ಉತ್ತಮ ಸಮಾಜಕ್ಕಾಗಿ

ಸಂಗ್ರಹಸಲಾಗಿರುವ ಮಾಂಸದ ಸ್ಯಾಂಪಲ್‍ಗಳನ್ನು ಪಡೆದು ನಂತರ ಮೂರು ಕೋಲ್ಡ ಸ್ಟೋರೇಜಗಳನ್ನು ಜಪ್ತ

Colda stores are stacked

0

ಬೆಳಗಾವಿ:(news belgaum) ನಿನ್ನೆಯ ದಿನ ದಿನಾಂಕ. 26/02/2018 ರಂದು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ನಗರದ ಮೂರು ಕೋಲ್ಡ ಸ್ಟೋರೇಜಗಳಾದ (1) ಸೃಷ್ಟಿ ಅಗ್ರೋ ಕೋಲ್ಡ ಸ್ಟೋರೇಜ (2) ನೀಲ್ ಅಗ್ರೋ ಕೋಲ್ಡ ಸ್ಟೋರೇಜ (3) ಸೆವೆನ್ ಸ್ಟಾರ್ ಅಗ್ರೋ ಕೋಲ್ಡ ಸ್ಟೋರೇಜಗಳಲ್ಲಿ ಬೆಳಗಾವಿ ಹಾಗೂ ಸುತ್ತಮುತ್ತಲಿನ ಕಸಾಯಿ ಖಾನೆಗಳಿಂದ ದನದ ಮಾಂಸವನ್ನು ಪಡೆದು ಸಂಸ್ಕರಿಸಿ,

ಅದನ್ನು ಪ್ಯಾಕ ಮಾಡಿ ರಪ್ತು ಮಾಡುವುದಲ್ಲದೆ ಸದರಿ ಕೋಲ್ಡ ಸ್ಟೋರೇಜಗಳನ್ನು ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇ ಲೈಸನ್ಸ್ ಪಡೆಯದೇ ನಡೆಸುತ್ತಿರುವ ಬಗ್ಗೆ ಹಾಗೂ ಸದರಿ ಸಂಗ್ರಹಿಸಿದ ಮಾಂಸವು ಸಾರ್ವಜನಿಕರ ಸೇವನೆಗೆ ಯೋಗ್ಯವಿರದ್ದು ಇಂತಹ ಮಾಂಸವನ್ನು ಬೇರೆ ರಾಜ್ಯಗಳಿಗೆ ಹಾಗೂ ಹೊರದೇಶಗಳಿಗೆ ರಪ್ತು ಮಾಡಿ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಶ್ರೀಮತಿ. ಜೋಸೀನ್ ಎಂಟಾಯ್,Animal Welfare Officer, Animal Welfare Board of India, Bangaluruಇವರು ನೀಡಿದ ದೂರಿನ ಹಿನಲೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೋಂಡು

ಈ ಕುರಿತು ಸದರಿ ಕಸಾಯಿ ಖಾನೆಯ ತನಿಖೆ ನಡೆಸಿದ ವೇಳೆ ಸಂಬಂಧಪಟ್ಟ ಇಲಾಖೆಗಳಾದ Food Safety and Standard Authority of India ಹಾಗೂAnimal Husbandry & Pollution Control Board ಅಧಿಕಾರಿಗಳನ್ನು ಕರೆಸಿಕೊಂಡು ಪ್ರಕರಣದ ಪಂಚನಾಮೆ ಹಾಗೂ ತನಿಖೆ ನಡೆಸಿÉ. ಈ ಮೂರು ಕೋಲ್ಡ ಸ್ಟೋರೆಜಗಳಲ್ಲಿ ಸಂಗ್ರಹಸಲಾಗಿರುವ ಮಾಂಸದ ಸ್ಯಾಂಪಲ್‍ಗಳನ್ನು ಪಡೆದು ನಂತರ ಮೂರು ಕೋಲ್ಡ ಸ್ಟೋರೇಜಗಳನ್ನು ಜಪ್ತ ಮಾಡಲಾಗಿರುತ್ತದೆ. ಸದರಿ ಸ್ಯಾಂಪಲಗಳನ್ನು ಮಾನವರ ಸೇವನೆಗೆ ಯೋಗ್ಯವೇ ಅಥವಾ ಯೋಗ್ಯವಲ್ಲ ? ಅನ್ನುವ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ಹೈದ್ರಾಬಾದಗೆ ಕಳುಹಿಸಲಾಗುವುದು.

ಈ ಬಗ್ಗೆ ಸಾರ್ವಜನಿಕರು ಅನಾವಶ್ಯಕ ಊಹಾಪೂಹೆಗಳಿಗೆ ಕಿವಿಗೊಡಬಾರದು ಹಾಗೂ ಈ ಪ್ರಕರಣದ ಪಿರ್ಯಾದಿಯವರಿಗೆ ಸೂಕ್ತ ರಕ್ಷಣೆ ನೀಡಿದ್ದು, ಅಲ್ಲದೇ ಸ್ಥಳದಲ್ಲಿ ಡಿಸಿಪಿ (ಕಾನೂನು & ಸುವ್ಯವಸ್ಥೆ) ಹಾಗೂ ಡಿಸಿಪಿ (ಅಪರಾಧ & ಸಂಚಾರ) ಬೆಳಗಾವಿ ನಗರ ರವರು ಮುಕ್ಕಾಂ ಹೂಡಿದ್ದು, ಅವರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಬಂದೋಬಸ್ತ ಮುಂದುವರೆಸಲಾಗಿದೆ.Colda stores are stacked

Leave A Reply

 Click this button or press Ctrl+G to toggle between Kannada and English

Your email address will not be published.