ಉತ್ತಮ ಸಮಾಜಕ್ಕಾಗಿ

news belgaum:ಅರೆಬರೆ ಬಟ್ಟೆಯಲ್ಲಿ ಕುಪ್ಪಳಿಸುತ್ತಿದ್ದ ಜೋಡಿಗಳನ್ನು ರೆಡ್ ಹ್ಯಾಂಡ್ ಹಿಡಿದಿದ್ದು ಹೊಟೇಲ್ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.

DCP seamers attacked

0

ಬೆಳಗಾವಿ:(news belgaum) ಬಹುದಿನಗಳಿಂದ ಕೇಳಿಬರುತ್ತಿದ್ದ ನಗರದ ಕಿರ್ಲೋಸ್ಕರ್ ರಸ್ತೆಯ ನಂಗಾನಾಚ್ ಡ್ಯಾನ್ಸ್ ಬಾರ್ ಮೇಲೆ ನಗರ ಪೊಲೀಸರು ದಾಳಿ ಮಾಡಿದ್ದು ಹೊಟೇಲ್ ಮೇಲೆ ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಪೊಲೀಸ್ ಆಯುಕ್ತ ಡಾ. ಡಿ. ಸಿ . ರಾಜಪ್ಪ ಸೂಚನೆ ಮೇರೆಗೆ ದಾಳಿ ನಡೆಸಿದ ಡಿಸಿಪಿ ಸೀಮಾ ಲಾಟಕರ ನೇತೃತ್ವದ ತಂಡ ಹೊಟೇಲ್ ಮೇಲ್ಭಾಗದಲ್ಲಿ ತಡರಾತ್ರಿ ಡಿಜೆ ಶಬ್ದಕ್ಕೆ ಹೆಜ್ಜೆ ಹಾಕಿ ಅರೆಬರೆ ಬಟ್ಟೆಯಲ್ಲಿ ಕುಪ್ಪಳಿಸುತ್ತಿದ್ದ ಜೋಡಿಗಳನ್ನು ರೆಡ್ ಹ್ಯಾಂಡ್ ಹಿಡಿದಿದ್ದು ಹೊಟೇಲ್ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಅರೆಬರೆ ಬಟ್ಟೆಯಲ್ಲಿ ಕುಪ್ಪಳಿಸುತ್ತಿದ್ದ ಜೋಡಿಗಳನ್ನು ರೆಡ್ ಹ್ಯಾಂಡ್ ಹಿಡಿದಿದ್ದು ಹೊಟೇಲ್ ಮೇಲೆ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.- Tarun krantiಪೊಲೀಸರ ದಾಳಿಯಿಂದ ಕಂಗಾಲಾದ ಅರೆಬರೆ ಸ್ಥಿತಿಯಲ್ಲಿದ್ದ ಜೋಡಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದು, ಮಾಧ್ಯಮಗಳಿಗೆ ದೃಶ್ಯಗಳು ಲಭ್ಯವಾಗಿವೆ. ಬಹು ಹಿಂದಿನಿಂದಲೇ ಯಾವುದೇ ಹೆದರಿಕರ ಬೆದರಿಕೆ ಇಲ್ಲದೇ ಈ ಅಕ್ರಮ ಚಟುವಟಿಕೆಗಳು ನಡೆದ ಬಗ್ಗೆ ವರದಿಗಳಾಗಿದ್ದು; ಪೊಲೀಸರ ಸೂಕ್ತ ಎಚ್ಚರಿಕೆಯ ನಂತರವೂ ಬಂದ್ ಆಗಿರಲಿಲ್ಲ ಎನ್ನಲಾಗಿದೆ. ರಾಜಕೀಯ ಬೆಂಬಲ ಪಡೆದ ಈ ಕೇಂದ್ರ್ ಮಾಲೀಕ ಪೊಲೀಸರಿಗೆ ಕ್ಯಾರೆ ಎನ್ನುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ರಾತ್ರಿ 10:30 ನಂತರವೂ ಮದ್ಯಸೇವನೆ ಮತ್ತು ನಂಗಾನಾಚ್ ಎಗ್ಗಿಲ್ಲದೇ ಓಪನ್ ಆಗಿಯೇ ನಡೆದುಕೊಂಡು ಬಂದಿದೆ. ಪೊಲೀಸ್ ದಾಳಿ ಬಹಳ ವಿಳಂಬವಾಗಿಯೇ ನಡೆದಿದೆ ಎಂದು ಸಾರ್ವಜನಿಕರು ಪ್ರತಿಕ್ರಿಯಿಸಿದ್ದಾರೆ. ಎಲ್ಲ ಜೋಡಿಗಳ ಮಾಹಿತಿ ಅವರ ಮನೆ ವಿಳಾಸ ಸಹಿತ ಕಲೆ ಹಾಕಿರುವ ಪೊಲೀಸರು ಹೊಟೇಲ್ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ವೈಶ್ಯಾವಾಟಿಕೆ ಮತ್ತು ಅಕ್ರಮ ಚಟುವಟಿಕೆಗಳ ಕೇಸ್ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.DCP seamers attacked

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.