ಉತ್ತಮ ಸಮಾಜಕ್ಕಾಗಿ

CM ಪೂರ್ಣಾವಧಿಯ ಬಗ್ಗೆ ಜೆಡಿಎಸ್ ನಾಯಕರಲ್ಲೇ ಸಂಶಯಗಳು: ಫೈನಲ್ ಮಾತು ರಾಹುಲ್ ಗಾಂಧಿಯದೇ ಹೊರತು “ಲೋಕಲ್” ವೆಂಕ,ಶೀನಾ,ನಾಣಿಯದಲ್ಲ!

JDS leaders suspect CM's full term: Final talk Rahul Gandhi, except "Lokal" Venka, Sheena, not folk!

0

ವಿಶೇಷ ಬರಹ: ಅಶೋಕ್ ಚಂದರಗಿ (news belgaum)

“ಒಂದು ವರ್ಷ ಕಾಲ ನನ್ನನ್ನು ಟಚ್ ಮಾಡುವದು ಯಾರಿಂದಲೂ ಸಾಧ್ಯವಿಲ್ಲ” ಎಂದು ಸಿಎಮ್ ಕುಮಾರಸ್ವಾಮಿ ಅವರು ಹೇಳಿದ ಬೆನ್ನಲ್ಲೇ ಜೆಡಿಎಸ್ ಪರಮೋಚ್ಛ ನಾಯಕ ದೇವೇಗೌಡರು ನಿನ್ನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ “ಒಂದು ವರ್ಷದ ನಂತರ ಕುಮಾರಸ್ವಾಮಿ ಸರಕಾರಕ್ಕೆ ಏನಾಗುತ್ತದೊ ಗೊತ್ತಿಲ್ಲ” ಎಂದು ಹೇಳುವ ಮೂಲಕ ತಮ್ಮ ಪುತ್ರನ “ಆತಂಕ” ಕ್ಕೆ ಧ್ವನಿಗೂಡಿಸಿದ್ದಾರೆ. ನಿನ್ನೆ ಶನಿವಾರವೇ ಮತ್ತೊಬ್ಬ ಜೆಡಿಎಸ್ ನಾಯಕ ಶ್ರೀ ಬಸವರಾಜ ಹೊರಟ್ಟಿಯವರು ಹುಬ್ಬಳ್ಳಿಯಲ್ಲಿ ಮಾತನಾಡಿ, ಕಾಂಗ್ರೆಸ್ಸಿಗರು ವಿಧಿಸುತ್ತಿರುವ ಶರತ್ತುಗಳನ್ನು ನೋಡಿದರೆ, ನೀಡುತ್ತಿರುವ ಕಿರುಕಳ ನೋಡಿದರೆ ಕುಮಾರಸ್ವಾಮಿ ಸರಕಾರ ಐದು ವರ್ಷ ಪೂರೈಸುವದೇ ಡೌಟು” ಎಂದಿದ್ದಾರೆ.

ಈ ನಾಯಕರು ವ್ಯಕ್ತಪಡಿಸಿರುವ ಈ ಸಂಶಯಗಳು ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಆರೋಪಿಗಳ ಸ್ಥಾನದಲ್ಲಿ ನಿಲ್ಲಿಸಿವೆ. ಉಭಯ ಪಕ್ಷಗಳ ಮಧ್ಯೆ ಖಾತೆ, ವರ್ಗಾವಣೆ ಸಂಬಂಧ ಕುಸ್ತಿ ನಡೆದಿರುವ ಬೆನ್ನಲ್ಲೇ ಬಜೆಟ್ ಮಂಡನೆ ವಿವಾದ ಈಗ ಹುಟ್ಟಿಕೊಂಡಿದೆ!

ಸಿಎಮ್ ಪೂರ್ಣಾವಧಿಯ ಬಗ್ಗೆ ಜೆಡಿಎಸ್ ನಾಯಕರಲ್ಲೇ ಸಂಶಯಗಳು: ಫೈನಲ್ ಮಾತು ರಾಹುಲ್ ಗಾಂಧಿಯದೇ ಹೊರತು “ಲೋಕಲ್” ವೆಂಕ,ಶೀನಾ,ನಾಣಿಯದಲ್ಲ!- Tarun kranti
ಇಂದು ದಿಲ್ಲಿಯಲ್ಲಿರುವ ಕುಮಾರಸ್ವಾಮಿ ಅವರು ರಾಹುಲ್ ಗಾಂಧಿ ಅವರನ್ನು ಭೆಟ್ಟಿಯಾಗಿ ರಾಜ್ಯದ ಕಾಂಗ್ರೆಸ್ ನಾಯಕರಿಂದ ಆಗುತ್ತಿರುವ “ಅಡಚಣಿ” ಗಳನ್ನು ವಿವರಿಸುವ ಸಾಧ್ಯತೆಯಿದೆ. ಅಲ್ಲದೇ ಸಿದ್ರಾಮಯ್ಯ ಅವರಿಂದ ಆಕ್ಷೇಪಕ್ಕೆ ಕಾರಣವಾಗಿರುವ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗಾಗಿ “ಗ್ರೀನ್ ಸಿಗ್ನಲ್” ಪಡೆಯಲಿದ್ದಾರೆ. ಇನ್ನು ಪ್ರತಿಯೊಂದು “ಅಡಚಣಿಗೂ” ರಾಹುಲ್ ಗಾಂಧಿ ಬಾಗಿಲು ಬಡೆಯುವ ಅನಿವಾರ್ಯತೆ ಕುಮಾರಸ್ವಾಮಿಯವರಿಗಿದೆ.

ಮೊದಲು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ “ಬೆಂಕಿ” ಕಾಣಿಸಿಕೊಂಡಾಗ ದೂರದ ಬದಾಮಿಯಲ್ಲಿ ವಾರ ಕಾಲ “ರೋಮ್ ಹೊತ್ತಿ ಉರಿಯುತ್ತಿರುವಾಗ ಪಿಟೀಲು ಬಾರಿಸಿದ ನೀರೋನಂತೆ”, ಮಜಾ ತೆಗೆದುಕೊಂಡ ಸಿದ್ರಾಮಣ್ಣ ಈಗ ಪ್ರಕೃತಿ ಚಿಕಿತ್ಸೆ ಕೇಂದ್ರದಲ್ಲಿ ವಿಶ್ರಾಂತಿಗಾಗಿ ಧರ್ಮಸ್ಥಳಕ್ಕೆ ತೆರಳಿದ್ದಾರೆ! ಕುಮಾರಸ್ವಾಮಿ ಸಿಎಮ್ ಗಾದಿಯಲ್ಲಿ ಕುಳಿತಿರುವದನ್ನು ಅರಗಿಸಿಕೊಳ್ಳಲಾಗದ ಸಿದ್ರಾಮಣ್ಣ ಅವರ ಪುತ್ರ ಯತೀಂದ್ರರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರೆ ಸ್ವಲ್ಪ ಸಮಾಧಾನವಾಗಿ ಬೆಂಗಳೂರಿನಲ್ಲಿ ಒಂದು ಕಡೆಗೆ ಕೂಡುತ್ತಿದ್ದರೇನೊ. ಖರ್ಗೆ ಫುತ್ರ ಪ್ರಿಯಾಂಕರನ್ನು ವಿಧಾನ ಸೌಧದಲ್ಲಿ ನೋಡಿ ಸಿದ್ರಾಮಣ್ಣರಿಗೆ ತಮ್ಮ ಮಗನೂ ಅಲ್ಲಿ ಪೀಠಾಲಂಕಾರ ಮಾಡಬೇಕಿತ್ತು ಎನಿಸಿದ್ದರೆ ಅತಿಶಯೋಕ್ತಿಯೇನಲ್ಲ.

ಆದರೆ ಕುಮಾರಸ್ವಾಮಿಯವರು ಹೇಳಿರುವ “ಟಚ್” ಸ್ಥಳೀಯ ವೆಂಕ, ನಾಣಿ, ಶೀನರಿಂದ ಸಾಧ್ಯವೇ ಇಲ್ಲ. ಅದು ಏನಿದ್ದರೂ ದಿಲ್ಲಿಯ ರಾಜಕುಮಾರನಿಂದಲೇ ಬರಬೇಕು. ಆ ರಾಜಕುಮಾರ ಎಲ್ಲಿಯವರೆಗೆ “ಟಚ್” ಮಾಡುವದಿಲ್ಲವೊ ಅಲ್ಲಿಯವರೆಗೆ ನಮ್ಮ “ಕುಮಾರ” “ಅನ್ ಟಚ್” ಆಗಿಯೇ ಉಳಿಯುತ್ತಾರೆ!!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.