ಉತ್ತಮ ಸಮಾಜಕ್ಕಾಗಿ

ಜಿಲ್ಲಾಮಟ್ಟದ ವಿವಿಧ ಸ್ಪರ್ಧೆ: ವಿಜೇತರಿಗೆ ಬಹುಮಾನ

district-level-different-competition-the-winners-are-rewarded

0

ಬೆಳಗಾವಿ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಗರದ ಜಿ.ಎ. ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾಮಟ್ಟದ ಪ್ರಬಂಧ, ಪೋಸ್ಟರ್ ಹಾಗೂ ಕೋಲಾಜ್ ಮೇಕಿಂಗ್ ಸ್ಪರ್ಧೆಗಳು ಜರುಗಿದವು.
ಸ್ಪರ್ಧೆಗಳಲ್ಲಿ ನಗರದ ಲಿಂಗರಾಜ ಕಾಲೇಜ್, ಸರ್ಧಾರ ಪ್ರೌಢಶಾಲೆ, ಹಿರೇಬಾಗೇವಾಡಿಯ ಕೆಸಿಪಿಯು ಹೈಸ್ಕೂಲ್, ಚನ್ನಮ್ಮನ ಕಿತ್ತೂರಿನ ಸರಕಾರಿ ಬಾಲಕಿಯರ ಪ್ರೌಢಶಾಲೆ, ಬೈಲಹೊಂಗಲ ಸರಕಾರಿ ಪಿಯುಸಿ ಕಾಲೇಜು ಸೇರಿದಂತೆ ಜಿಲ್ಲೆಯ ವಿವಿಧ ಶಾಲೆ, ಕಾಲೇಜಿನ ಒಟ್ಟು 34 ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ.

ಪ್ರಬಂಧ ಸ್ಪರ್ಧೆ:
ಕನ್ನಡ ಮಾಧ್ಯಮದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಶಾಲ ಕೊಣ್ಣೂರ ಪ್ರಥಮ, ಶಿವಬಸಪ್ಪ ಕಡಕೋಳ ದ್ವಿತೀಯ ಹಾಗೂ ಮುಸ್ಕಾನ ದನಸೋಲ ತೃತೀಯ ಸ್ಥಾನ ಪಡೆದರು.
ಇಂಗ್ಲೀಷ ಮಾಧ್ಯಮದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸಾನಿಯಾ ಕಳ್ಳೀಮನೆ ಪ್ರಥಮ, ಪೃಕೃತಿ ಹಳೇಗೌಡರ ದ್ವಿತೀಯ ಹಾಗೂ ಅನಿಕಾ ನಾಯಕ ತೃತೀಯ ಸ್ಥಾನ ಗಳಿಸಿದರು.

ಪೋಸ್ಟರ್ ಮೇಕಿಂಗ್:
ಪೋಸ್ಟರ್ ಮೇಕಿಂಗ್ ಸ್ಪರ್ಧೆಯಲ್ಲಿ ರಶ್ಮಿ ಸುತಾರ ಪ್ರಥಮ, ಸೋನಾ, ಕೊನಕೇರಿ ದ್ವತೀಯ ಹಾಗೂ ವಿಜಯಲಕ್ಷ್ಮೀ ಬಗನ್ನವರ ತೃತೀಯ ಸ್ಥಾನ ಪಡೆದರು.

ಕೋಲಾಜ್ ಮೇಕಿಂಗ್;
ಕೋಲಾಜ್ ಮೇಕಿಂಗ್ ಸ್ಪರ್ಧೆಯಲ್ಲಿ ಶಿವಾನಿ.ಎಚ್. ಪ್ರಥಮ, ಸುಕನ್ಯಾ ಬೋಸಲೆ ದ್ವಿತೀಯ ಹಾಗೂ ಚೈತ್ರಾ ಪಾಟೀಲ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು.
.
ಜ.23 ರಂದು ಜಿಪಂ ಸಾಮಾನ್ಯ ಸಭೆ
ಬೆಳಗಾವಿ: ಇಲ್ಲಿನ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜನವರಿ 23 ರಂದು ಜಿಲ್ಲಾ ಪಂಚಾಯತ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಂಥಾಲಯಗಳ ಮೇಲ್ವಿಚಾರಕರ ಹುದ್ದೆ: ಅರ್ಜಿ ಅವಧಿ ವಿಸ್ತರಣೆ
ಬೆಳಗಾವಿ: ಖಾಲಿಯಾದ ಗ್ರಾಮ ಪಂಚಾಯತ ಗ್ರಂಥಾಲಯಗಳಿಗೆ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಗಾಗಿ ಆಹ್ವಾನಿಸಲಾಗಿದ್ದ ಅರ್ಜಿಯ ಅವಧಿಯನ್ನು ಜನವರಿ 25 ರವರೆಗೆ ವಿಸ್ತರಿಸಲಾಗಿದೆ.
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರಿರಬೇಕು. (ಈ ಕುರಿತು ರಹವಾಸಿ ಪ್ರಮಾಣ ಪತ್ರ ಲಗತ್ತಿಸಿರಬೇಕು), ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸತಕ್ಕದ್ದು.
ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಟಿ.ಸಿ, ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ರಹವಾಸಿ ಪ್ರಮಾಣ ಪತ್ರ, ಅಂಗವಿಕಲತೆ ಇದ್ದಲ್ಲಿ ದೃಢೀಕರಣ ಪತ್ರ) 2018ರ ಜನವರಿ 25 ರೊಳಗಾಗಿ ‘ಉಪನಿರ್ದೇಶಕರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಬೆಳಗಾವಿ’ ಇವರಿಗೆ ಸಲ್ಲಿಸಬೇಕು.

ಮೀಸಲಾತಿ-ಗ್ರಂಥಾಲಯಗಳ ವಿವರ:

ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮ ಪಂಚಾಯತಿ 3 `ಎ’ (ಯೋಜನಾ ಅಭ್ಯರ್ಥಿ), ಬೆಳಗಾವಿ ತಾಲೂಕಿನ ಬೆಳವಟ್ಟಿ ಗ್ರಾಮ ಪಂಚಾಯತಿ ಸಾಮಾನ್ಯ ಅಭ್ಯರ್ಥಿ (ವiಹಿಳಾ ಅಭ್ಯರ್ಥಿ), ಬೈಲಹೊಂಗಲ ತಾಲೂಕಿನ ಬುಡರ್‍ಕಟ್ಟಿ ಗ್ರಾಮ ಪಂಚಾಯತಿ 3 `ಬಿ’ (ಅಂಗವಿಕಲ ಅಭ್ಯರ್ಥಿ) ಅಥಣಿ ತಾಲೂಕಿನ ಹಲ್ಯಾಳ ಗ್ರಾಮ ಪಂಚಾಯತಿ ಸಾಮಾನ್ಯ ಅಭ್ಯರ್ಥಿ (ಮಾಜಿ ಸೈನಿಕ ಅಭ್ಯರ್ಥಿ), ರಾಯಬಾಗ ತಾಲೂಕಿನ ಜಲಾಲಪೂರ ಗ್ರಾಮ ಪಂಚಾಯತಿ 2 `ಎ’ ಈ ಪಂಚಾಯತಿಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೇಂದ್ರ ಗ್ರಂಥಾಲಯ ಬೆಳಗಾವಿ ಕಚೇರಿ, ದೂ: 0831-2424231 ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿ ಶಾಲೆ: ಅರ್ಜಿ ಅವಧಿ ವಿಸ್ತರಣೆ
ಬೆಳಗಾವಿ: 2018-19ನೇ ಸಾಲಿಗೆ ಬೆಳಗಾವಿ ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಏಕಲವ್ಯ ಮಾದರಿ, ಡಾ. ಬಿ.ಆರ್. ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಪರೀಕ್ಷೆ-2018ರ ಅರ್ಜಿ ವಿತರಿಸುವ ಮತ್ತು ಸ್ವೀಕರಿಸುವ ದಿನಾಂಕವನ್ನು ಜನವರಿ 25 ರವರೆಗೆ ವಿಸ್ತರಿಸಲಾಗಿದೆ.
ಆಸಕ್ತರು ಜ.25 ರೊಳಗಾಗಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಕಚೇರಿ ಹಾಗೂ ಶಾಲೆಗಳಲ್ಲಿ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.