ಉತ್ತಮ ಸಮಾಜಕ್ಕಾಗಿ

ಕೆಟಿಎಂ ಆರೆಂಜ್ ಡೇಯಲ್ಲಿ ಬೈಕ್ ಸಾಹಸ

Bike adventure on KTM Orange Day

0

ಬೆಳಗಾವಿ:(tarunkranti) ರೇಸಿಂಗ್ ಬೈಕ್‍ಗಳ ಬ್ರಾಂಡ್ ಕೆಟಿಎಂ ಬೆಳಗಾವಿಯಲ್ಲಿ ಶನಿವಾರ ಕೆಟಿಎಂ ಬೈಕ್ ಮಾಲೀಕರು ಮತ್ತು ಬೈಕಿಂಗ್ ಉತ್ಸಾಹಿಗಳಿಗಾಗಿಯೇ ರೋಮಾಂಚಕ ರೇಸಿಂಗ್ ಕಾರ್ಯಕ್ರಮ ಆಯೋಜಿಸಿತ್ತು.

ಕೆಟಿಎಂ ಆರೆಂಜ್ ಡೇಯಲ್ಲಿ ಬೈಕ್ ಸಾಹಸ- Tarun kranti

‘ಆರೆಂಜ್ ಡೇ’ ಎಂದು ಕರೆಯಲಾದ ಈ ಕಾರ್ಯಕ್ರಮದಲ್ಲಿ ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶದ ಗ್ರಾಹಕರು ತಮ್ಮ ಕೆಟಿಎಂ ಬೈಕ್‍ಗಳೊಂದಿಗೆ ರೇಸ್‍ನಲ್ಲಿ ಪಾಲ್ಗೊಂಡಿದ್ದರು. ವೃತ್ತಿಪರ ಸಾಹಸಿ ಬೈಕ್ ಸವಾರರು ಅವರಿಗೆ ಮಾರ್ಗದರ್ಶನ ಮಾಡಿದರು. ಕೆಟಿಎಂ 200 ಡ್ಯೂಕ್ ಮತ್ತು ಕೆಟಿಎಂ ಆರ್‍ಸಿ 200 ಬೈಕ್‍ಗಳ ಮಾಲೀಕರು ಇದರಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.
ಕೆಟಿಎಂ ಡ್ಯೂಕ್ ಬೈಕ್‍ಗಳು ಇದುವರೆಗೆ 270ಕ್ಕೂ ಹೆಚ್ಚು ವಿಶ್ವ ಚಾಂಪಿಯನ್‍ಷಿಪ್‍ಗಳನ್ನು ವಿವಿಧ ವಿಭಾಗಗಳಲ್ಲಿ ಗೆದ್ದುಕೊಂಡಿವೆ. ರೇಸಿಂಗ್‍ನ ಮೂಲತತ್ವಕ್ಕೆ ಅನುಗುಣವಾಗಿಯೇ ಕೆಟಿಎಂ ಬೈಕ್ ವಿನ್ಯಾಸಗಳಿರುತ್ತವೆ. ವಿಶೇಷವಾಗಿ ಕೆಟಿಎಂ 200 ಡ್ಯೂಕ್ ಮತ್ತು ಆರ್‍ಸಿ 200 ಬೈಕ್ ಸವಾರರಿಗೆ ಈ ಕಾರ್ಯಕ್ರಮ ಪೂರಕವಾಗಿತ್ತು.
ಶನಿವಾರ ಸಂಜೆ ಬೆಳಗಾಂ ಕ್ಲಬ್ ಆವರಣದಲ್ಲಿ ಈ ರಂಗೇರಿದ ಕಾರ್ಯಕ್ರಮ ನಡೆಯಿತು. ಉತ್ಸಾಹಿ ಚಾಲಕರು ರೇಸಿಂಗ್‍ನಲ್ಲಿ ತಮ್ಮ ಚಳಕ ತೋರಿದರು. ರೇಸಿಂಗ್‍ನಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಮತ್ತು ಬಹುಮಾನಗಳನ್ನೂ ನೀಡಲಾಯಿತು. ಬೈಕ್ ಸರ್ವಿಸ್ ಕ್ಯಾಂಪ್, ಕೆಟಿಎಂ ಪವರ್ ಉಡುಪುಗಳು, ಬಿಡಿಭಾಗಗಳು ಲಭ್ಯವಿತ್ತು. ಹಿನ್ನೆಲೆಯಲ್ಲಿದ್ದ ಸಂಗೀತ ಕಾರ್ಯಕ್ರಮಕ್ಕೆ ರಂಗು ತುಂಬಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಜಾಜ್ ಆಟೋ ಲಿ.ನ ಪ್ರೊಬೈಕಿಂಗ್‍ನ ಅಧ್ಯಕ್ಷ ಅಮಿತ್ ನಂದಿ “ಕೆಟಿಎಂ ರೇಸಿಂಗ್‍ಗೆ ಇನ್ನೊಂದು ಹೆಸರಾಗಿ ಬೆಳೆದಿದೆ. ರೇಸ್ ಟ್ರ್ಯಾಕ್‍ನಲ್ಲಿ ಈ ಬೈಕ್ ನೀಡುವ ಉತ್ಸಾಹವನ್ನು ಬೈಕ್ ಮಾಲೀಕರಿಗೆ ಪರಿಚಯಿಸುವುದು ಆರೆಂಜ್ ಡೇ ಉದ್ದೇಶ. ಎಲ್ಲ ಪ್ರಮುಖ ನಗರಗಳಲ್ಲಿ ಈ ಕಾರ್ಯಕ್ರಮವನ್ನು ಸಂಸ್ಥೆ ನಡೆಸುತ್ತಿದೆ” ಎಂದು ತಿಳಿಸಿದರು.
ಇದುವರೆಗೆ ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು ಇನ್ನಿತರ ಕಡೆಗಳಲ್ಲಿ ಆರೆಂಜ್ ಡೇ ಕಾರ್ಯಕ್ರಮ ನಡೆದಿದೆ.

(belgaum)Bike adventure on KTM Orange Day

Leave A Reply

 Click this button or press Ctrl+G to toggle between Kannada and English

Your email address will not be published.