ಉತ್ತಮ ಸಮಾಜಕ್ಕಾಗಿ

ಪಟ್ಟಣದ ಮಿನಿವಿಧಾನ ಸೌದ ಎದುರು ಕಳೆದ 10 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರDharani Satyagraha, conducted by District Action Committee for 10 days

Dharani Satyagraha, conducted by District Action Committee for 10 days

0
  • ರಾಜಕೀಯ ಮೇಲಾಟದಿಂದ ಚಿಕ್ಕೋಡಿ ಜಿಲ್ಲಾ ವಿಭಜನೆಗೆ ಹಿಂದೇಟು: ಚಿಂಚಲಿ ಅಲ್ಲಮಪ್ರಭು ಶ್ರೀ

  • ವಿವಿಧ ಸಂಘಟನೆಗಳಿಂದ ಹೋರಾಟಕ್ಕೆ ಬೆಂಬಲ.

  ಪಟ್ಟಣದ ಮಿನಿವಿಧಾನ ಸೌದ ಎದುರು ಕಳೆದ 10 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರDharani Satyagraha, conducted by District Action Committee for 10 days- Tarun krantiಚಿಕ್ಕೋಡಿ:(tarun kranti) ರಾಜಕೀಯ ಮೇಲಾಟದಿಂದ ಚಿಕ್ಕೋಡಿ ಜಿಲ್ಲಾ ವಿಭಜನೆಗೆ ಹಿಂದೇಟು ಆಗುತ್ತಿದೆ. ದಿಟ್ಟತನದಿಂದ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ವಿಭಜನೆ ಮಾಡುವುದು ಕಷ್ಟದ ಕೆಲಸವಲ್ಲ. ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲಾ ರಚನೆ ಮಾಡಬೇಕು ಎಂದು ಚಿಂಚಣಿಯ ಅಲ್ಲಮಪ್ರಭು ಮಹಾಸ್ವಾಮಿಗಳು ಒತ್ತಾಯಿಸಿದರು.

  ಪಟ್ಟಣದ ಮಿನಿವಿಧಾನ ಸೌದ ಎದುರು ಕಳೆದ 10 ದಿನಗಳಿಂದ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಬುಧುವಾರ ಪಾಲ್ಗೊಂಡು ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

  ಚಿಕ್ಕೋಡಿ ಜಿಲ್ಲೆಯಾಗಬೇಕು ಎಂಬುದು ಈ ಭಾಗದ ಜನರ ಬಹುದಿನದ ಬೇಡಿಕೆ. ಬೆಳಗಾವಿ ಜಿಲ್ಲೆ ವಿಭಜನೆಯಿಂದ ಯಾವುದೇ ತೊಂದರೆ ಇಲ್ಲ. ಇದಕ್ಕೆ ತಾಂತ್ರಿಕ ಯಾವುದೇ ತೊಂದರೆ ಇಲ್ಲ. ಬೆಳಗಾವಿ ಜಿಲ್ಲೆ ವಿಭಜನೆಯಾಗುವುದರಿಂದ ಎಂಇಎಸ್ ಪ್ರಾಬಲ್ಯ ಹೆಚ್ಚಾಗುತ್ತದೆ ಎಂದು ಕೆಲವು ಬುದ್ದಿಜೀವಿಗಳು ಹೇಳುತ್ತಿದ್ದಾರೆ. ಆದರೆ ಕನ್ನಡ ಘಟ್ಟಿಯಾಗಿ ಬೆಳೆದುನಿಂತಿದೆ. ಹೀಗಾಗಿ ಇಂದಿನ ದಿನಮಾನದಲ್ಲಿ ಎಂಇಎಸ್ ಪ್ರಾಬಲ್ಯವಿಲ್ಲ. ಬರುವ ಚುನಾವಣೆಗೂ ಮುನ್ನ ಚಿಕ್ಕೋಡಿ ಜಿಲ್ಲೆ ಮಾಡಬೇಕು. ಇಲ್ಲವಾದರೇ ಈ ಚುನಾವಣೆಯಲ್ಲಿ ಏರುಪೇರಾಗುವುದರಲ್ಲಿ ಸಂದೇಹವಿಲ್ಲ ಎಂದು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

  ಬೆಂಗಳೂರಿಗೆ ಹೋಗಿ ಸಿಎಂ ಮನೆ ಮುಂದೆ ಧರಣಿ ಮಾಡುವ ಬದಲು ಈ ಭಾಗದ ಎಂಎಲ್‍ಎ. ಎಂಪಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಿದರೇ ಜಿಲ್ಲೆ ತಾನಾಗಿಯೇ ಆಗುತ್ತದೆ ಎಂದರು.

  ರಾಜಕೀಯ ನಾಯಕರು ಹೋರಾಟಗಾರರ ತಾಳ್ಮೆ ಪರೀಕ್ಷೆ ಮಾಡದೇ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಗೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  ಸಮಿತಿ ಮುಖಂಡ ಬಿ.ಆರ್.ಸಂಗಪ್ಪಗೋಳ ಮಾತನಾಡಿ, ಈ ಭಾಗದ ರಾಜಕೀಯ ನಾಯಕರ ಇಚ್ಚಾಶಕ್ತಿಯ ಕೊರತೆಯಿಂದ ಚಿಕ್ಕೋಡಿ ಜಿಲ್ಲೆಗೆ ಹಿಂದೇಟು ಆಗುತ್ತಿದೆ. ಈ ಭಾಗದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಚಿಕ್ಕೋಡಿ ಜಿಲ್ಲಾ ಘೋಷಣೆ ಕುರಿತು ಗಂಬೀರವಾಗಿ ತೆಗೆದುಕೊಳ್ಳಬೇಕು. ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ನಿಮ್ಮ ಸುಳ್ಳು ಹೇಳಿಕೆಗೆ ಮಳ್ಳರಾಗುವಷ್ಟು ಬುದ್ದಿಗೇಡಿಗಳು ನಾವಲ್ಲ. ಕಾಂಗ್ರೆಸ್ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು, ಶಾಸಕರು ಸೇರಿಕೋಂಡು ಸಿಎಂ ಮೇಲೆ ಒತ್ತಡ ಹೇರಿ ಚಿಕ್ಕೋಡಿ ಜಿಲ್ಲಾ ಘೋಷಣೆಗೆ ಮುಂದಾಗಬೇಕು ಇಲ್ಲವಾದರೇ ಮುಂದಿನ ಚುನಾವಣೆಯಲ್ಲಿ ನಾವು ನಿಮಗೆ ಬುದ್ದಿಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

  ಮಾಜಿ ಶಾಸಕ ದತ್ತು ಹಕ್ಯಾಗೋಳ, ಶಂಕರ ಮಗದುಮ್ಮ, ಬಿ.ಬಿ.ಹಜಾರೆ, ಎಸ್.ವೈ.ಹಂಜಿ, ಚಂದ್ರಕಾಂತ ಹುಕ್ಕೇರಿ, ಸುರೇಶ ಬ್ಯಾಕೂಡೆ, ಸಂಜು ಬಡಿಗೇರ, ಕಾಡಗೌಡ ಪಾಟೀಲ, ನಾಗೇಶ ಮಾಳಿ, ಬಸವರಾಜ ಡಾಕೆ, ಎಂ.ಎ.ಪಾಟೀಲ ಹಾಗೂ ಕರವೇ, ಸಂಗೋಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ರಚನೆ ಹೋರಾಟ ಸಮಿತಿ, ಜಿಎಸ್‍ಇ ಸಂಸ್ಥೆಯ ಸಿಬ್ಬಂದಿ, ದಲಿತ ಸಂಘಟನೆ ಸೇರಿದಂತೆ ಇತರರು ಇದ್ದರು.Dharani Satyagraha, conducted by District Action Committee for 10 days 

  |  (  Belgaum News | Just Belgaum– ನ್ಯೂಸ್ ಬೆಳಗಾಂ

  ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

  ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.