ಉತ್ತಮ ಸಮಾಜಕ್ಕಾಗಿ

ಮಾಜಿ ಸಿಎಂ ಸಿದ್ದರಾಮಯ್ಯ :ಸಂಸತ್ ಚುನಾವಣೆ ಹೊಸ್ತಿಲಲ್ಲಿ ಸಂಘರ್ಷ ಬೇಡ ಎಂಬ ಕಿವಿಮಾತು

news belagavi

0

ಬೆಂಗಳೂರು: (news belagavi)ಬೆಳಗಾವಿ ಕಾಂಗ್ರೆಸ್ ಬೇಗುದಿ ಶಮನಕ್ಕೆ ಮಾಜಿ ಸಿಎಂ ಹಾಗೂ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮುಂದಾಗಿದ್ದಾರೆ, ಆದರೆ ಅದು ಈಗಲ್ಲ ಯುರೋಪ ಪ್ರವಾಸದ ನಂತರವಷ್ಟೇ! ಮುಖಂಡರ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತ ಹೊರಟಿದ್ದು, ಈಗಾಗಲೇ ಸಿದ್ದರಾಮಯ್ಯ, ಸಚಿವ ರಮೇಶ ಜಾರಕಿಹೊಳಿ ಅವರ ಜೊತೆ ಚರ್ಚೆ ನಡೆಸಿದ್ದಾರೆ. ಬೆಳಗಾವಿ ರಾಜಕೀಯದಲ್ಲಿ ಅನ್ಯರು ಭಾಗವಹಿಸುವುದು ತರವಲ್ಲ. ನಮ್ಮ ಜಿಲ್ಲೆಯ ಸಮಸ್ಯೆ ನಾವೇ ಇತ್ಯರ್ಥ ಮಾಡುತ್ತೇವೆ ಎಂದು ರಮೇಶ ಜಾರಕಿಹೊಳಿ ಸಿದ್ದರಾಮಯ್ಯ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರಂತೆ.
ಲಕ್ಷ್ಮೀ ಹೆಬ್ಬಾಳಕರ ಅವರನ್ನು ಸಮಾಧಾನಪಡಿಸಲು ಸಿದ್ದರಾಮಯ್ಯ ಮುಂದಾಗಿದ್ದು, ಸಂಸತ್ ಚುನಾವಣೆ ಹೊಸ್ತಿಲಲ್ಲಿ ಸಂಘರ್ಷ ಬೇಡ ಎಂಬ ಕಿವಿಮಾತು ಹೇಳಿದ್ದಾರೆ.
ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಕರೆ ಮಾಡಿ ಸದ್ಯಕ್ಕೆ ಏನೂ ಗೊಂದಲ ಮಾಡಿಕೊಳ್ಳುವ ಅವಸರ ಇಲ್ಲ ಎಂಬ ಉಕ್ತಿ ಸಿದ್ದರಾಮಯ್ಯ ನುಡಿದಿದ್ದಾರೆ. ವಿದೇಶ ಪ್ರವಾಸದ ನಂತರ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವ ಸಿದ್ದರಾಮಯ್ಯ ಅವರ ಹಿತನುಡಿ, ಅಲ್ಲಿಯವರೆಗೆ ಇಲ್ಲಿನ ಕೆಂಡ ಜ್ವಾಲೆ ಹೊತ್ತದಂತೆ ಕಾಯುವುದೇ ಎಂಬ ಕುತೂಹಲ ಮೂಡಿಸಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: