ಉತ್ತಮ ಸಮಾಜಕ್ಕಾಗಿ

ಸ್ವಚ್ಛತೆ ಮತ್ತು ಪರಿಸರ ಬೆಳವಣಿಗೆಗೆ ಪಣ ತೊಡಿ: ವಿದ್ಯಾರ್ಥಿಗಳಿಗೆ ಸಿಇಓ ರಾಮಚಂದ್ರನ್ ಕರೆ

Clean up for cleanliness and environmental growth: CEO Ramachandran calls for students

0

ಬೆಳಗಾವಿ:  (news belgaum) ಶಾಲಾ ವಿದ್ಯಾರ್ಥಿ ದಿಸೆಯಿಂದಲೇ ತಮ್ಮ ಪರಿಸರ ಸ್ವಚ್ಚತೆ ಇಟ್ಟುಕೊಳ್ಳುವ ಹವ್ಯಾಸ ಬೆಳಿಸಿಕೊಂಡರೆ ಸ್ವಚ್ಛ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಪಂ. ಸಿಇಓ ಆರ್.ರಾಮಚಂದ್ರನ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಅವರು ತಾಲೂಕಿನ ಹೊಸವಂಟಮೂರಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನವ್ಯದಿಶಾ ಸಂಸ್ಥೆ, ಗ್ರಾಮ ಪಂಚಾಯತಿ ಹಾಗೂ ಸುಗ್ರಾಮ ಯುವಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ವೈಯಕ್ತಿಕ ಸ್ವಚ್ಚತಾ ಸಾಮಗ್ರಿಗಳ ಕಿಟ್ ವಿತರಣೆ ಸಂದರ್ಭ ಮಾತನಾಡಿದರು. ಶಾಲಾಮಕ್ಕಳಿಗೆ ಹಾಲಿನ ಲೊಟ ವಿತರಣಾ ಕಾರ್ಯಕ್ರಮದಲ್ಲಿ ಶಾಲಾ ಆವರಣದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಸಿಇಓ ಚಾಲನೆ ನೀಡಿದರು.

ಸ್ವಚ್ಛತೆ ಮತ್ತು ಪರಿಸರ ಬೆಳವಣಿಗೆಗೆ ಪಣ ತೊಡಿ: ವಿದ್ಯಾರ್ಥಿಗಳಿಗೆ ಸಿಇಓ ರಾಮಚಂದ್ರನ್ ಕರೆ- Tarun kranti
ಮಕ್ಕಳು ವೈಯಕ್ತಿಕ ಸ್ವಚ್ಚತೆಯ ಜತೆಗೆ ತಮ್ಮ ಪರಿಸರದ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಪರಿಸರ ರಕ್ಷಣೆಯಿಂದ ನಮ್ಮ ಆರೋಗ್ಯ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು. ಮರ ಗಿಡಗಳನ್ನು ಕಾಪಾಡುವುದರ ಮೂಲಕ ನಮ್ಮ ಮುಂದಿನ ಜನಾಂಗಕ್ಕೆ ಪರಿಸರ ಉಳಿಸಬೇಕು ಎಂದರು. ಜಿಪಂನ ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುಂಡಲೀಕ ಅನವಾಲ, ಮಲ್ಲಿಕಾರ್ಜುನ ಕಲಾದಗಿ, ಅರ್ಜುನ ಕಡಟ್ಟಿ, ಡಾ. ಅಶೋಕ ಡಿಸೋಜಾ, ನಸ್ರೀನ್ ಅನ್ಸಾರಿ, ಪಿಡಿಒ ಪ್ರಶಾಂತ ಮುನವಳ್ಳಿ, ನವ್ಯ ದಿಶಾ ಯೋಜನಾಧಿಕಾರಿ ಮಹಾದೇವ ಪಾಟೀಲ, ನವ್ಯ ದಿಶಾ ಅಭಿವೃದ್ಧಿ ಅಧಿಕಾರಿಗಳಾದ ರಾಜಶೇಖರ ಮಠ, ಶಿವಕುಮಾರ ಹಲ್ಯಾಳ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.