ಉತ್ತಮ ಸಮಾಜಕ್ಕಾಗಿ

ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು, ನಾಯಕರುಗಳ ಸಭೆ

Congress MLAs, Ministers and Leaders Meeting led by DCM Parameshwar

0

ಬೆಂಗಳೂರು: (news belagavi) ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಶಾಸಕರು, ಸಚಿವರು, ನಾಯಕರುಗಳ ಸಭೆ ನಡೆಯಿತು. ಸಭೆ ನಂತರ ಮಾತನಾಡಿದ ಪರಮೇಶ್ವರ್ ಅವರು, ಸಭೆಯಲ್ಲಿ ಲೋಕಸಭಾ ಚುನಾವಣೆ ವಿಚಾರ ಹೆಚ್ಚು ಸೀಟುಗಳನ್ನು ಗೆಲ್ಲಲು ಯಾವ ರಣನೀತಿ ಮಾಡಬೇಕೆಂದು ಚರ್ಚೆ ನಡೆಸಲಾಗಿದೆ. ಇದನ್ನ ಹೊರತುಪಡಿಸಿ ಬೇರೆ ಚರ್ಚೆ ನಡೆಸಿಲ್ಲ ಎಂದು ಹೇಳಿದರು.

ಎಐಸಿಸಿ ನೀಡಿದ ಸೂಚನೆಗಳ ಬಗ್ಗೆ ಚರ್ಚೆಯಾಗಿದೆ. ಮೈತ್ರಿ ಸರ್ಕಾರದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಸಚಿವರುಗಳಿಗೆ ಸೂಚನೆ ನೀಡಿದ್ದೇನೆ. ಸಭೆಯಲ್ಲಿ ಸಣ್ಣ ಪುಟ್ಟ ಗೊಂದಲದ ಬಗ್ಗೆ ಪ್ರಸ್ತಾಪವಾಗಿದ್ದು, ಇದನ್ನು ಸಿಎಂ ಜೊತೆ ಮಾತನಾಡಿ ಬಗೆಹರಿಸುವ ಭರವಸೆ ನೀಡಿದ್ದೇನೆ ಎಂದರು.

ಡಿಸಿಎಂ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು, ನಾಯಕರುಗಳ ಸಭೆ- Tarun kranti
ಜಿಲ್ಲಾ ಉಸ್ತುವಾರಿ ಸಚಿವರನ್ನ ಶೀಘ್ರ ನೇಮಿಸುವಂತೆ ಹೇಳಿದ್ದು, ಅದನ್ನು ಕೂಡಲೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದರು. ಮೈತ್ರಿ ಸರ್ಕಾರದಲ್ಲಿ ಪಕ್ಷ ಸಂಘಟನೆಯ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ ಲೋಕಸಭಾ ಚುನಾವಣೆ ಮೈತ್ರಿ ಕುರಿತು ಚರ್ಚಿಸಿಲ್ಲ. ಇಲ್ಲಿ ಚರ್ಚೆ ನಡೆದರೂ ಪ್ರಯೋಜನವಿಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಪರಮೇಶ್ವರ್ ತಿಳಿಸಿದರು.

ಆದರೆ ನಿಗಮ ಮಂಡಳಿ ಕುರಿತಂತೆ ಚರ್ಚೆ ನಡೆದಿದ್ದು, ಕೆಲವು ನಿಗಮದಲ್ಲಿ ಶಾಸಕರಿಗೆ ಅವಕಾಶ ಕಲ್ಪಿಸುತ್ತೇವೆ. ಶೀಘ್ರವಾಗಿ ಅಧ್ಯಕ್ಷ, ನಿರ್ದೇಶಕರ ನೇಮಕ ಮಾಡುತ್ತೇವೆ. ಯಾರಿಗೆ ಯಾವ ಯಾವ ಸ್ಥಾನ ನೀಡಬೇಕೆಂದು ಚರ್ಚೆ ನಡೆದಿದೆ. ಈ ಕುರಿತು ಧರ್ಮಸ್ಥಳದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಜೊತೆ ಚರ್ಚಿಸಿದ್ದೇವೆ ಎಂದು ಹೇಳಿದರು.

ಸಚಿವ ಸಂಪುಟ ರಚನೆ ವಿಚಾರ ಯಾವಾಗ ಬೇಕಾದರೂ ಸಚಿವ ಸಂಪುಟ ರಚನೆಯಾಗಬಹುದು, ನಿಗಮ ಮಂಡಳಿಗಿಂತ ಬೇಗ ಆಗಬಹುದು, ಆಗದಿರಬಹುದು ಎಂದು ಡಾ. ಜಿ ಪರಮೇಶ್ವರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಅಸಮಾಧಾನ ವಿಚಾರವಾಗಿ ಮಾತನಾಡಿದ ಡಾ. ಜಿ ಪರಮೇಶ್ವರ್, ಅವರು ಅಸಮಾಧಾನಗೊಂಡಿದ್ದಾರೆ ಅಂತ ನಿಮ್ಮ ಜೊತೆ ಹೇಳಿದ್ದಾರಾ.? ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಸಿದ್ದರಾಮಯ್ಯನವರ ಹೇಳಿಕೆ ವಿಚಾರ ಅದರ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆಯಾಗಿಲ್ಲ. ಅವರ ಹೇಳಿಕೆ ಬಗ್ಗೆ ನಾವು ಅವರನ್ನ ಕೇಳಿಯೂ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಾತ್ರ ಹೇಳಿಕೆ ನೀಡಬೇಕು. ಅದು ಬಿಟ್ಟು ಬೇರೆಯವರು ಹೇಳಿಕೆ ನೀಡದಂತೆ ಸೂಚಿಸಿದ್ದೇವೆ. ಸಿದ್ದರಾಮಯ್ಯ ನಮ್ಮ‌ ನಾಯಕರು ಸಿಎಲ್ ಪಿ ಲೀಡರ್, ಸಮನ್ವಯ ಸಮಿತಿ ಅಧ್ಯಕ್ಷರು, ಅವರ ಹೇಳಿಕೆಯನ್ನ ತಿರುಚಿ ಹಾಕುವುದು ಬೇಡ ಎಂದರು.

ಜುಲೈ ೧ ರಂದು ಸಮನ್ವಯ ಸಮಿತಿ ಸಭೆ ನಡೆಯಬೇಕಿದೆ. ಆದರೆ ಇನ್ನೂ ಅಂತಿಮವಾಗಿಲ್ಲ ಎಂದು ಇದೇ ವೇಳೆ ತಿಳಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.