ಉತ್ತಮ ಸಮಾಜಕ್ಕಾಗಿ

ಬಾಲಕ ನಾಪತ್ತೆ: ಅಪಹರಣ ಶಂಕೆ Boy missing: kidnapping suspect

Boy missing: kidnapping suspect

0


ಅಪಹರಣ ಶಂಕೆ


ಕೊಪ್ಪಳ:12/02/2018 (tarun kranti) ನಗರದ  ಗವಿಮಠ ವಸತಿ ನಿಲಯದ ಮೂವರು ವಿದ್ಯಾರ್ಥಿಗಳು ಫೆ. 2 ರಂದು ನಾಪತ್ತೆಯಾಗಿದ್ದು, ಈ ಪೈಕಿ  ಇಬ್ಬರು ವಿದ್ಯಾರ್ಥಿಗಳು ಪತ್ತೆಯಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ಅಪಹರಣವಾಗಿರುವ ಶಂಕೆ ವ್ಯಕ್ತವಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಕಾಚಾಪೂರ ಗ್ರಾಮದ ವಿದ್ಯಾರ್ಥಿ ಬಸವರಾಜ ಹರಿಜನ(13) ಕಾಣೆಯಾದ ಬಾಲಕ. ಮೂವರು ಬಾಲಕರು ಫೆ.2 ರಂದು ಬೆಳಿಗ್ಗೆ 9 ಗಂಟೆಗೆ ಶಾಲೆಗೆ ಹೋಗಿದ್ದು, ಶಾಲೆ ಬಿಟ್ಟ ನಂತರ ವಾಪಸ್ ವಸತಿ ನಿಲಯಕ್ಕೆ ಬಾರದೇ ಎಲ್ಲಿಯೋ ಕಾಣೆಯಾಗಿದ್ದರು. ಇಬ್ಬರು ಬಾಲಕರು ಪತ್ತೆಯಾಗಿದ್ದು, ಬಸವರಾಜ ಇದುವರೆಗೂ ಪತ್ತೆಯಾಗಿಲ್ಲ  ಬಾಲಕನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08539-230100/230222 , ನಗರ ಪೊಲೀಸ್ ಠಾಣೆ ಮೊ ಸಂ: 9480803745 ಇಲ್ಲಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪೂಲೀಸರು ತಿಳಿಸಿದ್ದಾರೆ.

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.