ಉತ್ತಮ ಸಮಾಜಕ್ಕಾಗಿ

ನನ್ನೊಂದಿಗೆ ಅಧಿಕಾರಿಗಳಿಗೂ ಸಹಕರಿಸಿ: ಸಭೆಯಲ್ಲಿ ಸಾರ್ವಜನಿಕರಿಗೆ ಶಾಸಕಿ ಅಂಜಲಿ ಕಿವಿಮಾತು

Collaborate with me with the authorities : MLA Anjali said to the public at a meeting

0

ಖಾನಾಪುರ: (news belagaviಜನತೆಗೆ ಅತಿಮುಖ್ಯವಾಗಿರುವ ರಸ್ತೆ ಸುಧಾರಣೆ, ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ವಿದ್ಯುತ್ ಸೌಲಭ್ಯವನ್ನು ತಕ್ಷಣ ಓದಗಿಸಿ ಎಂದು ಸಂಭಂಧಪಟ್ಟ ಅಧಿಕಾರಿಗಳಿಗೆ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಸೂಚಿಸಿದರು.

ನನ್ನೊಂದಿಗೆ ಅಧಿಕಾರಿಗಳಿಗೂ ಸಹಕರಿಸಿ: ಸಭೆಯಲ್ಲಿ ಸಾರ್ವಜನಿಕರಿಗೆ ಶಾಸಕಿ ಅಂಜಲಿ ಕಿವಿಮಾತು- Tarun kranti
ತಾಲೂಕಿನ ಗೋಧೋಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೋಧಗೇರಿ ಗ್ರಾಮದಲ್ಲಿ ಸೋಮವಾರದಂದು ಹಮ್ಮಿಕೊಂಡಂತಹ “ಬೀಡಿ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗೋಧಗೇರಿ ಗ್ರಾಮದಿಂದ ದಿನನಿತ್ಯ ಹಲವಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬೆಳಗಾವಿ ನಗರಕ್ಕೆ ಹೋಗುತ್ತಾರೆ. ಆದ್ದರಿಂದ ಗ್ರಾಮಸ್ಥರು ನಿಮ್ಮ ಸಾರಿಗೆ ಇಲಾಖೆಗೆ ಹಲವಾರು ಬಾರಿ ಮನವಿ ನೀಡಿದರು ಸಕಾರಾತ್ಮವಾಗಿ ಸ್ಪಂದಿಸಿಲ್ಲವೆಂದು ಆರೋಪಿಸುತ್ತಿದ್ದಾರೆ. ಆದ ಕಾರಣ ಇಂತಹ ಸಮಸ್ಯೆಗೆ ಪರಿಹಾರ ಓದಗಿಸುವುದು ಬಿಟ್ಟು, ಕುಂಟು ನೆಪ ಹೇಳಿ ಜಾರಿಕೊಳ್ಳಬೇಡಿ ಇದರಿಂದ ನಿಮ್ಮ ಇಲಾಖೆಗೆ ಕಪ್ಪುಚುಕ್ಕೆ ಬಂದಂತಾಗುತ್ತದೆ. ಆದ್ದರಿಂದ ನಾಳೆಯಿಂದ ಯಾವುದೇ ಪರಿಸ್ಥಿಯಲ್ಲೂ ಗೋಧಗೇರಿಯಿಂದ ಬೆಳಗಾವಿ ವರೆಗೆ ಬಸ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಖಡಕ ಸೋಚನೆ ನೀಡಿದರು.

ನನ್ನೊಂದಿಗೆ ಅಧಿಕಾರಿಗಳಿಗೂ ಸಹಕರಿಸಿ: ಸಭೆಯಲ್ಲಿ ಸಾರ್ವಜನಿಕರಿಗೆ ಶಾಸಕಿ ಅಂಜಲಿ ಕಿವಿಮಾತು- Tarun kranti 1
ಬಾಳುಗುಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರಿಂದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ನಿತ್ಯವೂ ಓಡಾಡಲು ಬಹಳ ತೊಂದರೆ ಅನುಭವಿಸುತ್ತಿರುವುದರಿಂದ ಮಳೆ ನಿಂತ ತಕ್ಷಣ ರಸ್ತೆಯನ್ನು ಮೆಟಲಿಂಗ್ ವ್ಯವಸ್ಥೆ ಮಾಡಿ ಮುಗಿಸಿ ಎಂದರು. ಇದರ ಜೋತೆಗೆ ಗೋಧೋಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಗೆ ಸಂಭಂಧಪಟ್ಟಂತಹ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿ ರೈತರ ಮನೆಬಾಗಿಲಿಗೆ ಕೃಷಿ ಮಾಹಿತಿಯನ್ನು ಓದಗಿಸಿರಿ ಮತ್ತು ಒಟ್ಟಾರೆಯಾಗಿ ತಾಲೂಕಿನ ಜನತೆ ನನಗೆ ಶಾಸಕಿಯಾಗಿ ಆಯ್ಕೆ ಮಾಡಿ ಕಳಿಸಿದ್ದು ಅಭಿವೃದ್ಧಿ ಮಾಡುವಗೊಸ್ಕರ, ಆದ್ದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು ಚಾಚುತಪ್ಪದೇ ಜನರು ಯಾವುದೇ ಸಮಸ್ಯೆಯನ್ನು ತೆಗೆದುಕೊಂಡು ನನ್ನವರೆಗೂ ಬಾರದ ಹಾಗೇ ನೋಡಿಕೊಳ್ಳಿ. ಇದರ ಜೋತೆಗೆ ತಾಲೂಕಿನ ಜನತೆಯು ಕೂಡ ನನಗೆ ಮತ್ತು ಅಧಿಕಾರಿಗಳಿಗೆ ಸಹಕರಿಸಿ ಕೆಲಸ ಮಾಡಿಕೊಳ್ಳಿರೆಂದು ಹೇಳಿದರು.

ತಾಲೂಕಾ ತಹಶೀಲ್ದಾರ ಶಿವಾನಂದ ಉಳ್ಳೆಗಡ್ಡಿ ಮಾತನಾಡಿ ಈ ಹಿಂದೆ ನಾನು ಇಲ್ಲಿ ಬರುವ ಮುಂಚೆ ಸುಮಾರು ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಸ್ಮಶಾನದ ಸಮಸ್ಯೆ ಇತ್ತು. ಆದರೆ ನಾನು ಬಂದನಂತರ ಈಗಾಗಲೇ 67 ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆಯನ್ನು ಸರಕಾರದ ವತಿಯಿಂದ ಕಲ್ಪಿಸಿಕೊಟ್ಟಿದ್ದೆವೆ. ಈಗ ಬೀಡಿ ಹೋಬಳಿಯಲ್ಲಿ ಸರಕಾರಿ ಜಾಗ ಖಾಲಿ ಇಲ್ಲದೆಯಿರುವುದರಿಂದ 12ಗ್ರಾಮಗಳಿಗೆ ಸ್ಮಶಾನದ ಸಮಸ್ಯೆ ಇದ್ದು, ಸ್ಮಶಾನಕ್ಕಾಗಿ ಜಾಗ ನೀಡಲು ದಾನಿಗಳಿದ್ದರೆ ಅಂತಹವರು ಗ್ರಾಮದ ಹಿರಿಯರೊಂದಿಗೆ ತಾಲೂಕಾ ಕಛೇರಿಗೆ ಬಂದು ಭೇಟಿಯಾಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೆವೆಂದರು.

ನನ್ನೊಂದಿಗೆ ಅಧಿಕಾರಿಗಳಿಗೂ ಸಹಕರಿಸಿ: ಸಭೆಯಲ್ಲಿ ಸಾರ್ವಜನಿಕರಿಗೆ ಶಾಸಕಿ ಅಂಜಲಿ ಕಿವಿಮಾತು- Tarun kranti 2
ಇದರೊಂದಿಗೆ ಮಲಪ್ರಭಾ ಮತ್ತು ಕಳಸಾ ನದಿಗಳ ಶಾಶ್ವತ ಕುಡಿಯುವ ನೀರಿನ ಹೋರಾಟ ಸಮಿತಿ(ರಿ) ಸಂಘಟನೆ ವತಿಯಿಂದ ಶಾಸಕಿಯವರಿಗೆ ಮನವಿ ನೀಡಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಮಿಟಗಾರ, ನಮ್ಮ ತಾಲೂಕಿನಲ್ಲಿ ಮಲಪ್ರಭಾ ನದಿಯ ಜೋತೆಗೆ 14 ಉಪನದಿಗಳು ಹುಟ್ಟಿ ಹರಿದರೂ ನಮ್ಮ ತಾಲೂಕಿನ ಜನತೆ ವರ್ಷಪೂರ್ತಿ ಕುಡಿಯುವ ನೀರಿಗೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಮಹದಾಯಿ ತೀರ್ಪು ಬರುವುದೊಳಗೆ ನಮ್ಮ ನದಿಯಿಂದ ನಮಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ. ಹಾಗೂ 2013 ರಿಂದ ಇಲ್ಲಿಯವರೆಗೆ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಾಕಿ ಬಿಲ್ಲನ್ನು ಕೊಡಿಸಿ, ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುತ್ತಿದ್ದು ಕಾಡಿನ ಸುತ್ತಲೂ ಇರುವ ಹೊಲಗಳಿಗೆ ಐಬ್ಯಾಕ್ ಸೌಲಭ್ಯವನ್ನು ಮಾಡಿಸಿ ಮತ್ತು ಈ ವರ್ಷ ನಮ್ಮ ಭಾಗದಲ್ಲಿ ಹೆಚ್ಚಿನ ರೈತರು ಮೆಕ್ಕೆಜೋಳ ಬಿತ್ತಿದ್ದು ಹೆಚ್ಚಿನ ಮಳೆಯಿಂದ ಬೆಳೆ ನಾಶವಾಗುವ ಪರಿಸ್ಥೀತಿ ಉದ್ಭವವಾಗಿದೆ. ಆದ್ದರಿಂದ ಬೆಳೆ ವಿಮೆ ತುಂಬುವ ಅವಧಿ ಜುಲೈ 31 ಕೊನೆಯ ದಿನವಾಗಿದ್ದು, ಬೆಳೆ ವಿಮೆ ತುಂಬುವ ಅವಧಿ ಅಗಸ್ಟ 31ರವರೆಗೆ ವಿಸ್ತರಣೆ ಮಾಡಬೇಕೆಂದು ವಿನಂತಿಸಿಕೊಂಡರು.

ಈ ಸಭೆಯ ಅಧ್ಯಕ್ಷತೆಯನ್ನು ಶಾಸಕಿ ಡಾ.ಅಂಜಲಿ ನಿಂಬಾಳ್ಕರ ವಹಿಸಿದ್ದರು. ತಹಶೀಲ್ದಾರ ಶಿವಾನಂದ ಉಳ್ಳೆಗಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಸಿಪಿಆಯ್ ಗುರುನಾಥ, ಬಿಇಒ ಉಮಾ ಬಡಿಗೇರ, ಕೆಎಸಆರಟಿಸಿ ಮ್ಯಾನೇಜರ್ ಚಂದ್ರಕಾಂತ ಯಕ್ಕುಂಡಿ, ಹೆಸ್ಕಾಂ ಅಧಿಕಾರಿ ಅಲಕುಂಡೆ, ಪಿಡಬ್ಲುಡಿ ಇಂಜಿನಿಯರ ಬಿ.ಎಮ್.ಪಾಟೀಲ, ಜಿಪಂ ಇಂಜಿನಿಯರ ಚಿತ್ತವಾಡೆ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರುಗಳು ಎಪಿಎಂಸಿ ಸದಸ್ಯ ಬಸವರಾಜ ಮುಗಳಿಹಾಳ ಮತ್ತು ಹೋಬಳಿ ಮಟ್ಟದ ಗ್ರಾಮಸ್ಥರಾದ ಮಹಾಂತೇಶ ಸಂಗೊಳ್ಲಿ, ರಾಜು ರಪಾಟಿ, ಮಹೇಶ ಬೆಳಗಾಂವರ, ಮೈಕಲ ಸೋಜ ಹಾಗೂ ನೂರಾರು ಗ್ರಾಮಸ್ಥರು ಹಾಜರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.