ಉತ್ತಮ ಸಮಾಜಕ್ಕಾಗಿ

CJI, Governor & CM ಘನತೆವೆತ್ತ ರಾಷ್ಟ್ರಪತಿ,: ಸೆ. 15ಕ್ಕೆ ಬೆಳಗಾವಿಗೆ…!

news belagavi

0

ಬೆಳಗಾವಿ:(news belagavi) ಸೆ. 15ಕ್ಕೆ ಘನತೆವೆತ್ತ ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ದೇಶದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು KLS ಅಮೃತ ಮಹೋತ್ಸವ & ‘ಬೆಳಗಾವಿ ಬ್ರಾಂಡ್’ ಗೆ ಆಗಮಿಸಲಿದ್ದಾರೆ ಎಂದು ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ ತಿಳಿಸಿದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಕರ್ನಾಟಕ ಗವರ್ನರ್ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಆಗಮಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಇ. ಎಸ್. ವೆಂಕಟರಾಮಯ್ಯ ಮತ್ತು ಕೆ. ಕೆ. ವೇಣುಗೋಪಾಲ, ದಿ. ಜ. ಮಳಿಮಠ ನಮ್ಮ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದರು. ಗೋಗಟೆ ತಾಂತ್ರಿಕ ವಿವಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ದೇಶದ ಮುಖ್ಯ ನ್ಯಾಯಮೂರ್ತಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಕಾರಿನಲ್ಲಿ ಬೆಳಗಾವಿಗೆ ಬರಲಿದ್ದಾರೆ. ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿ ಎಂಪಿ ಸುರೇಶ ಅಂಗಡಿ ಅವರು ರಾಷ್ಟ್ರಪತಿ ಮತ್ತು ಮುಖ್ಯ ನ್ಯಾಯಮೂರ್ತಿ ಅವರನ್ನು ಆಹ್ವಾನಿಸಲು ಶ್ರಮಿಸಲಿದ್ದಾರೆ ಎಂದರು. ಜಿಲ್ಲಾಡಳಿತ ದೇಶದ ಮಹಾಮುಖ್ಯಸ್ಥನನ್ನು ಆಹ್ವಾನಿಸಲು ಸಕಲ ಸಿದ್ದತೆ ನಡೆಸಿರುವುದು ಗಮನಾರ್ಹ ಎಂದರು. ದೇಶದ ರಾಷ್ಟ್ರಪತಿ ಮತ್ತು ಮುಖ್ಯ ನ್ಯಾಯಮೂರ್ತಿ ಹಾಗೂ ಗಣ್ಯಾತಿಗಣ್ಯರನ್ನು ಕರೆಸುವಷ್ಟು ಬೆಳಗಾವಿ ನಗರದ ಸ್ವರೂಪ ‘ಗೌರವ’ ತಂದುಕೊಡುವಂತೆ ಇದೆಯೇ ಎಂದು ಪತ್ರಕರ್ತರು ಸಂಸದ ಸುರೇಶ ಅಂಗಡಿ ಅವರನ್ನು ಪ್ರಶ್ನಿಸಿ ತಬ್ಬಿಬ್ಬುಗೊಳಿಸಿದರು. ಬೆಳಗಾವಿ ನಗರ ದುಸ್ಥಿತಿಯ ಆಗರವಾಗಿದೆ ಎಂದು ಗಮನ ಸೆಳೆಯಲಾಯಿತು.
ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಜನ ಆಗಮಿಸಲಿದ್ದಾರೆ. ಬೆಳಗಾವಿ ನಗರ ಮತ್ತು ಜಿಲ್ಲೆಯ ಶ್ರೀಮಂತ ಇತಿಹಾಸದ ಅನಾವರಣ ಪರಿಚಯ ರಾಷ್ಟ್ರಪತಿ ಅವರಿಗೆ ನೀಡಲಾಗಿದೆ ಎಂದರು. ಸಂಸದ ಸುರೇಶ ಅಂಗಡಿ, ಎಂ. ಆರ್. ಕುಲಕರ್ಣಿ, ಮುತಾಲಿಕ ದೇಸಾಯಿ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.