ಉತ್ತಮ ಸಮಾಜಕ್ಕಾಗಿ

ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಕ್ಕೆ ಸಿಗದ ಇನ್ನೋವಾ ಗೋಡೆಗೆ ಅಪ್ಪಳಿಸಿ ದುರಂತ

The car was torn and crashed into the Innova wall without getting into the driver's control

0

ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ರಸ್ತೆ ಅಪಘಾತದಲ್ಲಿ ಸಾವು

ಬೆಳಗಾವಿ/ (news belagavi)ಬಾಗಲಕೋಟ: ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ತುಳಸಿಗೇರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ಸೋಮವಾರ ಬೆಳಿಗ್ಗೆ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ(70) ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ 4ರ ಸುಮಾರಿಗೆ ನಡೆದ ಅಪಘಾತದಲ್ಲಿ ಅವರ ಇನ್ನೊವಾ ನಜ್ಜುಗುಜ್ಜಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಅವರ ಮೃತದೇಹವನ್ನು ಬಾಗಲಕೋಟ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು.News Belgaum-ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಕ್ಕೆ ಸಿಗದ ಇನ್ನೋವಾ ಗೋಡೆಗೆ ಅಪ್ಪಳಿಸಿ ದುರಂತ 4
News Belgaum-ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಕ್ಕೆ ಸಿಗದ ಇನ್ನೋವಾ ಗೋಡೆಗೆ ಅಪ್ಪಳಿಸಿ ದುರಂತ 1ದೆಹಲಿಯಿಂದ ಗೋವಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿದ್ದು ನ್ಯಾಮಗೌಡ ಅವರು ಗೋವಾದಿಂದ-ಜಮಖಂಡಿಗೆ ತೆರಳುತ್ತಿದ್ದ ಅವರು ಮನೆ ತಲುಪುವ ಇನ್ನೇನು ಅರ್ಧ ಗಂಟೆ ಮುಂಚೆಯೇ ಸಾವಿಗೀಡಾಗಿದ್ದಾರೆ. ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಕ್ಕೆ ಸಿಗದ ಇನ್ನೋವಾ ಗೋಡೆಗೆ ಅಪ್ಪಳಿಸಿ ದುರಂತ ನಡೆದಿದ್ದು, ಅವರ ಎದೆಗೆ ಭಾರಿ ಪೆಟ್ಟಾಗಿತ್ತು ಎನ್ನಲಾಗಿದೆ. ಬಾಗಲಕೋಟ ಜಿಲ್ಲಾಸ್ಪತ್ರೆ ಶವಗಾರದಿಂದ ಮರಣೋತ್ತರ ಪರೀಕ್ಷೆ ನಂತರ ಬೆಳಗಿನ 7:30ಕ್ಕೆ ಕುಟುಂಬಸ್ಥರಿಗೆ ಶವ ಹಸ್ತಾಂತರಿಸಲಾಯಿತು.
ಮಾಜಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವ ರಾಗಿದ್ದ ಸಿದ್ದು ನ್ಯಾಮಗೌಡ ಹುಟ್ಟು ಹೋರಾಟಗಾರ ಆಗಿದ್ದರು. ರಾಮಕೃಷ್ಣ ಹೆಗಡೆ ಅವರನ್ನು ಸಂಸತ್ತಿನ ಚುನಾವಣೆಯಲ್ಲಿ ಸೋಲಿಸಿದ್ದ ಅವರ ರಾಜಕೀಯ ವರ್ಚಸ್ಸು ದೊಡ್ಡದು. ನೀರಾವರಿಗಾಗಿ ಕೃಷ್ಣಾ ತೀರದಲ್ಲಿ ಬ್ಯಾರೇಜಗಳನ್ನು ನಿರ್ಮಿಸಿ ಜನರ, ರೈತರ ನಾಯಕ ಅವರಾಗಿದ್ದರು, ನೀರಿನ ಮೂಲಕ ಹಸಿರು ಕ್ರಾಂತಿಗೆ ಪಣ ತೊಟ್ಟಿದ್ದ ಅವರು ರೈತರ ಬಾಳು ಹಸನು ಮಾಡಲು ಸತತ ಪ್ರಯತ್ನ ನಡೆಸಿದ್ದರು ಎಂದು ರಾಜ್ಯದ ಹಿರಿಯ ನಾಯಕರು ತಿಳಿಸಿದ್ದಾರೆ.The car was torn and crashed into the Innova wall without getting into the driver’s control

By: ಅಶೋಕ ಚಂದರಗಿ  ಜನರಿಂದ ಹಣ ಸಂಗ್ರಹಿಸಿ ‘ನೀರುಕ್ಕಿಸಿದ’ ರೈತಬಂಧು ಕಣ್ಮರೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಇಂದು ಸೋಮವಾರ ಬೆಳಗಿನ ಜಾವ ಬಾಗಲಕೋಟೆ ಸಮೀಪದ ತುಳಸಿಗೇರಿ ಹತ್ತಿರ ಸಂಭವಿಸಿದ ಕಾರ್ ಅಪಘಾತದಲ್ಲಿ ಅಸುನೀಗಿದ್ದಾರೆ. ದಿಲ್ಲಿಯಿಂದ ಗೋವೆಗೆ ನಿನ್ನೆ ರಾತ್ರಿ ಮರಳಿದ ಅವರು ಬಾಗಲಕೋಟೆಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
News Belgaum-ಕಾರಿನ ಟೈರ್ ಸಿಡಿದು ಚಾಲಕನ ನಿಯಂತ್ರಕ್ಕೆ ಸಿಗದ ಇನ್ನೋವಾ ಗೋಡೆಗೆ ಅಪ್ಪಳಿಸಿ ದುರಂತ 5ಎಂಭತ್ತರ ದಶಕದ ಕೊನೆಗೆ ಜಮಖಂಡಿ ತಾಲೂಕಿನ ರೈತರನ್ನು ಒಗ್ಗೂಡಿಸಿ ಚಿಕ್ಕಪಡಸಲಗಿ ಬಳಿ 8 ಮೀಟರ್ ಎತ್ತರದ ಹಾಗೂ 480 ಮೀಟರ್ ಅಗಲದ ಆಣೆಕಟ್ಟನ್ನು ಕಟ್ಟುವಲ್ಲಿ ಯಶಶ್ವಿಯಾದ ಸಿದ್ದು ಕರ್ನಾಟಕದಲ್ಲಿಯೇ ಒಂದು ಇತಿಹಾಸ ಬರೆದವರು.1985 ರಲ್ಲಿ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ರೈತರೊಂದಿಗೆ ಭೆಟಿಯಾಗಿದ್ದ ಸಿದ್ದು ಆಣೆಕಟ್ಟು ನಿರ್ಮಿಸುವ ತಮ್ಮ ಯೋಜನೆಯನ್ನು ಮುಂದಿಟ್ಟರು. 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗುವ ಆಣೆಕಟ್ಟು ಕಟ್ಟಲು ಸರಕಾರದ ಅನುಮತಿ ಕೋರಿದರು. ಮೊದಲು ಕನಿಷ್ಠ 5 ಲಕ್ಷ.ರೂ.ಸಂಗ್ರಹಿಸಿ ತೋರಿಸಲು ಹೆಗಡೆ ತಿಳಿಸಿದರು. ಒಂದೇ ವಾರದಲ್ಲಿ ಸಿದ್ದು ಹೆಗಡೆಯವರಿಗೆ “ಕೃಷ್ಣಾ ತೀರದ ರೈತ ಸಂಘದ” ಪಾಸ್ ಬುಕ್ ತೋರಿಸಿ 5 ಲಕ್ಷ ಬ್ಯಾಲನ್ಸ ತೋರಿಸಿಬಿಟ್ಟರು!
27 ಗ್ರಾಮಗಳ ರೈತರು ಎಕರೆಗೆ 500 ರೂ.ದಂತೆ ವಂತಿಗೆ ನೀಡಿದರು. ಬೆಳಗಾವಿ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದ ಅಮರಸಿಂಹ ಪಾಟೀಲರು ಪರಿಷತ್ ಸಭೆಯಲ್ಲಿ ನಿರ್ಣಯ ಪಾಸ್ ಮಾಡಿ 5 ಲಕ್ಷ ವಂತಿಗೆ ನೀಡಿದರು. ಕೇಂದ್ರ ಸರಕಾರದ “ಕಪಾರ್ಟ” ಸಹ 28 ಲಕ್ಷ ರೂ.ಅನುದಾನ ನೀಡಿತು. ಕೊನೆಗೂ ಸಿದ್ದು ಡ್ಯಾಮ್ ಕಟ್ಟಿಯೇ ಬಿಟ್ಟರು! ಇದು ರಾಜ್ಯದಲ್ಲಿಯೇ ಒಂದು ಇತಿಹಾಸವಾಯಿತು.
ಮುಂದೆ 1991 ರಲ್ಲಿ ರಾಮಕೃಷ್ಣ ಹೆಗಡೆ ಅವರು ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸಿದರು. ಹೆಗಡೆ ವಿರುದ್ಧ ಯಾರು? ಎಂಬ ಪ್ರಶ್ನೆ ಬಂತು. ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಸಿದ್ದು ಹೆಸರು ಮುನ್ನೆಲೆಗೆ ಬಂತು. ಹೆಗಡೆ ಅವರು ಸಿದ್ದು ಕೈಯಲ್ಲಿ 22 ಸಾವಿರ ಮತಗಳಿಂದ ಪರಾಭವಗೊಂಡರು. ರೈತ ನಾಯಕನಾಗಿ ಬೆಳೆದ ಸಿದ್ದು ಇಂದು ನಮ್ಮನ್ನಗಲಿದ್ದಾರೆ. ಆದರೆ ಅವರು ಕಟ್ಟಿದ ಚಿಕ್ಕಪಡಸಲಗಿ ಡ್ಯಾಮ್ ನಿಂದ ರೈತರ ಬದುಕು ಹಸನಾಗಿದ್ದು ಆ ಭಾಗದ ಜನರಲ್ಲಿ ಸದಾ ಹಸಿರಾಗಿ ಉಳಿಯಲಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.