ಉತ್ತಮ ಸಮಾಜಕ್ಕಾಗಿ

ಭೂತರಾಮನಹಟ್ಟಿ ಝೂ ಸ್ಮಾರ್ಟ್ ಯೋಜನೆಯಡಿ ₹2ಕೋಟಿಯಲ್ಲಿ ಅಭಿವೃದ್ಧಿ

news

0

ಬೆಳಗಾವಿ:(news belgaum) ಬೆಳಗಾವಿ ಅರಣ್ಯ ವಿಭಾಗ, ಕಾಕತಿ ವಲಯದ ಭೂತರಾಮನಹಟ್ಟಿ ಝೂ ಇನ್ನೂ ಪೂರ್ಣ ಪ್ರಾಣಿ ಸಂಗ್ರಹಾಲಯ ಆಗಿ ಪರಿವರ್ತನೆಗೊಳ್ಳಲಿದೆ. ಸ್ಮಾರ್ಟ ಸಿಟಿ ಯೋಜನೆ ಅಡಿ ₹2ಕೋಟಿ ಹಣ ಪಾಲಿಕೆ ಆಗಲೇ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದು, ಸುಸಜ್ಜಿತ ಝೂ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇತರ ಝೂ ಮಾದರಿಯಲ್ಲಿ ದೊಡ್ಡ ಮೃಗಗಳನ್ನು ಈ ಝೂನಲ್ಲಿ ಸಾಕಲು ಯೋಚನೆ ಮಾಡಲಾಗಿದೆ. ಪರಿಸರಕ್ಕೆ(Eco System)ಗೆ ಹೊಂದಿಕೊಳ್ಳುವ ಪ್ರಾಣಿಗಳ ಬಗ್ಗೆ ಪರಿಶೀಲನೆ ನಡೆದಿದ್ದು, ಹುಲಿ ಸಹಿತ ಇತರ ಪ್ರಾಣಿಗಳನ್ನು ಅಳವಡಿಸಲು ಅಧಿಕಾರಿಗಳು ಯೋಚಿಸಿದ್ದಾರೆ.
ಇಂದು ಸ್ಮಾರ್ಟ್ ಎಂಡಿ ಶಶಿಧರ ಕುರೇರ, ಡಿಸಿಎಫ್ ಎಂ. ವಿ.‌ಅಮರನಾಥ, ಎಸಿಪಿ ಸಂಗೊಳ್ಳಿ, ಆರ್ ಎಫ್ ಓ ನಾಗರಾಜ ಬಾಳೆಹೊಸೂರ, ಆರ್. ಎಸ್. ನಾಯಕ ಇಂದು ಪ್ರಾಣಿ ಸಂಗ್ರಹಾಲಯ ಪರಿಶೀಲಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.