ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಭಾಗಶಃ ಬಂದ್: ಬಿಗಿ ಬಂದೋಬಸ್ತ್ ಪ್ರತಿಭಟನೆ ನಡೆಸಿದರು.

Belgaum partially shut: Tight bandobast protests.

0

ಬೆಳಗಾವಿ:25 (tarun kranti) ಮಹದಾಯಿಗಾಗಿ ರಾಜ್ಯ ಬಂದ್ ಹಿನ್ನಲೆಯಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಕನ್ನಡ ಸಂಘಟನೆಗಳ ಇಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಪೂರ್ಣ ಬಂದ ಆಗಿದ್ದ ಸರಕಾರಿ ಬಸ್ ಸೇವೆ ಏರುಮಧ್ಯಾಹ್ನದ ಹೊತ್ತಿಗೆ ಗ್ರಾಮೀಣ ಬೀಟ್ ಪ್ರಾರಂಭವಾಗುತ್ತಿದ್ದಂತೆ ರೊಚ್ಚಿಗೆದ್ದ ಕಾರ್ಯಕರ್ತರು ಬಸ್ ಸಂಚಾರ ತಡೆಗಟ್ಟಲು ಘೋಷಣೆಗಳೊಂದಿಗರ ಸಿಬಿಟಿಯತ್ತ ತೆರಳಿದರು. ಕಾರ್ಯಕರ್ತರ ಆಕ್ರೋಶಕ್ಕೆ ಪೊಲೀಸರು ಸಿಬಿಟಿಯತ್ತ ಬಿಡದೇ ಬ್ಯಾರಿಕೇಡ್ ಅಳವಡಿಸಿ ತಡೆದರು. ಸಿಬಿಟಿ ಮತ್ತು ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸಂಪೂರ್ಣ ತಡೆಹಿಡಿಯಲಾಯಿತು.

ಮಾರುಕಟ್ಟೆ ಪ್ರದೇಶ ಭಾಗಶಃ ತೆರೆದುಕೊಂಡಿದ್ದರೆ ಭಾಗಶಃ ಬಂದ್ ಆಗಿತ್ತು. ಎಂದಿನ ದಿನನಿತ್ಯ ಸಂಚಾರ ಕಂಡುಬಾರದೇ ಮೌನ ಸದೃಶ್ಯಗಳು ಬೆಳಗಾವಿ ನಗರದಲ್ಲಿ ಕಂಡುಬಂದವು. ಬೆಳಗಾವಿಯಲ್ಲಿ ರಜೆ ಇಲ್ಲದಿದ್ದರೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪರ ಊರಿನ ಜನತೆ ಕಾಣಿಸಲಿಲ್ಲ. ಸರಕಾರಿ ಹಾಗೂ ಅರೆ ಸರಕಾರಿ ಕಚೇರಿಗಳು ಬಿಕೋ ಎನ್ನುತ್ತಿವೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಹಾಗೂ ಡಿಸಿಪಿ ಸೀಮಾ ಲಾಟಕರ ಪರಿಸ್ಥಿತಿ ಅವಲೋಕಿಸಿದರು.( belgaum)

Leave A Reply

 Click this button or press Ctrl+G to toggle between Kannada and English

Your email address will not be published.