ಉತ್ತಮ ಸಮಾಜಕ್ಕಾಗಿ

34 ಲಕ್ಷ ಮೇಲ್ಪಟ್ಟು ಕರೆಂಟ್ ಪಾವತಿ ಮಾಡದಿರುವುದು ಗಮನ ಸೆಳೆದಿದೆ: ಬೆಳಗಾವಿ ಹೆಸ್ಕಾಂ :4 ಫ್ಯಾಕ್ಟರಿ ಮಾಲಿಕರು

belagavi news

0

ಬೆಳಗಾವಿ: (newsbelgaum)ನಗರದ ಆಟೊನಗರದ 8 ಮಾಂಸ ಶೇಖರಣಾ ಘಟಕಗಳ ಪೈಕಿ 4 ಫ್ಯಾಕ್ಟರಿ ಮಾಲಿಕರು ಹೆಸ್ಕಾಂ ಗೆ ಒಟ್ಟು ಸುಮಾರು ₹34 ಲಕ್ಷ ಮೇಲ್ಪಟ್ಟು ಕರೆಂಟ್ ಪಾವತಿ ಮಾಡದಿರುವುದು ಗಮನ ಸೆಳೆದಿದೆ. ಬೆಳಗಾವಿ ಹೆಸ್ಕಾಂ CSD-3 ಅಧಿಕಾರಿಗಳು ಕರೆಂಟ್ ಬಿಲ್ ಪಾವತಿ ಮಾಡದ್ದರಿಂದ ಕಳೆದ ಮೇ. 17ರಂದು ಇವುಗಳ ಕರೆಂಟ್ ಕಟ್ ಸಹ ಮಾಡಿದ್ದರು. ಆದರೆ ಪ್ರಕರಣದ ತನಿಖಾಧಿಕಾರಿಗೆ ನ್ಯಾಯಾಲಯದ ಆದೇಶದ ಮೇರೆಗೆ ಘಟಕದಲ್ಲಿನ ಆಹಾರ ಪದಾರ್ಥ ಕೆಡದಂತೆ ಕರೆಂಟ್ ಸಂಪರ್ಕ ಕೊಡಿಸಲು ಪೊಲೀಸರು ಮುಂದಾದ್ದರಿಂದ ಈ ಕಗ್ಗಂಟು ಸೃಷ್ಟಿಯಾಯಿತು ಎನ್ನಲಾಗಿದೆ. Shivani precision components, seven star groups, Nile agro foods private Ltd, S. B. Traders choudhary ಈ ಫ್ಯಾಕ್ಟರಿಗಳು ಒಟ್ಟುಗೂಡಿಯೇ ಹೆಸ್ಕಾಂಗೆ ಬರಬೇಕಿದ್ದ ಕರೆಂಟ್ ಬಾಕಿ ಕಟ್ಟದೇ ಉಳಿಸಿಕೊಂಡಿವೆ.

ಅಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಬಿಜೆಪಿಯ ನಾಯಕರು ಕಾನೂನುಬಾಹಿರ ಚಟುವಟಿಕೆಯೆಂದು ಆರೋಪಿಸಿ ಈ ಮಾಂಸ ಶೇಖರಣಾ ಘಟಕಗಳ ಮೇಲೆ ದಾಳಿ ಮಾಡಿದ ನಂತರದ ಬೆಳವಣಿಗೆಯಲ್ಲಿ ಅಷ್ಟಷ್ಟು ಕರೆಂಟ್ ಬಿಲ್ಉ ಳಿಸಿಕೊಂಡಿರುವುದು ಖಚಿತ ಮೂಲಗಳಿಂದ ತಿಳಿದುಬಂದಿದೆ. ಹೆಸ್ಕಾಂ ಅಧಿಕಾರಿಗಳು ಬಾಕಿ ವಸೂಲಿಗೆ ಮುಂದಾದರೆ ಮಾಂಸ ಘಟಕಗಳ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಗಳು, ನ್ಯಾಯಾಲಯದ ಆದೇಶದಂತೆ ಮಾಂಸ ಸಂರಕ್ಷಣೆ ಹೆಸರಿನಲ್ಲಿ ಕರೆಂಟ್ ಕಟ್ ಮಾಡದಂತೆ ತಡೆದರು ಎಂಬ ಮಾಹಿತಿ ಹೊರಬಿದ್ದಿದೆ. ಕರೆಂಟ್ ಬಾಕಿ ಬಿಲ್ ಬಾರದಿದ್ದಾಗ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು, ಆದರೆ ಪೊಲೀಸ್ ಇಲಾಖೆ ಮಾತ್ರ ಸೀಸ್ ಮಾಡಲಾದ ಮಾಂಸ ಕೆಟ್ಟು ಹೋಗುತ್ತದೆ ಎಂಬ ಕಾರಣವೊಡ್ಡಿ ಮರು ಕರೆಂಟ್ ಜೋಡಣೆಗೆ ಹೆಸ್ಕಾಂಗೆ ತಾಕೀತು ಮಾಡಿದೆ. ಅತ್ತ ಲಕ್ಷಾಂತರ ಕರೆಂಟ್ ಬಿಲ್ ಬರಲಿಲ್ಲ. ಇತ್ತ ತಮ್ಮ ಅಧಿಕಾರ ಬಳಸಿ ವಿದ್ಯುತ್ ಸಂಪರ್ಕ ನಿಲ್ಲಿಸಲೂ ಸಾಧ್ಯವಾಗದೇ ಹೆಸ್ಕಾಂ ಸಂಕಷ್ಟಕ್ಕೆ ಸಿಲುಕಿದ್ದು, ಹುಬ್ಬಳ್ಳಿ ಎಂಡಿ ಅವರಿಗೆ ಬೆಳಗಾವಿ ಹೆಸ್ಕಾಂ ಕಚೇರಿ ಪ್ರಕರಣದ ಲಿಖಿತ ಮಾಹಿತಿ ನೀಡಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಂಡಿ ಕಚೇರಿಯಿಂದಲೂ ಯಾವುದೇ ಸೂಕ್ತ ಮರು ಉತ್ತರ ಬಾರದಿರುವುದು ಗಮನಾರ್ಹ.
ಪ್ರಕರಣದ ತನಿಖಾಧಿಕಾರಿ ಬೆಳಗಾವಿ ಅಪರಾಧ ವಿಭಾಗದ ಎಸಿಪಿ ಅವರು ಮಾರ್ಚ್ 23ರ ತಮಗೆ ಜಾರಿಯಾದ ನ್ಯಾಯಾಲಯದ ಆದೇಶ ಉಲ್ಲೇಖಿಸಿ ವಿದ್ಯುತ್ ಸಂಪರ್ಕ ಖಡಿತಗೊಳಿಸದಂತೆ ಹೆಸ್ಕಾಂಗೆ ಆಗಲೇ ಪತ್ರ ಬರೆದಿದ್ದಾರೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಸದರಿ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ನಿಲ್ಲಿಸುವಂತೆ ಹೆಸ್ಕಾಂಗೆ ಆದೇಶ ನೀಡಿದೆ. ಆದರೆ ಕರೆಂಟ್ ಕಟ್ ಮಾಡಲು ಇಲ್ಲವೇ ಬಾಕಿ ವಸೂಲಿ ಮಾಡಿಕೊಳ್ಳಲು ಆಗದೇ ಹೆಸ್ಕಾಂ ಸೋತು ಹೋಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.