ಉತ್ತಮ ಸಮಾಜಕ್ಕಾಗಿ

ನೀತಿ ಸಂಹಿತೆ ಉಲ್ಲಂಘನೆ: ವಾಹನ, ಮದ್ಯ ವಶ

Code of Conduct Violation: Vehicle and alcohol

0

ಬೆಳಗಾವಿ: (news belgaum)ನಿಪ್ಪಾಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಕೊಗನೊಳ್ಳಿ ಎಸ್.ಎಸ್.ಟಿ ತಂಡದವರು ಏ.15 ರಂದು ಕಾರ್ಯಾಚರಣೆ ನಡೆಸಿ ರೂ.3.66 ಲಕ್ಷ ಮೌಲ್ಯದ ಕ್ಯಾಪ್, ರೂ. 1.20 ಲಕ್ಷ ಮೌಲ್ಯದ 3000 ಶಾಲ್ ಹಾಗೂ ರೂ.18 ಲಕ್ಷ ಮೌಲ್ಯದ ಬಸ್‍ನ್ನು ವಶಪಡಿಸಿಕೊಂಡಿದ್ದಾರೆ.
ಏ.15 ರಂದು ಸವದತ್ತಿ ವಿಧಾನಸಭಾ ಮತಕ್ಷೇತ್ರದ ಸವದತ್ತಿ ವಲಯದ ಕಾಗಿಹಾಳ ತಾಂಡಾ ಅಬಕಾರಿ ನಿರೀಕ್ಷಕರು ಕಾರ್ಯಾಚರಣೆ ಕೈಗೊಂಡು ರೂ.4 ಸಾವಿರ ಮೌಲ್ಯದ 21 ಲೀ. ಗೋವಾ ಮದ್ಯವನ್ನು ಜಪ್ತಿ ಮಾಡಿದ್ದಾರೆ.
ಏ.15 ರಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪ್ಲಾಯಿಂಗ್ ಸ್ಕ್ವಾಡ್ ತಂಡದವರು ಅನುಮತಿ ಪಡೆಯದೇ ರಾಜಕೀಯ ಪಕ್ಷದ ಚಿಹ್ನೆಯನ್ನು ವಾಹನದ ಮೇಲೆ ಹಾಕಿಕೊಂಡಿರುವುದಕ್ಕೆ ರೂ.3.50 ಲಕ್ಷ ಮೌಲ್ಯದ ರೆನಾಲ್ಟ್ ಕಾರ್‍ನ್ನು (ವಾಹನ) ವಶಪಡಿಸಿಕೊಂಡಿದ್ದಾರೆ.

ಇಂದಿನವರೆಗಿನ ಒಟ್ಟು ಮಾಹಿತಿ:
ಚುನಾವಣೆ ನೀತಿ ಸಂಹಿತೆ ಘೋಷಣೆಯಾದಾಗಿನಿಂದ ಇಂದಿನವರೆಗೆ (ಏ.16) ಒಟ್ಟು ರೂ.4,09,800 ಮೌಲ್ಯದ 1612 ಲೀ. ಮದ್ಯವನ್ನು ಜಪ್ತಿ ಮಾಡಲಾಗಿದೆ.
ಒಟ್ಟು ರೂ.43,68,570 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ರೂ.3,64,52,960 ಮೌಲ್ಯದ ಸಲಕರೆಣೆ ಹಾಗೂ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 52 ವಾಹನ ಹಾಗೂ 2 ಸೈಕಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ನಗರದಲ್ಲಿ 17 ಹಾಗೂ ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ 41 ಆರೋಪಿಗಳನ್ನು ಈವರೆಗೆ ಬಂಧಿಸಲಾಗಿದೆ. ಇಂದಿನವರೆಗೆ ಒಟ್ಟು 158 ಎಫ್.ಐ.ಆರ್‍ಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Code of Conduct Violation: Vehicle and alcohol 

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.