ಉತ್ತಮ ಸಮಾಜಕ್ಕಾಗಿ

ತೋಟಗಾರಿಕೆ ಇಲಾಖೆ: ಅರ್ಜಿ ಆಹ್ವಾನ

Department of Horticulture: Application Invitation

0

ಬೆಳಗಾವಿ: (news belagavi) 2018-19ನೇ ಸಾಲಿನ ಬೆಳಗಾವಿ ತಾಲೂಕಿನ ತೋಟಗಾರಿಕೆ ಇಲಾಖೆ (ಜಿಪಂ) ವತಿಯಿಂದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಎಚ್.ಎಮ್) ಯೋಜನೆಯಡಿ ಮಾವು ಮತು ್ತ ಬಾಳೆ ಪ್ರದೇಶ ವಿಸ್ತರಣೆ,ಹೈಬ್ರೀಡ್ ತರಕಾರಿ ಪ್ರದೇಶ ವಿಸ್ತರಣೆ (SC,STರೈತರಿಗೆ ಮಾತ್ರ), ಬಿಡಿ ಹೂಗಳ ಪ್ರದೇಶ ವಿಸ್ತರಣೆ, ತರಕಾರಿ ಬೆಳೆಗಳಿಗೆ ಪ್ಲಾಸ್ಟೀಕಹೊದಿಕೆ , ಸಮುದಾಯ ಕೆರೆ, ಕೃಷಿಹೊಂಡ, ಶೀಥಲ ವಾಹನ,ಬಾಳೆ ಮಾಗಿಸುವ ಘಟಕ, ಹಸಿರು ಮನೆ ನಿರ್ಮಾಣ, ಕಾಜುಸಂಸ್ಕರಣಾ ಘಟಕ, ಶೀಥಲಗೃಹ, ಚಿಲ್ಲರೆ ಮಾರುಕಟ್ಟೆ ನಿರ್ಮಾಣ, ಅಣಬೆ ಉತ್ಪದನಾ ಘಟಕ(ಖಾಸಗಿ ವಲಯ) , ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ, ಆರ್.ಕೆ.ವಿ.ವಾಯ್ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ನಿಖರ ಬೇಸಾಯ (ಖಅ,ಖಖಿ ರೈತರಿಗೆ ಮಾತ್ರ), ರಾಜ್ಯ ವಲಯ ಯೋಜನೆಯಡಿ ಗೋಡಂಬಿ  ಪ್ರದೇಶ ವಿಸ್ತರಣೆ, ಸಸ್ಯ ಸಂರಕ್ಷಣಾ ಜೌಷಧಿ ಖರೀದಿಗೆ ಸಹಾಯಧನ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾವು, ಚಿಕ್ಕು, ಗೋಡಂಬಿ, ಬಾಳೆ, ಪಪಾಯಿ, ತೆಂಗು, ಪೇರಲ ಹಾಗೂ ಇತರೆ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳ ಅಭಿವೃದ್ದಿ ಯೋಜನೆಗಳಿಗೆ, ಗೋಡಂಬಿ, ಮಾವು ತೆಂಗು ಪುನಶ್ಚೇತನ ಹಾಗೂ ಕೊಳವೆ ಭಾವಿ ಮರುಪುರಣ(ಬೋರವೆಲ್ ರಿಚಾರ್ಜ)ಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಅತಿ ಸಣ್ಣ, ಮಹಿಳಾ ರೈತರನ್ನು ಮೊದಲು ಪರಿಗಣಿಸಲಾಗುವದು. ಮೊದಲ ಬಂದ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಲಾಗುವದು.

ಆಸಕ್ತ ರೈತರು ತಮ್ಮ ಬೇಡಿಕೆಗಳನ್ನು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ/ ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಬೆಳಗಾವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: