ಉತ್ತಮ ಸಮಾಜಕ್ಕಾಗಿ

ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ಮಕ್ಕಳನ್ನೊ ಕೆಲಸಕೆ :ನೇಮಿಸಿಕೋಳ್ಳೊತ್ತಿರಾ ಹಾಗಾದರೆ ಮುಂದೆನಿದೆ

news belagavi

0

ಬೆಳಗಾವಿ: (news belgaum)ಬೆಳಗಾವಿ ನಗರದಲ್ಲಿ ಆಗಸ್ಟ್ 27 (ಸೋಮವಾರ) ರಂದು ಕಾರ್ಮಿಕ ಇಲಾಖೆ ನೇತೃತ್ವದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ದಾಳಿಯನ್ನು ಕೈಗೊಂಡು ಗಾಂಧಿ ನಗರ, ಕೆ.ಎಲ್.ಇ ರಸ್ತೆ, ಗ್ಯಾಂಗವಾಡಿ, ಖಡೆ ಬಜಾರ್ ಹಾಗೂ ಇತರ ಪ್ರದೇಶಗಲ್ಲಿ ಒಟ್ಟು 07 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಯವರ ಸುಪರ್ದಿಗೆ ವಹಿಸಲಾಗಿದೆ.
ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರಗಳ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ಪೋಲಿಸ್ ಘಟಕ ಹಾಗೂ ಮಕ್ಕಳ ಸಹಾಯವಾಣಿ (1098) ಸಿಬ್ಬಂದಿಗಳನ್ನೊಳಗೊಂಡ “ಜಿಲ್ಲಾ ಬಾಲಕಾರ್ಮಿಕ ವಿಚಕ್ಷಣ ದಳ” ಜಂಟಿಯಾಗಿ ನಡೆಸಿದ ತಪಾಸಣೆಯಲ್ಲಿ ಈ ಮಕ್ಕಳನ್ನು ರಕ್ಷಿಸಲಾಗಿದೆ.
ಅಗಸ್ಟ 27 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ 3 ತಂಡಗಳಾಗಿ ಏಕಕಾಲಕ್ಕೆ ಬಾಲಕಾರ್ಮಿಕ ದಾಳಿಯನ್ನು ಆರಂಬಿಸಿದ ತಂಡ ನಗರದ ವಿವಿಧ ಪ್ರದೇಶಗಳಲ್ಲಿ ವಿವಿಧ ಉದ್ದಿಮೆಗಳಲ್ಲಿ ದುಡಿಯುತ್ತಿದ್ದ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದೆ. ಕಾಯ್ದೆಯಡಿ ನೇಮಕಗೊಂಡ ನೀರಿಕ್ಷಕರು ಪರಿಶೀಲಿಸಿ ಕ್ರಮ ವಹಿಸುವರು.
News Belgaum-ಬೆಳಗಾವಿ ನಗರದಲ್ಲಿ ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ ದಾಳಿ: ಏಳು ಮಕ್ಕಳ ರಕ್ಷಣೆ 1ದಾಳಿಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಾದ ಡಿ.ಜಿ.ನಾಗೇಶ್, ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಉಪ ನಿರ್ದೇಶಕರಾದ ರವೀಂದ್ರ ರಾಥೋಡ, ಕಾರ್ಮಿಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಜೋಗೂರ, ಶ್ರೀಕಾಂತ ಪಾಟೀಲ, ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಎಪ್.ಬಿ.ನದಾಫ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಸಿಸ್ಟರ್ ಲೂರ್ದ ಮೇರಿ, ಹಿರಿಯ ಕಾರ್ಮಿಕ ನಿರೀಕ್ಷಕರುಗಳಾದ ಅನೀಲ ಬಗಟಿ, ಅಡಿವೆಪ್ಪ ಗಡದವರ, ಶ್ರೀಮತಿ ಡಿ.ಎಮ್.ವಿನುತಾ, ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ, ಯೋಜನಾ ವ್ಯವಸ್ಥಾಪಕರಾದ ಉಮೇಶ್ವರ ಮರಗಾಲ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಎಪ್ ಎಸ್ ಪಾಟೀಲ, ಕಂದಾಯ ನಿರೀಕ್ಷಕರುಗಳಾದ ಎಂ.ಎಂ. ದಾರವಾಡಕರ, ಪಿ.ಬಿ ಮೇತ್ರಿ, ವಿ.ಎ ಬುಡವಿ, ಶಿಕ್ಷಣ ಇಲಾಖೆಯ ಆರ್.ಜಿ ಚಳಗೇರಿ, ಮಕ್ಕಳ ಪೋಲಿಸ್ ಘಟಕದ ಮುತ್ನಾಳ, ಬಳಗಣ್ಣವರ, ಪಾಟೀಲ, ಮಕ್ಕಳ ಸಹಾಯವಾಣಿ (1098) ಯ ಎಸ್ ಎಸ್ ಹಿರೇಮಠ, ರಾಜು ಬೊಜೆಪ್ಪಗೋಳ, ಬಸವರಾಜ ನಿರ್ವಾಣಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.
ವಿಶೇಷ ಸೂಚನೆ:
ಬಾಲಕಾರ್ಮಿಕ ಮತ್ತು ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 2016 ರಂತೆ 14 ವರ್ಷ ತುಂಬದ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಹಾಗೂ 15 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಕ ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಇದನ್ನು ಉಲ್ಲಂಘಿಸಿ ನೇಮಕ ಮಾಡಿಕೊಂಡ ತಪ್ಪಿತಸ್ಥ ಮಾಲೀಕರು ರೂ 20,000/- ರಿಂದ 50,000/- ವರೆಗೆ ದಂಡ ಅಥವಾ 2 ವರ್ಷದವರೆಗ ಜೈಲು ಶಿಕ್ಷೆ ಅಥವಾ ದಂಡ ಮತ್ತು ಶಿಕ್ಷೆ ಎರಡಕ್ಕೂ ಒಳಗಾಗುತ್ತಾರೆ. ಬಾಲಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರು ದುಡಿಯುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ 1098 ಗೆ ಉಚಿತವಾಗಿ ಕರೆ ಮಾಡಲು ಕೋರಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.