿ,ನೀಲಗಂಗಾ ಚರಂತಿಮಠ,ರೋಹಿಣಿ ಯಾದವಾಡ,ಮೈತ್ರೇಯಿಣಿ ಗದಿಗೆಪ್ಪಗೌಡ್ರ,ಪಾರ್ವತಿ ಪಿಟಗಿ,ನೀತಾ ರಾವ,ನಂದಾ ಗಾರ್ಗಿ,ಉಮಾ ಅಂಗಡಿ,ಶಾಂತಾ ಮಸೂತಿ ಮುಂತಾದ 25ಕ್ಕೂ ಹೆಚ್ಚು ಲೇಖಕಿಯರು ಮತ್ತು ಪತ್ರಕರ್ತರನ್ನು ಸತ್ಕರಿಸಿದರು.
ಮುಂದಿನ ಅವಧಿಗೆ ಜ್ಯೋತಿ ಬದಾಮಿ ಅವರನ್ನು ಸಂಘದ ಅಧ್ಯಕ್ಷ ಸ್ಥಾನಕ್ಕೆ ಆರಿಸಿದರು.
ಸುನಂದಾ ಮುಳೆ ಪ್ರಾರ್ಥನಾ ಗೀತೆ ಹೇಳಿದರು.ಜ್ಯೋತಿ ಬದಾಮಿ ಸ್ವಾಗತಿಸಿದರು.ಹೇಮಾ ಸೋನೊಳ್ಳಿ ನಿರೂಪಿಸಿದರು. Belgaum District Authority’s Association Anniversary and Book Release:

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.