ಉತ್ತಮ ಸಮಾಜಕ್ಕಾಗಿ

ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…!

news belagavi

0

ಬೆಳಗಾವಿ: (news belgaum)ಭಾರಿ ಮಳೆಗೆ ಬದುಕು ಕಳೆದುಕೊಂಡ ಮಡಿಕೇರಿ ಜನತೆಗೆ ಬೆಳಗಾವಿಯಿಂದ ಅಲ್ಪ ಸಹಾಯ ಮಾಡಲಾಯಿತು. ನಗರದ ಕನ್ನಡ ಸಂಘಟನೆಗಳು ಒಗ್ಗಟ್ಟಾಗಿ ಇಂದು ಅಗತ್ಯ ಅಪಾರ ಸಾಮಗ್ರಿಗಳನ್ನು ಕೊಡಗಿಗೆ ರವಾಣಿಸಿದರು. ಸರಕಾರ ಆಹಾರ ವ್ಯವಸ್ಥೆ ಮಾಡಿದ್ದು, ಸಾಕಷ್ಟು ಆಹಾರ ಪದಾರ್ಥಗಳು ಆಗಲೇ ದಾನಿಗಳಿಂದಲೂ ಹರಿದು ಬರುತ್ತಿವೆ. ಅಗತ್ಯವಾಗಿ ಮಕ್ಕಳಿಗೆ ಸ್ವೇಟರ್, ಮಂಕಿ ಕ್ಯಾಪ್, ಕೆಮ್ಮು ನೆಗಡಿಗಾಗಿ ಸಿರಪ್, ಮಲಗಲು ಚಾಪೆ, ಹೊದೆಯಲು ಕಂಬಳಿ ಅಲ್ಲಿಯ ನಿರಾಶ್ರಿತರಿಗೆ ಬೇಕಾಗಿರುವ ಮಾಹಿತಿ ಹೊರಬಿದ್ದಿದೆ.

News Belgaum-ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…! News Belgaum-ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…! 1 News Belgaum-ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…! 2ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಹಾಗೂ ಸುತ್ತಲಿನ ಹಳ್ಳಿಗಳ ಸಾವಿರಾರು ಸಂತ್ರಸ್ತರು ಗಂಜೀ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೆಳಗಾವಿ ಕನ್ನಡ ಸಂಘಟನೆಗಳ ಯುವಕರು ಇಂದು ರವಿವಾರ ಔಷಧಿ, ಸ್ಯಾನಿಟರಿ ಪ್ಯಾಡ್, ಮೆಡಿಕಲ್ ಕಿಟ್, ಹಾಸಿಗೆ, ಹೊದಿಕೆಗಳನ್ನು, ತಟ್ಟೆ, ಗ್ಲಾಸ ಸೇರಿದಂತೆ 25 ಸಾವಿರ ರೂ.ಮೌಲ್ಯದ ಸಾಮಗ್ರಿಗಳನ್ನು ಕೊಡಗಿಗೆ ಕಳಿಸಿದರು. ಮಕ್ಕಳಿಗಾಗಿ ಸ್ವೆಟರ್, ಕುಂಚಿಗೆ, ಸಿರಪ್, ಮಾತ್ರೆ ಹೊದಿಕೆಗಳನ್ನು ಸಹ ಕಳಿಸಲಾಯಿತು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮತ್ತು ಕಾರ್ಯಕರ್ತರು ಸಾಮಗ್ರಿಗಳನ್ನು ರವಾಣಿಸಿದರು.

ಕೊಡಗಿನ ಸಂತ್ರಸ್ತರಿಗೆ ಬೀಡಿ ಯುವಕರಿಂದ ಆಹಾರ ಸಾಮಗ್ರಿ ಮತ್ತು ಬಟ್ಟೆ ಸಂಗ್ರಹ

News Belgaum-ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…! 3 News Belgaum-ಕೊಡಗಿನ ಬಂಧುಗಳಿಗೆ: ಬೆಳಗಾವಿಗರ ಆದರ…! 4ಖಾನಾಪುರ: ಕನ್ನಡ ನಾಡಿನ ಜೀವನದಿ ಕಾವೇರಿ ಭಾಗದಲ್ಲಿರುವ ಕೊಡುಗು ಜಿಲ್ಲೆಯಾದ್ಯಂತ ಅತಿಯಾದ ಮಳೆಯಿಂದ ಹಲವಡೆ ಭಾರಿ ಪ್ರಮಾಣದ ಹಾನಿಯಾಗಿದೆ. ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಹಲವರನ್ನು ಗಂಜಿ‌ ಕೇಂದ್ರಗಳಲ್ಲಿ ರಕ್ಷಣೆ ನೀಡಲಾಗುತ್ತಿದ್ದು ನಮ್ಮಿಂದಲು ಏನಾದರೂ ಸಹಾಯ ಮಾಡಬೇಕೆಂದು ತಿಳಿದು ಬೀಡಿ ಗ್ರಾಮದ ದೈವದ ಗೆಳೆಯರ ಬಳಗದ ವತಿಯಿಂದ ಭಾರಿ ಪ್ರಮಾಣದ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗಿಗೆ ರವಾಣಿಸಿದರು.
ಬೀಡಿ ಗ್ರಾಮದ ದೈವದ ಗೆಳೆಯರ ಬಳಗದ ವತಿಯಿಂದ ೮ ಬಾಕ್ಸ ಬಿಸ್ಕಟ್, ೧೦ ಬಾಕ್ಸ ಪ್ರಥಮ ಚಿಕಿತ್ಸೆಯ ಸಾಮಗ್ರಿ, ೪೦ ಟಿ ಶರ್ಟ್, ೦೨ಬಾಕ್ಸ ಪಾಂಪರ್ಸ ಔಷಧಿ, ೦೨ ಬಾಕ್ಸ ಹಾಲು, ೫೦ ಟುತ್ ಪೆಸ್ಟ, ೦೮ ಕೆಜಿ ಬಟರ್ ಮತ್ತು ೦೨ ಬಾಕ್ಸ ಸಾಬೂನು ಗಳನ್ನು ಬೆಳಗಾವಿಯ ಕನ್ನಡ ಸಾಹಿತ್ಯ ಭವನದ ಮುಖಾಂತರ ಕೊಡಗಿಗೆ ರವಾನಿಸಿದರು.
ದೇನಿಗೆ ಸಂಗ್ರಹದಲ್ಲಿ ಯುವಕರಾದ ಜಗದೀಶ ಮಲ್ಲನ್ನವರ, ಮಹೇಶ ಅಡಗುನಕರ, ಶಿವಾನಂದ ಬನೋಶಿ, ಸಾಗರ ಪಟ್ಟಣಶೆಟ್ಟಿ, ಹರೀಶ ಕದಮ, ಸಮರ್ಥ ತಿಮ್ಮೊಲಿ, ಚೇತನ ಶಿಗಿಹಳ್ಳಿ, ಆಕಾಶ ಜವಳಿ, ವಿಶಾಲ ಪಾಟೀಲ ಹಾಗೂ ಸಂಘಡಿಗರು ಭಾಗವಹಿಸಿದ್ದರು.
ವರದಿ: ಕಾಶೀಮ ಹಟ್ಟಿಹೊಳಿ

Leave A Reply

 Click this button or press Ctrl+G to toggle between Kannada and English

Your email address will not be published.