ಉತ್ತಮ ಸಮಾಜಕ್ಕಾಗಿ

ಮೇ 12 ರಂದು ಕೆಲವು ಬಸ್ ಸಂಚಾರ ರದ್ದು

Some bus traffic canceled on May 12

0

ಬೆಳಗಾವಿ: (news belgaum)ಮೇ 12 ರಂದು ವಿಧಾನ ಸಭಾ ಚುನಾವಣೆ ಜರುಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವತಿಯಿಂದ ಚುನಾವಣಾ ಕಾರ್ಯಕ್ಕೆ ಒಟ್ಟು 307(ಚುನಾವಣಾ ಕಾರ್ಯಕ್ಕೆ-204 ಮತ್ತು ಪೋಲಿಸ್ ಇಲಾಖೆಗೆ-103) ವಾಹನಗಳನ್ನು ಪೂರೈಸಬೇಕಾಗಿರುತ್ತದೆ.
ಬೆಳಗಾವಿ, ಬೈಲಹೊಂಗಲ, ರಾಮದುರ್ಗ ಮತ್ತು ಖಾನಾಪೂರ ವಿಭಾಗದ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆಯಾಗುವ ಕೆಲ ಮಾರ್ಗಗಳ ಸಾರಿಗೆಗಳನ್ನು ಅನಿವಾರ್ಯ ಕಾರಣಗಳಿಂದಾಗಿ ಮೇ 11 ಹಾಗೂ ಮೇ 12 ರಂದು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ.

ರದ್ದುಪಡಿಸಿದ ಮಾರ್ಗಗಳು:-
ಬೆಳಗಾವಿಯಿಂದ – ಹುಬ್ಬಳ್ಳಿ, ಧಾರವಾಡ, ಸನ್ನತ್ತಿ, ವಿಜಯಪುರ, ಗುಡ್ಡಾಪುರ, ಗೋಕಾಕ, ಹಿಡಕಲ್, ಪಾಶ್ಚಾಪೂರ, ಬೈಲಹೊಂಗಲ,
ಸಿಬಿಟಿಯಿಂದ ನಗರ,ಉಪನಗರ: ಅನಗೋಳ, ವಡಗಾಂವ, ಮಜಗಾಂವ, ವಂಟಮೂರಿ, ಕಣಬರಗಿ, ರಣಕುಂಡೆ, ಚಂದನಹೊಸುರ, ಸುಳೇಭಾವಿ, ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯ, ಹೊನಗಾ, ಯಳ್ಳೂರ, ಉಚಗಾಂವ.
ಬೈಲಹೊಂಗಲದಿಂದ – ಧಾರವಾಡ, ಯರಗಟ್ಟಿ, ಮುನವಳ್ಳಿ, ನೇಸರಗಿ, ಬೆನಕಟ್ಟಿ, ಬೆಳಗಾವಿ, ಇಟಗಿರೋಡ, ಕಿತ್ತೂರು, ಹೊಳೆನಾಗಲಾಪುರ, ಪಟ್ಟಿಹಾಳ, ಗೊಡಚಿ, ಸವಟಗಿ, ಅಂಬಡಗಟ್ಟಿ, ಎಳಪಟ್ಟಿ, ತುರಮುರಿ.
ರಾಮದುರ್ಗದಿಂದ – ಮೆಳ್ಳಿಕೇರಿ, ಹಿರಿಕೊಪ್ಪ, ಹೊಸುರ, ಕೊಣ್ಣುರ, ಕುಳಗೇರಿ, ಮೂಲಂಗಿ, ಯಾದವಾಡ, ಅನವಾಲ, ಲಕ್ಕನಾಯಕನಕೊಪ್ಪ-ಎಸ್, ರೆಡ್ಡರತಿಮ್ಮಾಪುರ, ಗೊಣಗನೂರ,
ಖಾನಾಪೂರದಿಂದ – ಇಟಗಿ ಕ್ರಾಸ್, ಬಿದರಬಾವಿ, ಚಿಕಲಾ, ಪಾರವಾಡ, ಘೊಡಗೇರಿ, ಬೀಡಿ ಕಿತ್ತೂರು.
ಈ ಮೇಲಿನ ಮಾರ್ಗಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳು ಇರುವುದರಿಂದ ಕೆಲವೊಂದು ವಾಹನಗಳನ್ನು ರದ್ದುಪಡಿಸಲಾಗಿದೆ. ಮುಂದುವರೆದು ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾರ್ಗಗಳಿಗೆ ಕನಿಷ್ಠ ಮಟ್ಟದ ಸೇವೆಯನ್ನು ಒದಗಿಸಿ ಹಾಗೂ ಯಾವುದೇ ಮಾರ್ಗಗಳು ಸೇವಾ ರಹಿತವಾಗಿರದಂತೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
ಸದರಿ ದಿನಗಳಂದು (ಶನಿವಾರ ಮೇ 12 ರಂದು ಸಾರ್ವತ್ರಿಕ ರಜೆ ಘೋಷಣೆ ಆದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳಿಗೆ,ಶಾಲಾ ಕಾಲೇಜುಗಳಿಗೆ ರಜೆ ಇದ್ದು, ಮತದಾನದ ನಿಮಿತ್ಯ ವಿವಿಧ ಸಂಘ ಸಂಸ್ಥೆಗಳಿಗೆ ರಜೆ ಇದ್ದು,) ಚುನಾವಣಾ ನಿಮಿತ್ಯ ಅನಿವಾರ್ಯ ಕಾರಣದಿಂದಾಗಿ ಮಾರ್ಗಸೂಚಿಗಳನ್ನು ರದ್ದುಪಡಿಸಲಾಗಿರುತ್ತದೆ.
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸಿ ಲಭ್ಯವಿರುವ ಸಾರಿಗೆ ಸೌಲಭ್ಯವನ್ನು ಪಡೆದು ಪ್ರಯಾಣಿಸಬೇಕೆಂದು ಬೆಳಗಾವಿ ವಾಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Some bus traffic canceled on May 12

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.