ಉತ್ತಮ ಸಮಾಜಕ್ಕಾಗಿ

ಕೇಂದ್ರ ಸರಕಾರದಿಂದ ರೈತರಿಗೆ ಬಂಪರ್ ಗಿಫ್ಟ್

Bumper gift to farmers from central government

0

ನವದೆಹಲಿ: (news belagavi)  ದೇಶದ ರೈತರಿಗೆ ಕೇಂದ್ರ ಸರಕಾರ ಬಂಪರ್ ಉಡುಗೊರೆ ನೀಡಿದೆ. ಮುಂಬರುವ ಲೋಕಸಭೆ ಮತ್ತು ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟು ಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುವ ಮೂಲಕ ಕೃಷಿಕರನ್ನು ಓಲೈಸುವ ಯತ್ನ ನಡೆಸಿದೆ.

ಭತ್ತ, ರಾಗಿ ಮತ್ತು ಕಬ್ಬು ಸೇರಿದಂತೆ ಒಟ್ಟು 14 ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ(ಎಂಎಸ್‍ಪಿ)ಯನ್ನು ಕೇಂದ್ರ ಸರ್ಕಾರ ಇಂದು ಘೋಷಿಸಿದೆ. ಇದು ಇತಿಹಾಸದಲ್ಲೇ ಅತಿದೊಡ್ಡ ಪ್ರಮಾಣದ ಏರಿಕೆ ಎಂದು ಬಣ್ಣಿಸಲಾಗಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಬೆಳೆಯು 14 ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಶೇಕಡ 150ರಷ್ಟು ಗರಿಷ್ಠ ಎಂಎಸ್‍ಪಿ ನಿಗದಿಗೊಳಿಸಲಾಗಿದೆ.

ಚುನಾವಣಾ ಪ್ರಣಾಳಿಕೆಯಲ್ಲಿ ರೈತರ ಉತ್ಪಾದನಾ ವೆಚ್ಚಕ್ಕಿಂತಲೂ ಶೇಕಡ 50ರಷ್ಟು ಹೆಚ್ಚಿನ ದರವನ್ನು ಪಾವತಿಸುವುದಾಗಿ ಕೇಂದ್ರ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಅದರಂತೆ ಇಂದು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೇಂದ್ರ ಸರಕಾರದಿಂದ ರೈತರಿಗೆ ಬಂಪರ್ ಗಿಫ್ಟ್- Tarun kranti
ಬೆಳೆಗಳಿಗೆ ಹೊಸ ಬೆಂಬಲ ಬೆಲೆ:
ಭತ್ತ: 1750ರೂ
ರಾಗಿ: 2897 ರೂ
ತೊಗರಿಬೇಳೆ: 5675 ರೂ
ಹೆಸರುಬೇಳೆ: 6975 ರೂ
ಉದ್ದಿನ ಬೇಳೆ: 5600 ರೂ
ಕಡ್ಲೆಬೀಜ: 4890 ರೂ
ಎಳ್ಳು: 6249 ರೂ
ಜೋಳ (ಹೈಬ್ರೀಡ್​): 2430 ರೂ
ಜೋಳ(ಮಾಲ್ದಂಡಿ): 2450 ರೂ
ಸೂರ್ಯಕಾಂತಿ: 5388 ರೂ
ಮೆಕ್ಕೆಜೋಳ: 1950 ರೂ
ಸೊಯಾಬಿನ್: 3399 ರೂ
ನೈಗರ್​: 5877 ರೂ
ಬಾಜ್ರಾ: 1950 ರೂ
ಹತ್ತಿಬೀಜ(ಸಣ್ಣದು): 5150 ರೂ
ಹತ್ತಿಬೀಜ(ಹೈಬ್ರೀಡ್​): 5450 ರೂ

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.