ಉತ್ತಮ ಸಮಾಜಕ್ಕಾಗಿ

ಬೃಹತ್ ಸಮಾವೇಶ ನಡೆಸಿ ಕ್ಯಾಬಿನೆಟ್ ಎಕ್ಸ್ಪಾಂಡ್: ಬಿಎಸ್ವೈ ಸಿಎಂ ಆಗಿ ಪ್ರಮಾಣ: ಏಕಾಂಗಿ ಸರಕಾರ

Cabinet Expedition: BSI CM Amount: Lone Government

0

ಬೃಹತ್ ಸಮಾವೇಶ ನಡೆಸಿ ಕ್ಯಾಬಿನೆಟ್ ಎಕ್ಸ್ಪಾಂಡ್: ಬಿಎಸ್ವೈ

ಬೆಳಗಾವಿ:    (news belagavi) 4 ಲಕ್ಷ ಜನರನ್ನು ಸೇರಿಸಿ ಬೆಂಗಳೂರಲ್ಲಿ ಬೃಹತ ಸಭೆ ಮಾಡಿ ಕ್ಯಾಬಿನೆಟ್ ವಿಸ್ತರಿಸುವೆ ಎಂದು ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಇಂದು ಸಿಎಂ ಆಗಿ ಮೊದಲ ಸುದ್ದಿಗೋಷ್ಠಿ ನಡೆಸಿದ ಅವರು ರೈತರ ಹಾಗೂ ನೇಕಾರರ ರಾಷ್ಟ್ರೀಯ ಹಾಗೂ ಸಹಕಾರಿ ಸಾಲ ಮನ್ನಾ ಮಾಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿ ಚರ್ಚೆ ನಡೆಸಲಾಗಿದೆ ಎಂದರು.
ರಾಷ್ಟ್ರೀಯ ಪಕ್ಷ ಬಿಜೆಪಿ ತನ್ನ ಬಹುಮತ ಸಾಬೀತು ಪಡಿಸುತ್ತದೆ ಎಂದು ಪದೇ ಪದೇ ಭರವಸೆ ವ್ಯಕ್ತಪಡಿಸಿರುವ ಯಡಿಯೂರಪ್ಪ ಶುಕ್ರವಾರ-ಶನಿವಾರದ ಎರಡು ದಿನಗಳ ಕಾಯ್ದು ನೋಡುವ ತಂತ್ರ ಹೂಡಿದ್ದಾರೆ. ಪ್ರಧಾನಿ ಮೋದಿ, ಅಮಿತ ಶಾ ಸೇರಿ ವರಿಷ್ಠ ನಾಯಕರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಮಾವೇಶದ ಮೂಲಕ ಕ್ಯಾಬಿನೆಟ್ ವಿಸ್ತರಣೆ ಮಾಡಲಾಗುವುದು ಎಂದರು. ಜನರ ಪಕ್ಷ ಬಿಜೆಪಿ ಸರಕಾರ ರಚಿಸಲು ಅವಕಾಶ ನೀಡದೆಯೇ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡುಕೊಂಡು ಅಧಿಕಾರ ಕಬಳಿಕೆ ಮಾಡಲೆತ್ನಿಸುತ್ತಿದ್ದಾರೆ ಎಂದು ಬಿಎಸ್ವೈ ಆರೋಪಿಸಿದರು.

ಬಿ. ಎಸ್. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ: ಏಕಾಂಗಿ ಸರಕಾರ

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಏಕಾಂಗಿಯಾಗಿ ಬಿ. ಎಸ್. ಯಡಿಯೂರಪ್ಪ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆಶ್ಚರ್ಯಕರ ಬೆಳವಣಿಗೆಯಲ್ಲಿ ದಿಢೀರ್ ಆಗಿ ಇಂದು ಬೆಳಿಗ್ಗೆ 9ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ರೈತರು & ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್ ಮದ್ಯಪ್ರವೇಶದ ನಡುವೆಯೇ ಯಡ್ಡಿ ಏಕಾಂಗಿ ‘ಸರಕಾರ’ ರಚಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.