ಉತ್ತಮ ಸಮಾಜಕ್ಕಾಗಿ

ಹಲ್ಲೆ ಯತ್ನ ಖಂಡಿಸಿ; ಜಿಲ್ಲಾ ಗಂಗಾ ಮತಸ್ಥರಿಂದ ಡಿಸಿ ಅವರಿಗೆ ಮನವಿ

Condemn attempt to attack Request DC from District Ganga Voters

0

ಬೆಳಗಾವಿ:(tarunkranti) ಮಕರ ಸಂಕ್ರಮಣದ ಆಚರಣೆ ದಿನವಾದ ಜನೆವರಿ 14 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ-ನರಸಿಪುರದ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿಗಳ ಹಾಗೂ ಇತರ ಭಕ್ತರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಚಿತ್ರ ಶೇಖರಒಡೆಯರ ಹಾಗೂ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲು ಆಗ್ರಹಿಸಿ ಜಿಲ್ಲಾ ಗಂಗಾಮತಸ್ಥರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯ ಎದುರುಗಡೆ ಸೇರಿದ ಪದಾಧಿಕಾರಿಗಳು ಚಿತ್ರ ಶೇಖರ ಒಡೆಯರ ವಿರುದ್ಧ ಘೊಷಣೆ ಕೂಗಿ ಅವರ ವಿರುದ್ಧ ಪ್ರತಿಭಟನೆ ನಡೆಸಿ ಕಾನೂನ ಕ್ರಮ ಕೈಗೊಳ್ಳಲು ಹಾವೇರಿ ಜಿಲ್ಲಾಡಳಿತಕ್ಕೆ ಸೂಚಿಸಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿಯಲ್ಲಿ ಆಗ್ರಹಿಸಲಾಯಿತು. ಜಿಲ್ಲಾ ಸಂಘದ ಅಧ್ಯಕ್ಷರಾದ ಜಿ.ಜಿ.ತಳವಾರ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ.ನೌಕರ ಸಂಘದ ಅಧ್ಯಕ್ಷರಾದ ಎಸ್.ಕೆ.ಗಸ್ತಿ,ಪ್ರಧಾನ ಕಾರ್ಯದರ್ಶಿ ರವಿ ಶಂಕರ ಚನಾಳ,ಇವರ ನೇತೃತ್ವದಲ್ಲಿ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸಲ್ಲಿಸಲಾಯಿತು.
ತುಂಗಾ ಭದ್ರ ನದಿಯ ದಡದಲ್ಲಿರುವ ಅಂಬಿಗರ ಚೌಡಯ್ಯನವರ ಗದ್ದುಗೆ ಮೇಲೆ ಚಿತ್ರ ಶೇಖರ ಒಡೆಯರ ಹತ್ತಿ ಉದ್ಧಟತನದಿಂದ ಅಂಬಿಗರ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಜೊತೆಗೆ ಅಂಬಿಗರ ಚೌಡಯ್ಯನವರ ಗುರುಪೀಠ ಶ್ರೀಗಳ ಮೇಲೆ ಹಲ್ಲೆ ಯತ್ನಿಸಿ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ.ಇದನ್ನು ಜಿಲ್ಲಾ ಗಂಗಾ ಮತಸ್ಥತರ ಸಂಘ ಖಂಡಿಸಿ ಗುರುಗಳಿಗೆ ಸೂಕ್ತ ಪೋಲಿಸ ಭದ್ರತೆ ಒದಗಿಸಲು ಮನವಿಯಲ್ಲಿ ಆಗ್ರಹಿಸಿರುವರು.

ಈಸಂದರ್ಭದಲ್ಲಿ ಡಾ.ವಿ.ಡಿ.ಡಾಂಗೆ, ಅಶೋಕ ವಾಲೀಕಾರ,ಅನೀಲ ಸುಣಗಾರ,ಹೊಳೆಪ್ಪನವರ,ಜಿ.ಬಿ.ಸುಣಗಾರ,ಆರ್.ಎಚ್.ಬಿಷ್ಠನವರ,ವಿಠ್ಠಲ ಕೋಳಿ,ಎಸ್ ಸಿ ಗಂಗಾಪುರ, ಯಲಪ್ಪಾ ಸುಂಕದ,ವಂಟಗೋಡಿ,ಸೋಮಲಿಂಗ ಬಾರ್ಕಿ,ಶಿವಲಿಂಗ ನಾಯಕ, ಸೇರಿದಂತೆ ಉಪಸ್ಥಿತರಿದ್ದರು.

Condemn attempt to attack Request DC from District Ganga Voters belgaum  

 

Leave A Reply

 Click this button or press Ctrl+G to toggle between Kannada and English

Your email address will not be published.