ಉತ್ತಮ ಸಮಾಜಕ್ಕಾಗಿ

ವೀರಶೈವ ಧರ್ಮಕ್ಕೆ ಹೊರ ವ್ಶೆರಿಗಳಿಗಿಂತ ಒಳವೈರಿಗಳೇ ಹೆಚ್ಚು- ಶ್ರೀ ರಂಭಾಪುರಿ ಜಗದ್ಗುರುಗಳು

0

ಬೆಳಗಾವಿ- (tarunkranti): ವೀರಶೈವ ಧರ್ಮ ಉದಾತ್ತವಾದ ಮೌಲ್ಯಗಳನ್ನು ಬೆಳೆಸಿಕೊಂಡು ಬಂದಿದೆ. ಸಕಲ ಸಮುದಾಯಕ್ಕೂ ಒಳಿತನ್ನೇ ಮಾಡುತ್ತಾ ಬಂದಿದೆ. ಆದರೆ ವೀರಶೈವ ಧರ್ಮಕ್ಕೆ ಹೊರ ವೈರಿಗಳಿಗಿಂತ ಒಳಗಿರುವ ವೈರಿಗಳೇ ಹೆಚ್ಚಾಗಿದ್ದಾರೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ವಿಷಾದ ವ್ಯಕ್ತಪಡಿಸಿದರು.

ಅವರು ನಗರದ ಉಷಾ ಕಾಲೊನಿಯಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ 8ನೇ ವರುಷದ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ವೀರಶೈವ ಧರ್ಮ ವೃಕ್ಷದ ಬೇರು ಬಹಳಷ್ಟು ಭದ್ರವಾಗಿವೆ. ಕಾಲ ಕಾಲದಲ್ಲಿ ಈ ಧರ್ಮದ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಆದರೂ ಈ ಧರ್ಮ ಸಂಸ್ಕøತಿಯನ್ನು ನಾಶಗೊಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ವೀರಶೈವ ಧರ್ಮಕ್ಕೆ ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲಗಳು ಮೂಲಾಧಾರ. ಇವುಗಳಲ್ಲಿ ನಂಬಿಗೆ ಶೃದ್ಧೆ ಆಚರಣೆ ಇಲ್ಲದವರು ವೀರಶೈವರು ಅಲ್ಲ. ಲಿಂಗಾಯತರೂ ಅಲ್ಲ. ಆಚರಣೆಯಿಂದ ಮಾತ್ರ ವೀರಶೈವರಾಗಬಹುದೇ ಹೊರತು ಕೇವಲ ಮಾತಿನಿಂದಲ್ಲ.

ಪ್ರಾಚೀನ ಇತಿಹಾಸ ಪರಂಪರೆಯ ಪಂಚಪೀಠಗಳ ಜನಪ್ರಿಯತೆ ಮತ್ತು ಅದ್ಭುತ ಶಕ್ತಿಯನ್ನು ಕಂಡು ದ್ವೇಷ ಅಸೂಯೆಯಿಂದ ಕೆಲವರು. ಮಾತನಾಡುವರು. ನೀತಿ ಸಂಹಿತೆ ಮೀರಿ ನಡೆದವರಾರಿಗೂ ಒಳಿತಾಗಿಲ್ಲ. ವೀರಶೈವ ಲಿಂಗಾಯತ ಧರ್ಮದ ಹೆಸರಿನಲ್ಲಿ ಎಷ್ಟೋ ಸಂಘ ಸಂಸ್ಥೆಗಳು ಹುಟ್ಟಬಹುದು. ಸಂಘ ಸಂಸ್ಥೆ ಹುಟ್ಟು ಹಾಕುವುದು ಸುಲಭ.

ಆದರೆ ಕಟ್ಟದ್ದನ್ನು ಬೆಳೆಸುವುದು ಸುಲಭವಲ್ಲ. ಮಾತನಾಡುವುದು ಸುಲಭ ಆದರೆ ಮಾತಿನಂತೆ ನಡೆಯುವುದು ತುಂಬಾ ಕಷ್ಟ. ಪಂಚ ಪೀಠಗಳು ಬೋಧನೆಗಷ್ಟೇ ಸೀಮಿತಗೊಳ್ಳದೇ ಸಂಸ್ಕøತಿ, ಸದಾಚಾರ, ಸಭ್ಯತೆ, ಸಂಸ್ಕಾರ, ಸೌಜನ್ಯತೆ, ಸೌಹಾರ್ದತೆÀ, ದೇಶ ಪ್ರೇಮ, ಕ್ರಿಯಾಶೀಲ ಬದುಕು ಬೆಳೆಸಲು ಪ್ರಾಮಾಣಿಕ ಪ್ರಯತ್ನ ಇಂದಿಗೂ ಮಾಡುತ್ತ ಬಂದಿವೆ.

ಪ್ರಚಲಿತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಮಾನ ಪೀಠಾಚಾರ್ಯರ ಹಾಗೂ ನಿರಂಜನ ಶ್ರೀಗಳವರೊಂದಿಗೆ ವಿಚಾರ ವಿನಿಮಯ ಮಾಡಿ ಮುಂಬರುವ ದಿನಗಳಲ್ಲಿ ಒಂದು ಕ್ರಿಯಾ ಯೋಜನೆ ರೂಪಿಸಲಾಗುವುದು. ಅಖಿಲ ಭಾರತ ಮಹಾಸಭೆಗೆ ಪರ್ಯಾಯವಾಗಿ ಯಾವುದೇ ಸಭಾ ಹುಟ್ಟಿದರೂ ಸಹ ಅದು ಗುರಿ ಮುಟ್ಟಲು ಸಾಧ್ಯವಾಗದು.

ವೀರಶೈವ ಲಿಂಗಾಯತ ಒಂದೇ ಎಂಬ ಮಹಾಸಭಾ ನಿರ್ಧಾರಕ್ಕೆ ಪಂಚಪೀಠಗಳು ಮತ್ತು ವಿರಕ್ತ ಮಠಾಧೀಶರು ಬದ್ಧರಾಗಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಧಾರ್ಮಿಕ ತಳಹದಿಯ ಮೇಲೆ ಅಷ್ಟೇ ಅಲ್ಲ. ಕಾನೂನು ರೀತ್ಯಾ ಎಲ್ಲ ವಿಧಿ ವಿಧಾನಗಳನ್ನು ಅನುಸರಿಸಿ ಸಮಾಜಕ್ಕೆ ಮಾರ್ಗದರ್ಶನ ಕೊಡಲಾಗುವುದು.

ಬರಲಿರುವ ಫೆಬ್ರುವರಿ 28ರಂದು ಬಾಳೆಹೊನ್ನೂರು ಧರ್ಮ ಪೀಠದಲ್ಲಿ ಜರುಗಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಸಂದರ್ಭದಲ್ಲಿ ಹಲವಾರು ಮಹತ್ವ ಪೂರ್ಣ ನಿರ್ಧಾರಗಳನ್ನು ಕೈಗೊಂಡು ಕಾರ್ಯಾರಂಭ ಮಾಡಲಾಗುವುದೆಂದು ತಿಳಿಸಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಉಳ್ಳಾಗಡ್ಡಿ ಖಾನಾಪುರದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಕಬ್ಬೂರು ಗೌರಿಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.


ಬೆಂಗಳೂರಿನಿಂದ ಪ್ರಕಟಿತಗೊಳ್ಳುತ್ತಿರುವ ನಮ್ಮ ಇನ್ನೊಂದು ಸುದ್ದಿತಾಣ ಕರ್ನಾಟಕದಾದ್ಯಂತ ಪ್ರಸರಣ ವಿಸ್ತರಿಸಿದೆ…. ಅದು ಈ ವಿಭಾಗಗಳಲ್ಲಿ ಲಭ್ಯವಿದೆ.

Leave A Reply

 Click this button or press Ctrl+G to toggle between Kannada and English

Your email address will not be published.