ಉತ್ತಮ ಸಮಾಜಕ್ಕಾಗಿ

ನಡೆದ ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 8ರ ವೇಳೆಗೆ ಬೆಳಗಾವಿಯಲ್ಲಿ ಸ್ತಂಭ್ದತೆ ಕಂಡು ಬಂತು.

news belagavi

0

ಬೆಳಗಾವಿ:(newsbelagavi) ತೈಲಬೆಲೆ ಏರಿಕೆ ವಿರುದ್ದ ಇಂದು ನಡೆದ ಭಾರತ ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆ 8ರ ವೇಳೆಗೆ ಬೆಳಗಾವಿಯಲ್ಲಿ ಸ್ತಂಭ್ದತೆ ಕಂಡು ಬಂತು. ಕೇಂದ್ರ ಹಾಗೂ ನಗರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ನಿಂತಿತು.
ಜಿಲ್ಲಾಡಳಿತದ ಆದೇಶದ ಮೇರೆಗೂ ಗ್ರಾಮೀಣ ಭಾಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ಬೆಳಗಾವಿಯತ್ತ ಆಗಮಿಸಿ ಬಂದ್ ಹಿನ್ನೆಲೆಯಲ್ಲಿ ಕಾಯ್ದು ಕುಳಿತರು. ಹೋರಾಟಗಾರರಾದ ಆಟೋ ಚಾಲಕರು, ಕೆಎಸ್ ಆರ್ ಟಿಸಿ ಕಾರ್ಮಿಕ ಸಂಘಟನೆ, ಸಾರಿಗೆ ಸಿಬ್ಬಂಧಿ, ಲಾರಿ ಮತ್ತು ಟ್ಯಾಕ್ಸಿ ಸಂಘಟನೆಗಳು ಬಂದ್ ಬೆಂಬಲಿಸಿವೆ.
ಪರಿಸ್ಥಿತಿಗೆ ಅನುಗುಣವಾಗಿ ಬೆಳಗಾವಿ ವಿಭಾಗದಲ್ಲಿ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಾರಿಗೆ ಡಿಸಿ ಎಂ.ಆರ್. ಮುಂಜಿ ತಿಳಿಸಿದರು. ಬೆಳಗಿನ ಜಾವ ಗ್ರಾಮೀಣ ಭಾಗದಿಂದ ಬಸಗಳು ಬೆಳಗಾವಿಯತ್ತ ಆಗಮಿಸಿ ಕೆಲವು ನಿರ್ಗಮಿಸಿದವಾದರೂ ಕೆಲ ಹೊತ್ತಿನಲ್ಲಿ ಸಂಚಾರ ಸ್ಥಗಿತಗೊಳಿಸಲಾಯಿತು. ಬೆಳಗಾವಿ ಬಸ್ ನಿಲ್ದಾಣದ ಸುತ್ತಮುತ್ತ ಕೆಎಸ್ ಆರ್ಪಿ ಪಡೆ ನಿಯೋಜಿಸಲಾಯಿತು.

ಕರವೇ ಕಾರ್ಯಕರ್ತರು ಬೆಳಗಾವಿ ಗೋಕಾಕ ರಸ್ತೆ ತಡೆದು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

Leave A Reply

 Click this button or press Ctrl+G to toggle between Kannada and English

Your email address will not be published.