ಉತ್ತಮ ಸಮಾಜಕ್ಕಾಗಿ

ಸಿಎಂ ಸಿದ್ದರಾಮಯ್ಯ ವಿರುದ್ದ ಎಸ್ಪಿಗೆ ದೂರು ಗುಂಡುರಾವ್ ವಿರುದ್ದ ಕಮಿಷ್ನರ್ಗೆ ದೂರು

Complaint Complaint Against Gunduravu Complaint Against CM Siddaramaiah

0

ಸಿಎಂ ಸಿದ್ದರಾಮಯ್ಯ ವಿರುದ್ದ ಎಸ್ಪಿಗೆ ದೂರು ಗುಂಡುರಾವ್ ವಿರುದ್ದ ಕಮಿಷ್ನರ್ಗೆ ದೂರು- Tarun kranti 1ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯನಿರ್ವಾಹಕ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ವಿರುದ್ಧ ನಗರದ ನ್ಯಾಯವಾದಿ ದೇವರಾಜ್ ಬಸ್ತವಾಡೆ ನಗರ ಪೊಲೀಸ್ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಅವರಿಗೆ ಇಂದು ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಬಿಜೆಪಿಯನ್ನು ಉಗ್ರಗಾಮಿ ಸಂಘಟನೆ ಎಂದು ಜರಿದಿದ್ದಾರೆ. ಇಬ್ಬರ ವಿರುದ್ದವು ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ IPC 153a ಅಡಿ ಪ್ರಕರಣ ದಾಖಲಿಸಬೇಕು ಎಂದು ಕಮಿಷ್ನರ್ ಗೆ ಒತ್ತಾಯಿಸಿದ್ದಾರೆ.
ಬಿಜೆಪಿ ಕಾನೂನು ಕೋಶದ ರಾಜ್ಯ ಕಾರ್ಯಕಾರಿ ಅನಿಲ ಬೆನಕೆ, ಚಿದಾನಂದ ತೋಟಗಿ, ರಾಜು ಶೇಡಬಾಳೆ ಇತರರು ಉಪಸ್ಥಿತರಿದ್ದರು.

ಸಿಎಂ ಸಿದ್ದರಾಮಯ್ಯ ವಿರುದ್ದ ಎಸ್ಪಿಗೆ ದೂರು

ಸಿಎಂ ಸಿದ್ದರಾಮಯ್ಯ ವಿರುದ್ದ ಎಸ್ಪಿಗೆ ದೂರು ಗುಂಡುರಾವ್ ವಿರುದ್ದ ಕಮಿಷ್ನರ್ಗೆ ದೂರು- Tarun krantiಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ(RSS) ಸಂಘದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಬಿಜೆಪಿ ಇಂದು ಪ್ರತಿಭಟನೆ ನಡೆಸಿತು. ಬಿಜೆಪಿ ಕಾನೂನು ಕೋಶದ ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಜಿಲ್ಲಾ ಎಸ್ಪಿಗೆ ದೂರು ನೀಡಿದರು. ಸಿಎಂ ಸಿದ್ದರಾಮಯ್ಯ ಬಿಜೆಪಿ, ಆರ್ ಎಸ್ ಎಸ್ ಮತ್ತು ವಿಎಚ್ ಪಿ ಸಂಘಟನೆಗಳ ವಿರುದ್ಧ ಅಲ್ಲ ಸಲ್ಲದ ಹೆಳಿಕೆಗಳನ್ನು ನೀಡುತ್ತಿದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ASP ರವೀಂದ್ರ ಗಡಾದಿ ಅವರಿಗೆ ಮನವಿ ಸಲ್ಲಿಸಿದರು. ನ್ಯಾಯವಾದಿ ಬಸವರಾಜ ರೊಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

80%
Awesome
  • Design

Leave A Reply

 Click this button or press Ctrl+G to toggle between Kannada and English

Your email address will not be published.