ಉತ್ತಮ ಸಮಾಜಕ್ಕಾಗಿ

ಕಾಪಿ-ಪೇಸ್ಟ್ ಕುಮಾರಸ್ವಾಮಿ: ಅಶೋಕ ಚಂದರಗಿ ವ್ಯಂಗ್ಯ

Copy-paste Kumaraswamy: Ashoka Chandargi irony

0

ಬೆಳಗಾವಿ: (news belagavi)  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ವಿಧಾನ ಸಭೆಯಲ್ಲಿ ಮಂಡಿಸಿದ ಮುಂಗಡ ಪತ್ರವು ಬೆಳಗಾವಿ ಗಡಿ ಭಾಗದ ಜನತೆಯ ಪಾಲಿಗೆ ನಿರಶಾದಾಯಕ ಬಜೆಟ್ ಆಗಿದ್ದು ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷವೇ ಕಾರಣವಾಗಿದೆ ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಇಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾಪಿ-ಪೇಸ್ಟ್ ಕುಮಾರಸ್ವಾಮಿ: ಅಶೋಕ ಚಂದರಗಿ ವ್ಯಂಗ್ಯ- Tarun kranti
ಸುವರ್ಣ ಸೌಧಕ್ಕೆ ವಿಧಾನ ಸೌಧದ ಕಚೇರಿಗಳ ಸ್ಥಳಾಂತರ, ಬೆಳಗಾವಿಯಲ್ಲಿ ರಸ್ತೆ ಮೇಲ್ಸೇತುವೆಗಳ ನಿರ್ಮಾಣ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ವರ್ತುಲ ರಸ್ತೆಯ ನಿರ್ಮಾಣ, ಇಪ್ಪತ್ನಾಲ್ಕು ಗಂಟೆಗಳ ನೀರು ಪೂರೈಕೆಯ ಯೋಜನೆಯ ವಿಸ್ತರಣೆ, ಒಳಚರಂಡಿ ಯೋಜನೆಯ ಅನುಷ್ಠಾನ, ನೀರು ಪೂರೈಕೆ ಕೊಳವೆಗಳ ಜೋಡಣೆ ಇವೇ ಮುಂತಾದ ಪ್ರಸ್ತಾವಗಳನ್ನು ನಿರೀಕ್ಷಿಸಿದ್ದ ಬೆಳಗಾವಿ ಜನತೆಗೆ ಭಾರೀ ನಿರಾಶೆಯಾಗಿದೆ.

ಕಾಪಿ-ಪೇಸ್ಟ್ ಕುಮಾರಸ್ವಾಮಿ: ಅಶೋಕ ಚಂದರಗಿ ವ್ಯಂಗ್ಯ- Tarun kranti 1
ಮಲಪ್ರಭಾ ಬಲದಂಡೆ ಕಾಲುವೇ ಏಟಾ ನವೀಕರಣಕ್ಕೆ 950 ಕೋಟಿ ರೂ.ಮಂಜೂರು ಮಾಡಿಸಿಕೊಂಡು ಕೆಲಸವನ್ನೂ ಆರಂಭಿಸುವಲ್ಲಿ ಯಶಸ್ವಿಯಾದ ಗದಗ, ನರಗುಂದ, ನವಲಗುಂದ, ರೋಣ ಭಾಗದ ಜನಪ್ರತಿನಿಧಿಗಳನ್ನು ನೋಡಿ ನಮ್ಮ ಬೆಳಗಾವಿ ಬಾಗಲಕೋಟ ಭಾಗದ ಶಾಸಕರಿಗೆ ಮಜುಗುರವಾಗಬೇಕು ಎಂದು ಚಂದರಗಿ ಕಟುಕಿದ್ದಾರೆ. ಮಲಪ್ರಭೆ ಯೋಜನೆಯ ಎಡದಂಡೆ ಕಾಲುವೆಯು ಸವದತ್ತಿಯಿಂದ ಬದಾಮಿಯವರೆಗೆ ದುಸ್ಥಿತಿಯಲ್ಲಿದ್ದು ಅದರ ನವೀಕರಣಕ್ಕೆ ಸರಕಾರ ಹಣ ನೀಡಿಲ್ಲ. ಈ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸದ ನಮ್ಮ ಶಾಸಕರು, ಮಂತ್ರಿಗಳು ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಕೆಲಸವನ್ನೂ ಮಾಡಲಿಲ್ಲ. ಬದಲಾಗಿ ತಮಗೆ ಮಂತ್ರಿ ಪದವಿ ಸಿಗದಿದ್ದಕ್ಕೆ ಹೋರಾಟ-ಹಾರಾಟ ನಡೆಸಲು ಮುಂದಾದರು ಎಂದು ಖೇದ ವ್ಯಕ್ತಪಡಿಸಿದರು.

ಕಾಪಿ-ಪೇಸ್ಟ್ ಕುಮಾರಸ್ವಾಮಿ: ಅಶೋಕ ಚಂದರಗಿ ವ್ಯಂಗ್ಯ- Tarun kranti 2
ಇಂದಿನ ಬಜೆಟ್ ನಲ್ಲಿ ಸೂಪರ ಸ್ಪೆಶಾಲಟಿ ಆಸ್ಪತ್ರೆಯನ್ನು ಘೋಷಿಸಿರುವದು ಹಾಸ್ಯಾಸ್ಪದವಾಗಿದೆ. ಇದು ಮೂರು ವರ್ಷಗಳ ಹಿಂದೆಯೇ ಘೋಷಣೆಯಾಗಿದೆ. ಈಗ ಮತ್ತೆ “ಕಾಪಿ ಪೇಸ್ಟ” ಮಾಡಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿಯವರು ಬಜೆಟ್ ಚರ್ಚೆಗೆ ಉತ್ತರ ಕೊಡುವ ಸಮಯದಲ್ಲಾದರೂ ಈಗ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕೆಂದು ಎಂದು ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.