ಉತ್ತಮ ಸಮಾಜಕ್ಕಾಗಿ

ವಿವಿದ ಪ್ರಕಟಣೆಗಳು

0

ಎಸ್‍ಎಂಎಸ್ ಮೂಲಕ ಮತಗಟ್ಟೆಯ ಮಾಹಿತಿ
ಬೆಳಗಾವಿ:(tarunkranti) ಮೊಬೈಲ್‍ನಿಂದ ಎಸ್‍ಎಂಎಸ್ ಕಳುಹಿಸುವ ಮೂಲಕ ಮತದಾರರು ತÀಮ್ಮ ವಿಧಾನಸಭಾ ಮತಕ್ಷೇತ್ರ, ತಾವು ಮತದಾನ ಮಾಡಬೇಕಾದ ಮತಗಟ್ಟೆಯ ವಿಳಾಸ ಹಾಗೂ ಇನ್ನಿತರ ಮಾಹಿತಿಯನ್ನು ಸುಲಭವಾಗಿ ಪಡೆಯಲು ರಾಜ್ಯ ಚುನಾವಣಾ ಆಯೋಗ ಅನುಕೂಲವನ್ನು ಕಲ್ಪಿಸಿದೆ.
ಮತದಾರರು ತಮ್ಮ ಮೊಬೈಲ್‍ನಲ್ಲಿ ಏಂಇPIಅ ಎಂದು ಕ್ಯಾಪಿಟಲ್ ಅಕ್ಷರದಲ್ಲಿ ಟೈಪ್ ಮಾಡಿ, ಒಂದು ಸ್ಪೇಸ್ ಕೊಟ್ಟು, ತಮ್ಮ ಭಾವಚಿತ್ರವುಳ್ಳ ಮತದಾನದ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ, 9731979899 ಈ ಸಂಖ್ಯೆಗೆ ಸಂದೇಶವನ್ನು (ಎಸ್‍ಎಂಎಸ್) ಕಳುಹಿಸಬೇಕು. ನಂತರದ ಕೆಲವೇ ಕ್ಷಣ ಅಥವಾ ನಿಮಿಷಗಳಲ್ಲಿ ಮತದಾರರು ತಮ್ಮ ಮತಗಟ್ಟೆಯ ವಿವರವನ್ನು ಮೊಬೈಲ್‍ನಲ್ಲೇ ಪಡೆಯಬಹುದಾಗಿದೆ.
ಎಲ್ಲ ಮತದಾರರು ಇದನ್ನು ಸದುಪಯೋಗಿಸಿಕೊಂಡು ತಮ್ಮ ಮತಗಟ್ಟೆಯ ವಿವರವನ್ನು ಪಡೆದುಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ಮಂಗಳವಾರ ಕುಂದುಕೊರತೆ ಸಭೆ
ಬೆಳಗಾವಿ:(tarunkranti)  ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ, ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ಫಲಾನುಭವಿ ಆಧಾರಿತ ಯೋಜನೆಗಳು ಜಾರಿಯಲ್ಲಿವೆ.
ಈ ಬಗ್ಗೆ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಲು ಪ್ರತಿ ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಡಿ.ಸಿ ಕಚೇರಿ, ಬೆಳಗಾವಿಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.
ಸಾರ್ವಜನಿಕರು ತಮ್ಮ ಅಹವಾಲುಗಳಿದ್ದಲ್ಲಿ ಲಿಖಿತ ಮನವಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕೆಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನಸ್ಪಂದನಾ ಸಭೆ
ಬೆಳಗಾವಿ:(tarunkranti) ಹುಕ್ಕೇರಿಯ ಸಮಾಜ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಪ್ರತಿ ಮಂಗಳವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಜನಸ್ಪಂದನಾ ಕಾರ್ಯಕ್ರಮ ನಡೆಯಲಿದೆ.
ತಾಲೂಕು ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯದ ಜನರು ತಮ್ಮ ಅಹವಾಲುಗಳು ಇದ್ದಲ್ಲಿ ಲಿಖಿತ ಅರ್ಜಿಗಳನ್ನು ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹುಕ್ಕೇರಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್-2) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ದೂರುಗಳ ಪ್ರಾಧಿಕಾರ ;ಅರ್ಜಿ ಆಹ್ವಾನ
ಬೆಳಗಾವಿ:(tarunkranti)  ಬೆಳಗಾವಿ ಜಿಲ್ಲೆಯ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ನಿವೃತ್ತ ನಾಗರೀಕ ಸೇವಾ ಅಧಿಕಾರಿಗಳ ಸದಸ್ಯ ಸ್ಥಾನಕ್ಕೆ (ಸಹಾಯಕ ಆಯುಕ್ತರ ಹುದ್ದೆಗಿಂತ ಕಡಿಮೆಯಲ್ಲದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅಧಿಕಾರಿ) ಆಸಕ್ತಿವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಜನವರಿ 25 ರೊಳಗಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರ ಅಧ್ಯಕ್ಷರು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಇವರಿಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಇಲಾಖೆ ಇಲಾಖೆ ಪ್ರಕಟಣೆ ತಿಳಿಸಿದೆ.

 

 

Leave A Reply

 Click this button or press Ctrl+G to toggle between Kannada and English

Your email address will not be published.