ಉತ್ತಮ ಸಮಾಜಕ್ಕಾಗಿ

ವಿವಿದ ಇಲಾಖೆಯ ಪ್ರಕಟಣೆಗಳು

Department of Publications

0

ಬೀದಿ ಬದಿಯ ವ್ಯಾಪಾರಸ್ಥರ ಗಮನಕ್ಕೆ

ಬೆಳಗಾವಿ: ಮಹಾನಗರ ವ್ಯಾಪ್ತಿಯಲ್ಲಿ ಬರುವ ಬೀದಿ ಬದಿ ಕಾಯಿಪಲ್ಲೆ ಮಾರಟಗಾರರು ರೂ.10, ತಳ್ಳುವ ಕಾಡಿಯ ಮೇಲೆ ಹಣ್ಣು, ತರಕಾರಿ ಹಾಗೂ ಇತರೆ ವ್ಯಾಪಾರಸ್ಥರು ರೂ. 50 ಹಾಗೂ ಪಾವಬಾಜಿ, ಬೇಲ್‍ಪುರಿ, ಐಸಕ್ರೀಮ್, ಪಾಸ್ಟಫುಡ್, ಏಳೆನೀರು, ಚೈನಿಸ್ ಫುಡ್ ಹಾಗೂ ಇನ್ನೀತರ ಯಾವುದೇ ಬಗೆಯ ಆಹಾರ ಪದಾರ್ಥಗಳನ್ನು ಬೀದಿ ಬದಿಯ ತಾತ್ಕಾಲಿಕ ವ್ಯಾಪಾರಸ್ಥರು ರೂ.100 ಭೂ ಬಾಡಿಗೆಯನ್ನು ಮಹಾನಗರ ಸಿಬ್ಬಂಧಿಗಳಿಗೆ ಮಾತ್ರ ನೀಡಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜ. 21 ರಂದು ಜಿಲ್ಲಾ ಮಟ್ಟದ ಬಂಜಾರ ಕಲಾ ಪ್ರತಿಭಾನ್ವೇಷಣೆಯ ಆಡಿಷನ್

ಬೆಳಗಾವಿ: ಕರ್ನಾಟಕ ತಂಡಾ ಅಭಿವೃದ್ಧಿ ನಿಮಗದ ವತಿಯಿಂದ ಜಿಲ್ಲಾ ಮಟ್ಟದ ಬಂಜಾರ ಕಲಾ ಪ್ರತಿಭಾನ್ವೇಷಣೆಯ ಆಡಿಷನ್‍ನ್ನು ಜನೇವರಿ 21 ರಂದು ಮುಂಜಾನೆ 8.35 ಗಂಟೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮರಾಠಾ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.
ಬಂಜಾರ ಕಲೆ, ಸಂಸ್ಕøತಿ, ಗಾಯನ ನೃತ್ಯ ಮತ್ತು ಇತರೆ ಸಾಪ್ರದಾಯಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಪ್ರಥಮ ಬಾರಿಗೆ ಪ್ರತಿ ವಲಯ ಕಚೇರಿ ಹಾಗೂ ಜಿಲ್ಲಾ ಪಟ್ಟದಲ್ಲಿ ಆಡಿಷನ್ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ : ಧಾರವಾಡ ವಲಯ- 0836-2221021, ಸಹಾಯಕ ಅಭಿಯಂತರಾದ ಸುನೀಲ್ ನಾಯ್ಕರ್- 9886188096, ಕ್ಷೇತ್ರ ಅಭಿವೃದ್ಧಿ ಸಹಾಯಕರಾದ ಬಾಬು ಚವ್ಹಾನ 9945211221 ಇವರನ್ನು ಸಂಪರ್ಕಿಸಬೇಕೆಂದು ಧಾರವಾಡದ ತಾಂಡಾ ಅಭಿವೃದ್ಧಿ ನಿಗಮದ ವಲಯ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಡುಗೆಯವರು-ಅಡುಗೆ ಸಹಾಯಕ ಹುದ್ದೆಗಳ ಕೌನ್ಸಿಲಿಂಗ್
ಬೆಳಗಾವಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇಲ್ಲಿ ಖಾಲಿಯಿರುವ ಅಡುಗೆಯವರು-80 ಮತ್ತು ಅಡುಗೆ ಸಹಾಯಕರು-92 ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೇ ಜಾರಿಯಲ್ಲಿದ್ದು, ಈಗಾಗಲೇ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಳಿಸಬೇಕಾಗಿದೆ.
ಅಡುಗೆಯವರು ಜನವರಿ 18 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಅಡುಗೆ ಸಹಾಯಕರು ಮಧ್ಯಾಹ್ನ 1.30 ರಿಂದ ಸಂಜೆ 5.30 ರವರೆಗೆ ಜಿಲ್ಲಾ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯಾಲಯ, ಬೆಳಗಾವಿ, ಡಿ.ಸಿ.ಕಂಪೌಂಡ, ಬೆಳಗಾವಿಯಲ್ಲಿ ಕೌನ್ಸಿಲಿಂಗ್ ನಡೆಸಲಾಗುತ್ತಿದೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿ ಇರುವ ಅರ್ಹ ಅಭ್ಯರ್ಥಿಗಳು ಈ ಮೇಲೆ ನಿಗಧಿಪಡಿಸಿದ ದಿನಾಂಕ ಹಾಗೂ ವೇಳೆಯಂದು ಹಾಜರಿರಲು ತಿಳಿಸಲಾಗಿದೆ. ಸರಿಯಾದ ವೇಳೆ ಹಾಗೂ ದಿನಾಂಕದಂದು ಹಾಜರಿರದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಖಾಲಿ ಹುದ್ದೆಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಅಧಿಕೃತ ವೆಬ್‍ಸೈಟ್ www.belgaum.nic.in/recruitment_new.htmlನಲ್ಲಿ ಪಡೆಯಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.