ಉತ್ತಮ ಸಮಾಜಕ್ಕಾಗಿ

ನಾಡಕಚೇರಿಯಿಂದ ಜಿಲ್ಲೆಯಲ್ಲಿ 7,57,237 ಜಾತಿ ಪ್ರಮಾಣ ವಿತರಣ

Distribution of 7,57,237 species in the district from Nadakachariya

0

ನಾಡಕಚೇರಿಯಿಂದ ಜಿಲ್ಲೆಯಲ್ಲಿ 7,57,237 ಜಾತಿ ಪ್ರಮಾಣ ವಿತರಣ
ಬೆಳಗಾವಿ:(NEWS BELGAUM) ಕರ್ನಾಟಕ ಸಕಾರದ ಕಂದಾಯ ಇಲಾಖೆ ಬೆಳಗಾವಿ ಜಿಲ್ಲೆಯಲ್ಲಿ 2017-18 ರಲ್ಲಿ ಸುಮಾರು 7,57,237 ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ,ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳನ್ನು 35 ನಾಡಕಚೇರಿ ಮತ್ತು 24 ಮುಂಗಡ ಕಟ್ಟೆ ನಾಡಕಚೇರಿಗಳಿಂದ ನಾಗರೀಕರಿಗೆ ವಿತರಿಸುತ್ತಿದೆ.
ನಾಗರೀಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವ ಉದ್ದೇಶದಿಂದ ಪಡಿತರ ಚೀಟಿಯನ್ನು ಹೊಂದಿರುವ ಗ್ರಾಮೀಣ ಪ್ರದೇಶದ ನಾಗರೀಕರ ಜಾತಿ, ಆದಾಯ ಮತ್ತು ವಾಸಸ್ಥಳದ ಬಗ್ಗೆ ಕಂದಾಯ ಇಲಾಖೆಯು ತನ್ನ ಗ್ರಾಮ ಲೆಕ್ಕಿಗರನ್ನು ಮನೆ-ಮನೆಗೆ ನಿಯೋಜಿಸಿ, ಮಾಹಿತಿಗಳನ್ನು ಸಂಗ್ರಹಿಸಿ ತಹಶೀಲ್ದಾರರು ಹಾಗೂ ಉಪ ತಹಶೀಲ್ದಾರರಿಂದ ವಿದ್ಯುನ್ಮಾನವಾಗಿ ಸಹಿ ಮಾಡಿದ ಅಂದಾಜು 9,11,101 ಕುಟುಂಬಗಳ ಸುಮಾರು 31,54,762 ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಾಸಸ್ಥಳ ಪ್ರಮಾಣ ಪತ್ರಗಳನ್ನು ದತ್ತಾಂಶದಲ್ಲಿ ಸಿದ್ದಪಡಿಸಿಟ್ಟುಕೊಳ್ಳಲಾಗಿದೆ.
ರಾಜ್ಯದ ನಾಗರೀಕರು ಜಾತಿ, ಆದಾಯ, ಜಾತಿ ಮತ್ತು ಆದಾಯ ಹಾಗೂ ವಾಸಸ್ಥಳ ದೃಢಿಕರಣ ಪತ್ರಗಳಿಗಾಗಿ ಅರ್ಜಿಯನ್ನು ಸಲ್ಲಿಸಿದ ಕೂಡಲೇ, ‘e-ಕ್ಷಣ’ ಕಾರ್ಯಕ್ರಮದಡಿ ಅರ್ಜಿದಾರರು ಹೊಂದಿರುವ ಪಡಿತರ ಚೀಟಿಯ ಸಂಖ್ಯೆಯ ಆಧಾರದ ಮೇಲೆ ಅಥವಾ ಅವರ ಹೆಸರನ್ನು ದತ್ತಾಂಶದಲ್ಲಿ ಶೋಧಿಸಿ, ನಿಗಧಿತ ಅರ್ಜಿ ಶುಲ್ಕವನ್ನು ಪಡೆದುಕೊಂಡು, ಅವರ ಕೋರಿಕೆಯ ಪ್ರಮಾಣ ಪತ್ರವನ್ನು ಕೂಡಲೇ ವಿತರಿಸುವ ವ್ಯವಸ್ಥೆಯನ್ನು ಕಂದಾಯ ಇಲಾಖೆಯ ಬೆಳಗಾವಿ ಜಿಲೆಯ ಎಲ್ಲ ತಾಲೂಕುಗಳಲ್ಲಿ ಅನುಷ್ಠಾಣಗೊಳಿಸಿದ್ದು, ತಕ್ಷಣವೇ ಪ್ರಮಾಣ ಪತ್ರ ಪಡೆಯುವ ‘e-ಕ್ಷಣ’ ವ್ಯವಸ್ಥೆಯಡಿ 36,993 ಪ್ರಮಾಣ ಪತ್ರಗಳನ್ನು ಜಿಲ್ಲೆಯ ನಾಗರೀಕರು ಪಡೆದಿರುತ್ತಾರೆ ಎಂದು ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಪಾಯಿ : ವಾಹನ ಚಾಲನೆ ತರಬೇತಿ ಅರ್ಜಿ ಅವಧಿ ವಿಸ್ತರಣೆ
ಬೆಳಗಾವಿ: 2017-18ರ ಸಾಲಿನಲ್ಲಿ ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕ್ಯಾವೆಂಜರಗಳಿಗಾಗಿ ವಸತಿ ಯೋಜನೆ ಲಘು ಮತ್ತು ಭಾರಿ ವಾಹನೆ ಚಾಲನ ತರಬೇತಿ , ಉದ್ಯಮ ಶೀಲತೆ ಯೋಜನೆ (ಸ್ವಯಂ ಉದ್ಯೋಗ ಯೋಜನೆ) ನೇರ ಸಾಲ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆವ್ಹಾನಿಸಿಲಾಗಿದೆ.
ಈ ಯೋಜನೆಗೆ ಅರ್ಜಿಗಳು ಕಡಿಮೆ ಬಂದಿರುವುದರಿಂದ ಅರ್ಜಿಯನ್ನು ಸ್ವೀಕರಿಸುವ ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ. ಅರ್ಹ ಫಲಾನುಭವಿಗಳು ಅಗತ್ಯ ಧಾಖಲಾತಿಗಳೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಲು ಕೋರಿದೆ. ಅರ್ಜಿ ನಮೂನೆಗಳು ಬೆಳಗಾವಿ, ಸಫಾಯಿ ಕರ್ಮಚಾರಿಗಳ ಅಭಿವೃಧ್ಧಿ ನಿಗಮದ ಜಿಲ್ಲಾ ಅಧಿಕಾರಿಗಳ ಕಛೇರಿ ಮಹಾಂತೇಶ ನಗರ ಮೆಟಗುಡ್ ಬಿಲ್ಡಿಂಗ್ ಇಲ್ಲಿ ಲಭ್ಯವಿರುತ್ತದೆ ಎಂದು ಬೆಳಗಾವಿಯ ಸಫಾಯಿ ಕರ್ಮಚಾರಿಗಳ ಅಭಿವೃಧ್ಧಿ ನಿಗಮದ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Distribution of 7,57,237 species in the district from Nadakachariya

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.