ಉತ್ತಮ ಸಮಾಜಕ್ಕಾಗಿ

ಪರ್ಯಾಯ ಇಂಧನ ಬಳಕೆಗೆ ಜಿಪಂ ಸಿ.ಇ.ಒ ಕರೆ

Call for CEO for alternative fuel use

0

ಬೆಳಗಾವಿ:(news belgaum) ಗ್ರಾಮಾಂತರ ಪ್ರದೇಶದ ಇಂಧನ ಸಮಸ್ಯೆ ಪರಿಹರಿಸುವ ಕುರಿತಂತೆ ಸರ್ಕಾರವು ಪರ್ಯಾಯ ಇಂಧನ ಶಕ್ತಿಯ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜೈವಾನಿಲ ಹಾಗೂ ಗೊಬ್ಬರ ನಿರ್ವಹಣೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಕಾರ್ಯಗತಗೊಳಿಸುತ್ತಿದ್ದು, ಇದರಿಂದ ಎಲ್.ಪಿ.ಜಿಗೆ ಪರ್ಯಾಯವಾಗಿ ಗೋಬರಗ್ಯಾಸ ಅನಿಲ ಬಳಕೆಯನ್ನು ಹೆಚ್ಚಿಸುವುದರೊಂದಿಗೆ ಪರಿಸರ ಸಂರಕ್ಷಣೆ, ಉರುವಲು ಕಟ್ಟಿಗೆ ಬಳಕೆ ಮಿತಿಗೊಸುವುದು, ಹೊಗೆರಹಿತ ಅಡುಗೆ ಮನೆ ಹಾಗೂ ಸಾವಯವ ಗೊಬ್ಬರವನ್ನು ಗ್ರಾಮೀಣ ಭಾಗದ ರೈತ ಫಲಾನುಭವಿಗಳಿಗೆ ಒದಗಿಸಲು ಕಾರ್ಯೋನ್ಮುಖವಾಗಿದೆ.
ಕುಟುಂಬ ಗಾತ್ರದ ಗೊಬರಗ್ಯಾಸ ಸ್ಥಾವರ ನಿರ್ಮಾಣಕ್ಕೆ ಅಂದಾಜು 29000/- ವೆಚ್ಛ ತಗುಲುತ್ತಿದ್ದು ಸರ್ಕಾರದಿಂದ 15000/- ಸಹಾಯಧನ ಲಭ್ಯವಿರುತ್ತದೆ ಉಳಿದ ವೆಚ್ಛವಾದ 14000/-ಗಳನ್ನು ಫಲಾನುಭವಿಗಳು ಭರಿಸಿ 2-3 ವರ್ಷದ ಅವದಿsಯಲ್ಲಿ ಹೂಡಿಕೆ ಮೊತ್ತದ ಅನಿಲವನ್ನು ಪಡೆಯುವುದರೊಂದಿಗೆ ಮುಂದಿನ ವರ್ಷಗಳಲ್ಲಿ ಉಚಿತವಾಗಿ ಅಡುಗೆ ಅನಿಲವನ್ನು ಬಳಸಿಕೊಳ್ಳಬಹುದಾಗಿದೆ ಈ ಕುರಿತಂತೆ ಜಿಲ್ಲೆಯಲ್ಲಿ ಕಾರ್ಯನಿರತ ಅನುಮೋದಿತ ಟರ್ನ್ ಕೀ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಜೈವಾನಿಲ ಸ್ಥಾವರಗಳನ್ನು ನಿರ್ಮಿಸಿಕೊಡುತಿದ್ದು ಆಸಕ್ತ ಫಲಾನುಭವಿಗಳು ಇವರನ್ನು ಸಂಪರ್ಕಿಸಬಹುದಾಗಿದೆ.
ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಅವದಿsಯಲ್ಲಿ 11,518 ಜೈವಾನಿಲ ಅನಿಲ ಸ್ಥಾವರಗಳನ್ನು ಗ್ರಾಮೀಣ ರೈತ ಫಲಾನುಭವಿಗಳಿಗೆ ಕಲ್ಪಿಸಿಕೊಟ್ಟಿದ್ದು ಇದರಲ್ಲಿ ಪ್ರತಿಶತ ಶೇ.90 ಜೈವಾನಿಲ ಸ್ಥಾವರಗಳು ಶೌಚಾಲಯ ಸಂಪರ್ಕ ಹೊಂದಿರುವುದರಿಂದ ಹೆಚ್ಚಿನ ಅನಿಲ ಉತ್ಪಾದನೆಯ ಲಾಭವನ್ನು ಫಲಾನುಭವಿಗಳು ಪಡೆಯುತಿದ್ದು ಪ್ರಸಕ್ತ ಸಾಲಿನಲ್ಲಿಯು ಸಹ ಗ್ರಾಮೀಣ ಭಾಗದ ರೈತರು ಇದರ ಸದುಪಯೋಗ ಹೊಂದಲು ಬೆಳಗಾವಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅದಿsಕಾರಿಗಳಾದ ರಾಮಚಂದ್ರನ್. ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  Call for CEO for alternative fuel use

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.