ಉತ್ತಮ ಸಮಾಜಕ್ಕಾಗಿ

ದಂಡುಮಂಡಳಿಗೆ ಅನುದಾನ ನೀಡುವಂತೆ ಸಿಇಓ ದಿವ್ಯಾ ಶಿವರಾಮ, ಸಚಿವರಿಗೆ ಮನವಿ

CEO Divya Shivarama urges ministers to grant grants dandumandali

0

ಬೆಳಗಾವಿ: (news belagavi)  ಬೆಳಗಾವಿ ಕಾಂಟೊನ್ಮೆಂಟ್ ಗೆ ರಾಜ್ಯ ಹಣಕಾಸು ಆಯೋಗದಿಂದ ಅನುದಾನ ಹಣ ಒದಗಿಸುವಂತೆ ದಂಡುಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO) ದಿವ್ಯಾ ಶಿವರಾಮ ಇಂದು ಮನವಿ ಸಲ್ಲಿಸಿದ್ದಾರೆ. ರಾಜ್ಯದ ಸ್ಥಳೀಯ(Local Bodies) ಸಂಸ್ಥೆಗಳಂತೆಯೇ ಕಳೆದ ವರ್ಷ ಜು. 28ಕ್ಕೆ ಬೆಳಗಾವಿ ಕೇಂದ್ರಿಯ ಕಾಂಟೊನ್ಮೆಂಟ್ ಬೋರ್ಡನ್ನು ಪರಿಗಣಿಸಲಾಗಿತ್ತು. ಆದುದರಿಂದ ರಾಜ್ಯ ಹಣಕಾಸು ಆಯೋಗದಿಂದ ಅನುದಾನ (Grant) ಒದಗಿಸುವಂತೆ ಸಿಇಓ ದಿವ್ಯಾ ಶಿವರಾಮ ಇಂದು ಸಚಿವ ರಮೇಶ ಜಾರಕಿಹೊಳಿ ಅವರನ್ನು ಸರ್ಕ್ಯೂಟ್ ಹೌಸನಲ್ಲಿ ಭೇಟಿ ಆಗಿ ಮನವಿ ಸಲ್ಲಿಸಿದರು.

ದಂಡುಮಂಡಳಿಗೆ ಅನುದಾನ ನೀಡುವಂತೆ ಸಿಇಓ ದಿವ್ಯಾ ಶಿವರಾಮ, ಸಚಿವರಿಗೆ ಮನವಿ- Tarun kranti
ರಾಜ್ಯದ ಇತರ ನಗರಸಭೆಗಳಿಗೆ ಹಣಕಾಸು ಅನುದಾನ ಕೊಡುವಂತೆಯೇ ಬೆಳಗಾವಿ ಕಾಂಟೊನ್ಮೆಂಟ್ ಸಹ ತನ್ನ ಗ್ರ್ಯಾಂಟ್ ಪಡೆಯಲು, ಪೌರಾಡಳಿತ ನಿರ್ದೇಶನಾಲಯದ ಆದೇಶದ ಪ್ರಕಾರವೇ ಅರ್ಹತೆ ಪಡೆದಿದೆ. ಪೌರಾಡಳಿತ ನಿರ್ದೇಶನಾಲಯದ ಆದೇಶ ಇದ್ದಾಗಲೂ ಸಹ ದಂಡುಮಂಡಳಿಗೆ ಯಾವುದೇ ಅನುದಾನ ಇಲ್ಲಿಯವರೆಗೆ ಬಂದಿಲ್ಲ ಎಂದು ದಿವ್ಯಾ ಶಿವರಾಮ ಸಚಿವರ ಗಮನ ಸೆಳೆದಿದ್ದಾರೆ.

ದಂಡುಮಂಡಳಿಗೆ ಅನುದಾನ ನೀಡುವಂತೆ ಸಿಇಓ ದಿವ್ಯಾ ಶಿವರಾಮ, ಸಚಿವರಿಗೆ ಮನವಿ- Tarun kranti 1
ಬೆಳಗಾವಿ ಕಾಂಟೊನ್ಮೆಂಟ್ ಗೆ ರಾಜ್ಯ ಪೌರಾಡಳಿತ ಇಲಾಖೆಯಿಂದ ಅನುದಾನ ಕೊಡಿಸುವುದಾಗಿ ಸಚಿವ ರಮೇಶ ಜಾರಕಿಹೊಳಿ ಈ ವೇಳೆ ಭರವಸೆ ನೀಡಿದ್ದಾರೆ. ದಂಡುಮಂಡಳಿ ಉಪಾಧ್ಯಕ್ಷ ಸಾಜೀದ್ ಶೇಖ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿ ಪ್ರವೀಣ ಬಾಗೇವಾಡಿ, ಎಂಎಲ್ಸಿ ವಿವೇಕರಾವ ಪಾಟೀಲ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.