ಉತ್ತಮ ಸಮಾಜಕ್ಕಾಗಿ

ವಕೀಲರ ಸಂಘದ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮ

news belagavi

0

ಬೆಳಗಾವಿ:(news belgaum) ಸಾಹಿತ್ಯದ ಮೂಲಕ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಸಮಾಜದ ಹಿತವನ್ನು ಕಾಪಾಡುವದು ಸಾಹಿತಿಗಳ ಜವಾಬ್ದಾರಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೋ.ರಂಗರಾಜ ವನದುರ್ಗ ಹೇಳಿದರು.
ಅವರಿಂದು ಹಿರಿಯ ಸಾಹಿತಿ,ಪತ್ರಕರ್ತ ಎಲ್,ಎಸ್.ಶಾಸ್ತ್ರಿ ಅವರ 75 ನೇ ಜನ್ಮದಿನದ ನಿಮಿತ್ತ ಬೆಳಗಾವಿ ವಕೀಲರ ಸಂಘದ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ “ಸಿರಿಗಂಧ” ಎಂಬ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಕಳೆದ 4 ದಶಕಗಳ ಶಾಸ್ತ್ರಿ ಅವರ ಪತ್ರಿಕಾ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿನ ಸೇವೆಯನ್ನು ಗುರುತಿಸಿ ಅವರನ್ನು ಗೌರವಿಸುತ್ತಿರುವದು ಶ್ಲಾಘನೀಯ ಎಂದ ಅವರು ಅತ್ಯುತ್ತಮ ಸಾಹಿತ್ಯ ರಚನೆಯೊಂದಿಗೆ ಹೊಸ ಪೀಳಿಗೆಯವರಿಗೆ ಮಾದರಿ ಎನ್ನುವಂತೆ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ ಅಂಥವರನ್ನು ಸರಕಾರ ಗುರುತಿಸಿ ಗೌರವಿಸಬೇಕು ಎಂದರು.
News Belgaum-ಸಮಾಜದ ಕಾಪಾಡುವದು ಸಾಹಿತಿಗಳ  ಜವಾಬ್ದಾರಿ-ಪ್ರೊ.ರಂಗರಾಜ ವನದುರ್ಗಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಎಂ.ಜೆ.ಆರ್.ಅರಸ ಅವರು ಮಾತನಾಡಿ ಶಾಸ್ತ್ರಿ ಅವರ ಸೇವೆಯನ್ನು ಗುರುತಿಸಿ ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಶಾಸಕ ಅನೀಲ ಬೆನಕೆ ಮಾತನಾಡಿ ಶಾಸ್ತ್ರಿ ಅವರ ಸೆÉೀವೆಯನ್ನು ಗುರುತಿಸಿ ಸರಕಾರ ಅವರನ್ನು ಸತ್ಕರಿಸಬೇಕು ಎಂದರು.
ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮಿಜಿ ಮತ್ತು ಚಿಂಚಣಿ ಸಿದ್ಧ ಸಂಸ್ಥಾನ ಮಠದ ಶ್ರೀ.ಅಲ್ಲಮಪ್ರಭು ಸ್ವಾಮಿಜಿ ಅವರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ಶಾಸ್ತ್ರಿ ಅಭಿನಂದನಾ ಸಮೀತಿ ಅಧ್ಯಕ್ಷ ಎಂ.ಎಸ್.ಇಂಚಲ,ಪ್ರಧಾನ ಕಾರ್ಯದರ್ಶಿ ಅಶೋಕ ಮಳಗಲಿ,ಸಿರಿಗಂಧ ಅಭಿನಂದನಾ ಗ್ರಂಥದ ಸಂಪಾದಕ ಎಚ್.ಐ.ತಿಮ್ಮಾಪೂರ,ಕಲ್ಯಾಣರಾವ ಮುಚಳಂಬಿ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಸ್ತ್ರಿ ಅವರ “ಥೈಲ್ಯಾಂಡ್ ಆಫ್ ಸ್ಟೈಲ್ಸ” ಮತ್ತು “ಪುರೋಹಿತ” ಎಂಬ ಕೃತಿಗಳ ಬಿಡುಗಡೆ ಮಾಡಲಾಯಿತು.
ಶಾಸ್ತ್ರಿ ಅವರು ಬದುಕು-ಬರಹ-ಸಾಧನೆ ಕುರಿತು ನಡೆದ ಅವಲೋಕನ ಕಾರ್ಯಕ್ರಮದಲ್ಲಿ ಶಾ.ಮಂ.ಕೃಷ್ಣರಾವ,ಡಾ.ಎಚ.ಬಿ.ಕೋಲಕಾರ,ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ,ಶ್ರೀಮತಿ ನಿರ್ಮಲಾ ಪ್ರಕಾಶ,ಅವರುಗಳು ಮಾತನಾಡಿದರು.ಕಾರ್ಯಕ್ರಮದಲ್ಲಿ ಬಿ.ಎಸ್.ಗೌಡರ ಉಪಸ್ಥಿತರಿದ್ದರು.
ಸಂಜೆ ನಡೆದ ಅಭಿನಂದನಾ ಸಭೆಯಲ್ಲಿ ಎಲ್.ಎಸ್.ಶಾಸ್ತ್ರಿ ಮತ್ತು ಶ್ರೀಮತಿ ಶಾರದಾ ಶಾಸ್ತ್ರಿ ದಂಪತಿಗಳನ್ನು ಸತ್ಕರಿಸಲಾಯಿತು.ಸತ್ಕಾರ ಸ್ವೀಕರಿಸಿ ಮಾತನಾಡಿದ ಶಾಸ್ತ್ರಿ ಅವರು ದೂರದ ಹೊನ್ನಾವರದಿಂದ ಬೆಳಗಾವಿಗೆ ಬಂದ ನನ್ನನ್ನು ಆದರಿಸಿ ಬೆಳೆಸಿ ನಿಮ್ಮವನನ್ನಾಗಿ ಮಾಡಿಕೊಂಡು ಇಷ್ಟು ದೊಡ್ಡ ಪ್ರಮಾಣದಲ್ಲಿ ಸತ್ಕರಿಸಿದ್ದರ ಋಣ ತೀರಿಸಲು ಮತ್ತೊಂದು ಜನ್ಮ ಎತ್ತಬೇಕು ಎಂದು ಗದ್ಗದಿತರಾದರು.ಬೆಳಗಾವಿಗರ ಪ್ರೀತಿ ವಿಶ್ವಾಸಕ್ಕೆ ಯಾವ ರೀತಿ ಉತ್ತರಿಸಬೇಕೋ ಎಂದು ಭಾವುಕರಾದರು ಬೆಳಗಾವಿಯ ಸಾವಿರ ವರ್ಷಗಳ ಇತಿಹಾಸ ಕುರಿತು ಕೃತಿ ರಚಿಸುವ ತಮ್ಮ ಯೋಜನೆಯನ್ನು ಈ ಸಂದರ್ಭದಲ್ಲಿ ಅವರು ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ,ಕವಿ,ನೀವೃತ್ತ ನ್ಯಾಯಾಧೀಶ ಜಿನದತ್ತ ದೇಸಾಯಿ ಶಾಸ್ತ್ರಿ ಕುರಿತು ಮಾತನಾಡಿದರು ,ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹುಕ್ಕೇರಿಯ ಶ್ರೀ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಅವರು ಆಶಿರ್ವಚನ ನೀಡಿ ಶಾಸ್ತ್ರಿ ಅವರಿಂದ ಬೆಳಗಾವಿಯ ಸಾವಿರ ವರ್ಷಗಳ ಇತಿಹಾಸ ಕುರಿತು ಕೃತಿ ರಚನೆ ಮತ್ತ ಅದರೊಂದಿಗೆ ಶಾಸ್ತ್ರಿ ಅವರ ಜೀವನ ಚರಿತ್ರೆ ಕೂಡ ರಚಿತವಾಗಲಿ ಎಂದರು.ನೀವೃತ್ತ ಪ್ರಾಚಾರ್ಯರುಗಳಾದ ವಿ.ಎನ್.ಜೋಶಿ,ಡಾ.ಬಸವರಾಜ ಜಗಜಂಪಿ,ಪತ್ರಕರ್ತ ಸುಬ್ರಮಣ್ಯ ಭಟ್,ಅವರುಗಳು ಅಭಿನಂದನಾ ಪರ ನುಡಿಗಳನ್ನಾಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಶಾಸ್ತ್ರಿ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ಶ್ರೀಮತಿ ನೀಲಗಂಗಾ ಚರಂತಿಮಠ,ಸಿ.ಕೆ.ಜೋರಾಪೂರ,ಡಾ.ಪಂಚಾಕ್ಷರಿ ಹೊಸಮಠ,ವೈ.ಎಸ್.ಭಜಮ್ಮನವರ,ಪಿ.ಬಿ.ಸ್ವಾಮಿ,ಬಸವರಾಜ ಸಸಾಲಟ್ಟಿ,ಜಯಪಾಲ ಜಿನಗೌಡಾ,ಎಂ.ಎ.ಪಾಟೀಲ,ಶ್ರೀಮತಿ ದೀಪಿಕಾ ಚಾಟೆ,ಶ್ರೀಮತಿ ಜೋತಿ ಬದಾಮಿ,ಆನಂದ ಪುರಾಣಿಕ,ಶ್ರೀಮತಿ ಸುನಂದಾ ಎಮ್ಮಿ,ಶ್ರೀಮತಿ ಹೇಮಾ ಸೋನೋಳಿ ಮುಂತಾದವರು ಉಪಸ್ಥಿತರಿದ್ದರು.ಕರ್ನಾಟಕ ಪತ್ರಕರ್ತರ ಸಂಘ,ಜಿಲ್ಲಾ ಲೇಖಕಿಯರ ಸಂಘ,ಜಿಲ್ಲಾ ಮತ್ತು ವಿವಿಧ ತಾಲೂಕುಗಳ ಚುಟುಕು ಸಾಹಿತ್ಯ ಪರಿಷತ್ತ ಸಂಘಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಶಾಸ್ತ್ರಿ ಅವರನ್ನು ಸತ್ಕರಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.