ಉತ್ತಮ ಸಮಾಜಕ್ಕಾಗಿ

ನೂತನ ಕೃಷಿ ಮಾರುಕಟ್ಟೆ ಉದ್ಘಾಟನೆ ಐದು ವರ್ಷಗಳಲ್ಲಿ ಬೆಳಗಾವಿ ಮಾದರಿ ಜಿಲ್ಲೆ : -ಸತೀಶ ಜಾರಕಿಹೊಳಿ

Belgaum Model District: Five Years inaugurated by New Agricultural Market | tarunkranti news

0

ಬೆಳಗಾವಿ: ( tarun kranti ) 5 ವರ್ಷಗಳಲ್ಲಿ ಬೆಳಗಾವಿ ಜಿಲ್ಲೆಯನ್ನು ಸಮಗೃ ಅಭಿವೃದ್ಧಿ ಪಡಿಸಿ, ಸುಂದರ ಮತ್ತು ಮಾದರಿ ಜಿಲ್ಲೆಯನ್ನಾಗಿ ನಿರ್ಮಾಣ ಮಾಡುತ್ತೇವೆ ಎಂದು ಯಮಕನಮರ್ಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಹೇಳಿದರು.
ನಗರದ ಕೃಷಿ ಉತ್ವನ್ನ ಮಾರುಕಟ್ಟೆಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ (ಜ,27) ರಂದು ಹಮ್ಮಿಕೊಂಡಿದ್ದ, ನೂತನ ತರಕಾರಿ ಮಾರುಕಟ್ಟೆ ಪ್ರಾಂಗಣ, ಭಾನುವಾರ ಸಂತೆ ಪ್ರಾಂಗಣ ಮತ್ತು ನೂತನ ದ್ವಾರ ಬಾಗಿಲು ಉದ್ಘಾಟನೆ ಹಾಗೂ ಮುಖ್ಯ ಮಾರುಕಟ್ಟೆ ಪ್ರಾಂಗಣ ಸುವರ್ಣ ಮಹೋತ್ಸವ ಮತ್ತು ಮಾರುಕಟ್ಟೆ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯು ರಾಜಧಾನಿಗೇನು ಕಡಿಮೆಯಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಗಳು ಇದ್ದು, ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯು ಪ್ರಥಮ ಸ್ಥಾನದಲ್ಲಿ ಇದೆ. ಉದ್ಯೋಗ ಸೃಷ್ಠಿ ಕೃಮೇಣ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಈ ಕೃಷಿ ಮಾರುಕಟ್ಟೆಯಲ್ಲಿ ಒಟ್ಟು 180 ಅಂಗಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಬೆಳಗಾವಿಯ ಕೃಷಿ ಮಾರುಕಟ್ಟೆಯು ಇತರ ಜಿಲ್ಲೆಯ ಕೃಷಿ ಮಾರುಕಟ್ಟೆಗಳಿಗೆ ಮಾದರಿಯಾಗಿ. ಜಿಲ್ಲೆಯ ಸುತ್ತ-ಮುತ್ತಲಿನ ಕೃಷಿ ಮಾರುಕಟ್ಟೆಯ ಅಧಿಕಾರಿಗಳು ನಮ್ಮ ಕೃಷಿ ಮಾರುಕಟ್ಟೆಗೆ ಆಗಮಿಸಿ ಇದೆ ಮಾದರಿಯಲ್ಲಿ ತಮ್ಮ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಕೃಷಿ ಮಾರುಕಟ್ಟೆಯಿಂದ ಮಾರ್ಕಂಡಯ್ಯ ನದಿವರೆಗೆ 5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಮಾಡಲಾಗುವುದು. ಅದರ ಜೋತೆಗೆ ಕೃಷಿ ಮಾರುಕಟ್ಟೆಯಲ್ಲಿ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಣ್ಣ ರೈತರಿಗೆ ಈ ಕೃಷಿ ಮಾರುಕಟ್ಟೆಯು ತುಂಬಾ ಅನುಕೂಲವಾಗಲಿದೆ ಮತ್ತು ಅವರು ಬೆಳೆದ ತರಕಾರಿಗಳಿಗೆ ಸೂಕ್ತ ಬೆಲೆ ಸಿಗಲಿದೆ ಎಂದು ತಿಳಿಸಿದರು.

ಬೆಳಗಾವಿ (ಗ್ರಾಮಿಣ) ಮತಕ್ಷೇತ್ರದ ಶಾಸಕರಾದ ಸಂಜಯ ಪಾಟೀಲ ಅವರು ಮಾತನಾಡಿ,

ಹಲವು ರೈತರ, ಕೃಷಿ ಮಾರುಕಟ್ಟೆಯ ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ಪರಿಶ್ರಮದಿಂದ ಈ ಕೃಷಿ ಮಾರುಕಟ್ಟೆಯು ಇಂದು ಲೋಕಾರ್ಪಣೆ ಗೊಳ್ಳುತಿದೆ ಎಂದು ಹೇಳಿದರು.
ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯಾದ ಕೆ.ಎಚ್. ಗುರುಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತರಕಾರಿಯು ಒಂದು ಉತ್ತಮ ಬೆಳೆಯಾಗಿದ್ದು, ದೇಶಾದ್ಯಂತ ಅದನ್ನು ಸರಬರಾಜು ಮಾಡಲು ಈ ನೂತನ ಕೃಷಿ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ, ಕೃಷಿ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ ನಿಂಗಪ್ಪ ಜಾಧವ, ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ಶಂಕರಗೌಡ ಪಾಟೀಲ, ಸಿದ್ದು ಸುಣಗಾರ ಸೇರಿದಂತೆ ವಿವಿಧ ಗಣ್ಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕುಮಾರಿ ವೈಷ್ಣವಿ ಕುಲಕರ್ಣಿ ಅವರು ನಾಡ ಗೀತೆ ಮತ್ತು ರೈತ ಗೀತೆಯನ್ನು ಹಾಡಿರು.

Leave A Reply

 Click this button or press Ctrl+G to toggle between Kannada and English

Your email address will not be published.