ಉತ್ತಮ ಸಮಾಜಕ್ಕಾಗಿ

ಸೌಹಾರ್ದ ಸಹಕಾರಿಗಳಿಗೆ ನೀಡುರುವ ಪ್ರತ್ಯೇಕ ದಾವಾ ನ್ಯಾಯಾಲಯದ ಲಾಭ ಪಡೆಯಲು ಕರೆ.

Call to take advantage of a separate Dawa court for friendly co-operatives.

0

ಸಾಲ ವಸೂಲಾತಿ, ದಾವಾ ದಾಖಲಾತಿ, ಚುನಾವಣೆ ವಿಷಯದ ಕಾರ್ಯಾಗಾರದಲ್ಲಿ ಭಾಸ್ಕರ ಹೆಗಡೆ ಕಾಗೇರಿ ಸಲಹೆ
ಬೆಳಗಾವಿ  (news belgaum) ನಗರದ ಮಧುಬನ ಹೋಟಲ ಗೋವಾವೇಸದಲ್ಲಿ ದಿನಾಂಕ: 08.06.2018ರಂದು ಬೆಳಗಾವಿ ಜಿಲ್ಲೆಯ ಖಾನಾಪೂರ, ಗೋಕಾಕ, ರಾಮದುರ್ಗ, ಸವದತ್ತಿ, ಬೈಲಹೊಂಗಲ ಮತ್ತು ಬೆಳಗಾವಿ ತಾಲೂಕಿನಲ್ಲಿಯ ಸೌಹಾರ್ದ ಸಹಕಾರಿಗಳಿಗಾಗಿ ಸುಸ್ಥಿ ಸಾಲ ವಸೂಲಾತಿ ಹಾಗೂ ದಾಖಲಾತಿ ಮತ್ತು ಚುನಾವಣೆ ವಿಷಯದ ಕುರಿತು ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉತ್ತರ ಕನ್ನಡ ಜಿಲ್ಲೆಯ ಡಿ.ಸಿ.ಸಿ ಬ್ಯಾಂಕ ಉಪಾಧ್ಯಕ್ಷರಾದ ಭಾಸ್ಕರ ಹೆಗಡೆ ಕಾಗೇರಿಯವರು ಉದ್ಘಾಟಿಸಿ ಮಾತನಾಡುತ್ತ ರಾಜ್ಯದಲ್ಲಿ ಅತೀ ಹೆಚ್ಚು ಸಹಕಾರಿಗಳು ಬೆಳಗಾವಿ ಜಿಲ್ಲೆಯಲ್ಲಿದ್ದು ಅವುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಆದರೇ ಕೆಲವೊಂದು ಸಹಕಾರಿಗಳಲ್ಲಿ ಹಲವಾರು ವರ್ಷಗಳಿಂದ ಸಾಲ ವಸೂಲಿಯ ಬಗ್ಗೆ ಯಾವುದೇ ಕಾನೂನು ಕ್ರಮವನ್ನು ಕೈಕೊಂಡಿರುವುದಿಲ್ಲ. ಹೀಗಾಗಿ ಸೌಹಾರ್ದ ಸಹಕಾರಿಗಳು ಕೂಡಲೇ ಸುಸ್ಥಿ ಸದಸ್ಯರ ಮೇಲೆ ಕಾನೂನು ಕ್ರಮವನ್ನು ಕೈಕೊಂಡು ವಸೂಲಿ ಮಾಡಬೇಕಾಗಿರುತ್ತದೆ ಇಲ್ಲವಾದಲ್ಲಿ ಸಹಕಾರಿಗಳು ಲಾಭದಿಂದ ನಷ್ಠಕ್ಕೆ ಹೊಗುತ್ತದೆ. ಸೌಹಾರ್ದ ಸಹಕಾರಿಗಳ ಅನುಕೂಲಕ್ಕಾಗಿ ಪ್ರತ್ಯೇಕ ದಾವಾ ಪಂಚಾಯಿತ ನ್ಯಾಯಾಲಯವನ್ನು ಸರ್ಕಾರವು ನೀಡಿದ್ದು ಅದರ ಲಾಭವನ್ನು ಸಹಕಾರಿಗಳ ಪಡೆದುಕೊಳ್ಳಬೆಕೆಂದು ತಿಳಿಸಿದರು.
ಸದರಿ ತರಬೇತಿ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಸಂಯುಕ್ತ ಸಹಕಾರಿಯ ವಿಭಾಗೀಯ ಅಧಿಕಾರಿಯಾದ ಶ್ರೀಕಾಂತ ಬರುವೆ ಮತನಾಡುತ್ತ ಬೆಳಗಾವಿ ಜಿಲ್ಲೆಯ ಸೌಹಾರ್ದ ಸಹಕಾರಿಗಳು ಸರಿಯಾದ ವೇಳೆ ಚುನಾವಣೆ ಜರುಗಿಸದೇ ಇರುವುದರಿಂದ ಸಂಯುಕ್ತ ಸಹಕಾರಿಯು ವಿಶೇಷಾಧಿಕಾರಿಯನ್ನು ನೇಮಕ ಮಾಡಲಾಗುತ್ತಿದೆ. ಹೀಗಾಗಿ ಸಹಕಾರಿಗಳು ಅವಧಿಯೊಳಗೆ ಚುನಾವಣೆಯನ್ನು ಜರುಗಿಸಲು ಕ್ರಮ ಕೈಕೊಳ್ಳಬೇಕು ಮತ್ತು ಸಂಯುಕ್ತ ಸಹಕಾರಿಗೆ ಪ್ರತ್ಯೇಕ ದಾವಾ ದಾಖಲಾತಿ ನ್ಯಾಯಾಲಯವನ್ನು ನೀಡಿದ್ದು ಅವರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಹಕಾರಿಗಳಿಗೆ ತಿಳಿಸಿ ಪ್ರಸ್ತಾವಿಕವಾಗಿ ನುಡಿದರು.
ವೇದಿಕೆ ಮೇಲೆ ಸುಕೋ ಬ್ಯಾಂಕಿನ ಚೀಪ್ ಜನರಲ್ ಮ್ಯಾನೇಜರಾದ ಆಗ್ನೀಹೊರ್ತಿ ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಂಯುಕ್ತ ಸಹಕಾರಿಯ ಕಿರಿಯ ಅಧಿಕಾರಿಯಾದ ದರ್ಶನ ಕೆ ಮತ್ತು ವಂದಾನರ್ಪಣೆಯನ್ನು ಸಂಯುಕ್ತ ಸಹಕಾರಿಯ ಸಹಾಯಕರಾದ ವೆಂಕಟೇಶ ಇವರು ನಡೆಸಿಕೊಟ್ಟರು.Call to take advantage of a separate Dawa court for friendly co-operatives.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.