ಉತ್ತಮ ಸಮಾಜಕ್ಕಾಗಿ

ಮೈತ್ರಿ ಯುದ್ಧ: ನಿರೀಕ್ಷೆಯಂತೆಯೇ ಮಗನ ರಕ್ಷಣೆಗೆ ಅಖಾಡಕ್ಕಿಳಿದ ದೊಡ್ಡಗೌಡರು ದಿಲ್ಲಿಗೆ ಶಿಫ್ಟ!

confederacy war : as expected H.D.Devegouda shifted to Delhi for son protection

0

ವಿಶೇಷ ಬರಹ: ಅಶೋಕ್ ಚಂದರಗಿ (news belagavi)

“ವಿಶ್ರಾಂತಿ” ಗಾಗಿ ಧರ್ಮಸ್ಥಳದ ಶಾಂತಿವನ ಸೇರಿದ್ದ ಸಿದ್ರಾಮಯ್ಯ ನಾಳೆ ಗುರುವಾರ ಬೆಂಗಳೂರಿಗೆ ಮರಳಲಿದ್ದು ಹೋಗುವಾಗ ಒಂಟಿಯಾಗಿದ್ದವರು ಮರಳುವಾಗ “ಆನೆಬಲ” ದೊಂದಿಗೆ ಯುದ್ಧರಂಗವನ್ನು ಪ್ರವೇಶಿಸುತ್ತಿದ್ದಾರೆ ಧರ್ಮಸ್ಥಳದಲ್ಲಿಯೇ ಕುಳಿತು ತಮಗಿರುವ ಬಲವನ್ನು ಮತ್ತು ಇನ್ನೂ ತಾವು ಹೊಂದಿರುವ ಹಿಡಿತವನ್ನು ಸಾಬೀತು ಮಾಡಿರುವ ಸಿದ್ದರಾಮಯ್ಯ ಎಂಟೇ ದಿನದಲ್ಲಿ ದೊಡ್ಡಗೌಡರ ವಿರುದ್ಧ ದಿಲ್ಲಿ ರಾಜಕುಮಾರನಿಗೆ ದೂರು ನೀಡುವಷ್ಟು “ಬೆಳೆದು ನಿಂತಿದ್ದಾರೆ. ತಾವಿರುವ ಸ್ಥಳಕ್ಕೆ ಸಚಿವರು ಶಾಸಕರು ಬರುವಂತೆ ಮಾಡಿದ ಸಿದ್ದು ಈಗ ಹೈಕಮಾಂಡ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಅವರನ್ನು ಕಂಟ್ರೋಲ್ ಮಾಡುವ ಅಂತಿಮ ಪ್ರಯತ್ನವಾಗಿ ಸೋನಿಯಾ ಗಾಂಧಿ ಬಲಗೈ ಬಂಟ ಆಹ್ಮದ್ ಪಟೇಲ್ ಅವರು ಸಿದ್ದು ಜೊತೆಗೆ ಕೆಲವೇ ನಿಮಿಷಗಳ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಇತ್ತ ಸಂಭವನೀಯ ಅಪಾಯವನ್ನು ಅರಿತ ಕುಮಾರಸ್ವಾಮಿ, ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ ಮತ್ತಷ್ಟು ಹತ್ತಿರಕ್ಕೆ ಬಂದಿದ್ದು ಸಿದ್ದು ಬುಡದಲ್ಲೇ ಬತ್ತಿ ಇಡುವ ತಯಾರಿ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದಲೇ ಸಿದ್ದು ಅವರನ್ನು ಕೆಳಗಿಳಿಸಲು ಸ್ಕೆಚ್ ಹಾಕಿದ್ದಾರೆ. ಇದಕ್ಕಾಗಿ ಹೈಕಮಾಂಡ ಗ್ರೀನ್ ಸಿಗ್ನಲ್ ಗಾಗಿ ದಾರಿ ನೋಡುತ್ತಿದ್ದಾರೆ. ದೇವೇಗೌಡರು ದಿಲ್ಲಿಗೆ ಹೋಗಿದ್ದೂ ಸಹ ಸಿದ್ದು ಅವರನ್ನು ಹದ್ದು ಬಸ್ತಿನಲ್ಲಿಡಲೆಂದೇ.

ವಿಧಾನ ಸೌಧದ ಹೊರಗಡೆ ಎಷ್ಟೇ ಯುದ್ಧ ನಡೆದರೂ ಅಂತಿಮ ಹಣಾಹಣಿಯ ಕಣವು ವಿಧಾನಸಭೆಯೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಅದಕ್ಕೆಂದೇ ಕುಮಾರಸ್ವಾಮಿ ಅವರು ಎಲ್ಲವನ್ನೂ ಬದಿಗೊತ್ತಿ ಪೂರ್ಣಪ್ರಮಾಣದ ಬಜೆಟ್ ಮಂಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಜುಲೈ 5 ರಂದು ಮಂಡಿಸಲ್ಪಡುವ ಬಜೆಟ್ 12 ರೊಳಗೆ ಪಾಸು ಆಗುತ್ತದೆಯೆಂದು ದೇವೇಗೌಡರು ಇಂದು ದಿಲ್ಲಿ ತಲುಪುತ್ತಲೇ ಹೇಳಿದ್ದು ಗಮನಾರ್ಹವಾಗಿದೆ.

ಅಹ್ಮದ ಪಟೇಲ್ ಮಾತುಗಳು ಸಿದ್ದುಗೆ ಕೊನೆಯ ಎಚ್ಚರಿಕೆಯಂದೇ ಭಾವಿಸಲಾಗಿದ್ದು ಸಿದ್ದು ತಮ್ಮ ದಾರಿ ಬದಲಿಸದಿದ್ದರೆ ಅನಿವಾರ್ಯವಾಗಿ ಸಿದ್ದು ಅವರನ್ನು ಅವರ ಬೆಂಬಲಿಗರಿಂದ ಪ್ರತ್ಯೇಕಿಸುವ ಮಾರ್ಗಗಳನ್ನು ಹೈಕಮಾಂಡ್ ಈಗಾಗಲೇ ರೆಡಿಯಿರಿಸಿಕೊಂಡಿದೆ. ವಿಧಾನ ಸಭೆಯಲ್ಲಿ ಬಜೆಟ್ ಸೋಲಿಸಲು ಸಿದ್ದು ಗುಂಪಿಗೆ ಸಾಧ್ಯವೇ ಇಲ್ಲ. ಆ ಆಟವನ್ನು ಗಮನದಲ್ಲಿಟ್ಟುಕೊಂಡೇ ಕುಮಾರಸ್ವಾಮಿ ತಂತ್ರವೊಂದನ್ನು ಹೆಣೆದಿದ್ದಾರೆ. “ನಿಮಗೆ ಸಿದ್ದು ಬೇಕೊ, ರಾಷ್ಟ್ರ ಮಟ್ಟದ ರಾಜಕಾರಣ ಬೇಕೊ” ಎಂದು ದೇವೇಗೌಡರು ಕಾಂಗ್ರೆಸ್ ಹೈಕಮಾಂಡಿಗೆ ಕೇಳಿದರೆ ಹೈಕಮಾಂಡ ಏನು ಹೇಳಬಹುದೆಂಬುದು ಎಲ್ಲರಿಗೂ ಗೊತ್ತು! ಗುರುವಾರ ಸಿದ್ದು ಬೆಂಗಳೂರು ತಲುಪುವ ಹೊತ್ತಿಗೆ ಅವರು “ಬದಲಾಗಿದ್ದರೆ” ಅದಕ್ಕೆ ದಿಲ್ಲಿಯಲ್ಲಿರುವ ದೇವೇಗೌಡರೇ ಕಾರಣರಾಗಿರುತ್ತಾರೆ.!!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.