ಉತ್ತಮ ಸಮಾಜಕ್ಕಾಗಿ

ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ಬಳಲುತ್ತಿವೆ : ಡಾ. ಬರಗೂರುರಾಮಚಂದ್ರಪ್ಪ

news

0

ಬೆಳಗಾವಿ:(news belgaum)ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ವಿಶ್ವಾಸರ್ಹತೆಯ ಬಿಕ್ಕಟ್ಟಿನಿಂದ ಬಳಲುತ್ತಿವೆ. ಇದರ ಪರಿಣಾಮವಾಗಿಎಲ್ಲ ಕ್ಷೇತ್ರಗಳಲ್ಲಿಯೂ ಅಧಃಪತನ ನಡೆಯುತ್ತಿದೆ. ನಾವೆಲ್ಲಇಂದು ನಾಗರ ನಾಲಿಗೆಗಳ ಕಾಲದಲ್ಲಿ ಬದುಕುತ್ತಿದ್ದೇವೆ. ನಮಗೆ ಸ್ವಚ್ಛ ಭಾರತಕ್ಕಿಂತ ಭಾವ ಭಾರತ ಬಾಯಿ ಭಾರತ ಬೇಕಾಗಿದೆ. ಭಾವ ಮತ್ತು ಬಾಯಿಗಳು ಮೊದಲು ಸ್ವಚ್ಛವಾಗಬೇಕಾಗಿದೆ. ಜನ ಸಾಹಿತ್ಯಕ್ಷೇತ್ರದಿಂದಜವಾಬ್ದಾರಿಯನ್ನು ನಿರೀಕ್ಷಿಸುತ್ತಾರೆ. ಈ ಜವಾಬ್ದಾರಿಯನ್ನು ಸಾಹಿತಿಗಳಾದ ನಾವು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕಾಗಿದೆ.
News Belgaum-ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ಬಳಲುತ್ತಿವೆ : ಡಾ. ಬರಗೂರುರಾಮಚಂದ್ರಪ್ಪ 2 News Belgaum-ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ಬಳಲುತ್ತಿವೆ : ಡಾ. ಬರಗೂರುರಾಮಚಂದ್ರಪ್ಪ 3 News Belgaum-ಸಾಹಿತ್ಯ ಮತ್ತು ಸಾಂಸ್ಕøತಿಕ ಕ್ಷೇತ್ರಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ಬಳಲುತ್ತಿವೆ : ಡಾ. ಬರಗೂರುರಾಮಚಂದ್ರಪ್ಪ 4ಖ್ಯಾತ ವಿದ್ವಾಂಸಡಾ. ಬರಗೂರುರಾಮಚಂದ್ರಪ್ಪನವರು ಬೆಳಗಾವಿಯಲ್ಲಿ ಜರುಗಿದಡಾ. ಬೆಟಗೇರಿಕೃಷ್ಣಶರ್ಮಕಾದಂಬರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ನಗರದ ಬಸವರಾಜಕಟ್ಟೀಮನಿ ಸಭಾಭವನದಲ್ಲಿ ಭಾನುವಾರ ದಿನಾಂಕ 16-9-2018ರಂದು ಜರುಗಿದ ಬೆಟಗೇರಿಕೃಷ್ಣಶರ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಅವರು ಮಾತನಾಡುತ್ತ ಮುಂದುವರಿದು-
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇಂದು ವಿವೇಕ ಮತ್ತು ವಿವೇಚನೆಯಿಂದ ವರ್ತಿಸಬೇಕಾಗಿದೆ. ಔಚಿತ್ಯದಅಭಾವಕಾರಣವಾಗಿಇಂದುಕರ್ನಾಟಕದಲ್ಲಿ 23 ಟ್ರಸ್ಟ್‍ಗಳಲ್ಲಿ ತಾರತಮ್ಯವನ್ನು ಮಾಡಲಾಗುತ್ತಿದೆ. ಪ್ರಶಸ್ತಿ ಮೊತ್ತದಲ್ಲಿಯೂ ಈ ತಾರತಮ್ಯ ಮುಂದುವರಿದಿದೆ. ಇಂಥ ಕ್ಷೇತ್ರಗಳಲ್ಲಿ ರಾಜಕೀಯ ಪ್ರಭಾವಇರಬಾರದು. ಸರಕಾರ ಈ ಸಾಂಸ್ಕøತಿಕಟ್ರಸ್ಟ್ ಗಳಿಗೆ ಸ್ವಾಯತ್ತಅಧಿಕಾರವನ್ನು ನೀಡಿ ಅವುಗಳನ್ನು ಸ್ವಾವಲಂಬಿಯನ್ನಾಗಿ ಮಾಡಬೇಕಾಗಿದೆ.ಇಂದು ಸಾಂಸ್ಕøತಿಕ ಪರಕೀಯತೆಯಿಂದ ಬಳಲುತ್ತಿರುವ ನಾವು ಕರ್ನಾಟಕಒಡೆಯುವ ಮಾತನಾಡುತ್ತಿದ್ದೇವೆ. ರಾಜ್ಯವನ್ನುಒಡೆಯುವುದರಿಂದಅಭಿವೃದ್ಧಿಯಅಸಮತೋಲನ ನಿವಾರಣೆ ಸಾಧ್ಯವಿಲ್ಲ. ಏಕೀಕರಣವೆಂದರೆ ಕೇವಲ ಭೂಗೋಲವಲ್ಲ, ಅದು ಭಾವ ಭೂಗೋಲವಾಗಬೇಕು. ಆದ್ದರಿಂದ ಸರ್ಕಾರ ನಾಲ್ಕು ಕಂದಾಯ ವಲಯಗಳಲ್ಲಿ ನಾಲ್ಕು ಸಚಿವ ಸಂಪುಟಗಳನ್ನು ಅಸ್ತಿತ್ವಕ್ಕೆ ತರಬೇಕು. ಇದರಿಂದಅಧಿಕಾರ ವಿಕೇಂದ್ರಿಕರಣವಾಗಿಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಹಿರಿಯರು ಮಾಡಿದಏಕೀಕರಣವನ್ನುಒಡೆಯುವುದು ಬೇಡ. ಸಾಹಿತ್ಯ ಶ್ರೇಷ್ಠವೆಂದು ನಾನು ನಂಬಿದವನಲ್ಲಅದಕ್ಕಿಂತಲೂ ಬದುಕು ಮುಖ್ಯವೆಂದು ಬದುಕಿದವನು. ಆದ್ದರಿಂದ ನಾವು ಮೊದಲು ಒಳ್ಳೆಯ ಮನುಷ್ಯರಾಗಬೇಕು. ಅದರಿಂದ ಒಳ್ಳೆಯ ಸಾಹಿತ್ಯ ನಿರ್ಮಾಣ ಸಾಧ್ಯವಾಗುತ್ತದೆ. ದನಕಾಯುವ ಹುಡುಗನಾಗಿದ್ದ ನಾನು ಇಂದು ಬೆಳಗಾವಿಯಂಥ ಪ್ರತಿಷ್ಠಿತ ನಗರದಲ್ಲಿಡಾ. ಬೆಟಗೇರಿಕೃಷ್ಣಶರ್ಮರಕಾದಂಬರಿ ಪ್ರಶಸ್ತಿ ಪಡೆಯುತ್ತಿರುವುದು ನನ್ನಲ್ಲಿಧನ್ಯತೆಯ ಭಾವವನ್ನುತಂದಿದೆ. ಬೆಟಗೇರಿಕೃಷ್ಣಶರ್ಮರಂಥ ಪರಂಪರೆಯ ಪ್ರಜ್ಞೆಯುಳ್ಳ ವಿದ್ವಾಂಸರಿಂದಕನ್ನಡ ಸಾಹಿತ್ಯಕ್ಕೆಒಂದು ಬೆಲೆಯುಳ್ಳ ಕಾಣಿಕೆ ಸಂದಾಯವಾಗಿದೆ. ಬೆಟಗೇರಿಕೃಷ್ಣಶರ್ಮರು ಸ್ವಾತಂತ್ರ್ಯಆಂದೋಲನ ಮತ್ತುಕರ್ನಾಟಕಏಕೀಕರಣ ಚಳುವಳಿಯ ಘಟ್ಟದಲ್ಲಿ ಸಮಕಾಲೀನ ಸಂದರ್ಭದ ವಿಮರ್ಶೆಯನ್ನು ಮಾಡುವ ಮೂಲಕ ಸಾಹಿತ್ಯಲೋಕಕ್ಕೆ ಹೊಸ ಬೆಳಕನ್ನು ತಂದುಕೊಟ್ಟವರು. ಅವರ ಹೆಸರಿನ ಪ್ರಶಸ್ತಿಯನ್ನು ಮಧ್ಯಕರ್ನಾಟಕ, ಮೈಸೂರುಕರ್ನಾಟಕ, ಉತ್ತರಕರ್ನಾಟಕದಮೂವರು ವಿದ್ವಾಂಸರಿಗೆಕೃಷ್ಣಶರ್ಮರ ನೆನಪಿನ ಪ್ರಶಸ್ತಿಯನ್ನು ಕೊಡಮಾಡಿದ್ದು ನಿಜವಾಗಿಯೂಅಪ್ರಜ್ಞಾಪೂರ್ವಕಏಕೀಕರಣ ಸಾಧಿಸಿದಂತಾಗಿದೆ ಎಂದು ಹೃದಯತುಂಬಿ ಹೇಳಿದರು.
ಡಾ. ಬೆಟಗೇರಿಕೃಷ್ಣಶರ್ಮ ಕಾವ್ಯಪ್ರಶಸ್ತಿ ಸ್ವೀಕರಿಸಿದ ಖ್ಯಾತ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಅವರು ಮಾತನಾಡಿ ನಾನು ಗೌರವಿಸುವ ಮಹತ್ವದ ಲೇಖಕರಲ್ಲಿ ಬೆಟಗೇರಿಕೃಷ್ಣಶರ್ಮರು ಪ್ರಮುಖರು. ಯಾರು ಸಂಸ್ಕøತಿಯ ನೆನಪಿನಲ್ಲಿರುತ್ತಾರೋಅವರು ಸದಾಕಾಲ ಜೀವಂತವಾಗಿರುತ್ತಾರೆ. ಈ ಹಿನ್ನೆಲೆಯಲ್ಲಿಆನಂದಕಂದರು ಚಿರಾಯುಗಳಾಗಿದ್ದಾರೆ. ಆನಂದಕಂದರುತಮ್ಮ ಸಾಹಿತ್ಯದ ಮೂಲಕ ಕನ್ನಡದಎಲ್ಲ ಕ್ಲೇಶಗಳಿಗೆ ಪರಿಹಾರ ನೀಡಿದರು. ಹೀಗಾಗಿ ಅವರ ಪರಂಪರೆಯನ್ನು ನಾವು ಇಂದು ಮುಂದುವರಿಸಿದ್ದೇವೆ. ಅದೇಅವರಿಗೆ ನಾವು ಸಲ್ಲಿಸುವಗೌರವವಾಗಿದೆಎಂದು ಮನದುಂಬಿ ಹೇಳಿದರು.
ಡಾ.ಬೆಟಗೇರಿಕೃಷ್ಣಶರ್ಮ ಕಥಾಪ್ರಶಸ್ತಿ ಸ್ವೀಕರಿಸಿ ಮಾತನಾಡಿದಡಾ. ಮನು ಬಳಿಗಾರ ಅವರು-ಬಾಲ್ಯದಲ್ಲಿ ನನ್ನ ಮೇಲೆ ಬೆಟಗೇರಿಕೃಷ್ಣಶರ್ಮರ ಪ್ರಭಾವಾಗಿದೆ. ಅವರಿಂದ ಪ್ರೌಢಶಾಲೆಯಲ್ಲಿಯೇ ಪ್ರಶಸ್ತಿ ಪಡೆದಿದ್ದ ನನಗೆ ಇಂದುಅವರ ಹೆಸರಿನ ಪ್ರಶಸ್ತಿ ಬಂದುದು ನನ್ನ ಸೌಭಾಗ್ಯವೆಂದು ಹೇಳಿದರು. ಸರಕಾರ ಪ್ರಶಸ್ತಿಯ ಮೊತ್ತವನ್ನು ಕಡಿತಗೊಳಿಸಿದ್ದು ಸರಿಯಲ್ಲ. ಸಾಹಿತ್ಯಿಕ-ಸಾಂಸ್ಕøತಿಕಕ್ಷೇತ್ರದಲ್ಲಿತಾರತಮ್ಯ ಮಾಡಬಾರದು. ಸರಕಾರಇಂಥಟ್ರಸ್ಟ್ ಗಳಿಗೆ ಹೆಚ್ಚು ಹೆಚ್ಚು ಅನುದಾನ ನೀಡುವ ಮೂಲಕ ಜಾನಪದ ಕಾಲವಿದರ-ಕಲಾಪ್ರಕಾರಗಳನ್ನು ಬೆಳಕಿಗೆ ತರುವಕಾರ್ಯ ಮಾಡಬೇಕೆಂದು ಹೇಳಿದರು.
ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ವಿದ್ವಾಂಸಡಾ. ಗುರುಲಿಂಗ ಕಾಪಸೆ ಅವರು ಮಾತನಾಡಿಕನ್ನಡ ಸಾಹಿತ್ಯದಲ್ಲಿಒಂದುದೊಡ್ಡ ಪರಂಪರೆಯೇ ಬೆಳೆದು ಬಂದಿದೆ. ಪರಂಪರೆಯಿಲ್ಲದೆ ಪ್ರಗತಿ ಸಾಧ್ಯವಿಲ್ಲ. ಭಾಷೆ-ವಸ್ತು-ಲಯದಲ್ಲಿ ಕುವೆಂಪು-ಬೇಂದ್ರೆ-ಕಾರಂತ-ಆನಂದಕಂದರು ಮಾಡಿದ ಪ್ರಯೋಗ ಭಾರತದಲ್ಲಿಯೇ ಮೊದಲನೆಯದು. ಕನ್ನಡ ಸಾಹಿತ್ಯಲೋಕಕ್ಕೆ ಬೆಟಗೇರಿಕೃಷ್ಣಶರ್ಮರು ನೀಡಿದಕಾಣಿಕೆಅಪೂರ್ವ ಮತ್ತುಅನನ್ಯವಾಗಿದೆ. ಮಹರ್ಷಿಅರವಿಂದರುದೈಹಿಕ ವಿಕಾಸ, ಬೌದ್ಧಿಕ ವಿಕಾಸ ಮತ್ತುಅಧ್ಯಾತ್ಮಿಕ ವಿಕಾಸಗಳನ್ನು ಹೇಳಿದ್ದರು. ಪ್ರಶಸ್ತಿ ಪಡೆದ ವಿದ್ವಾಂಸರಲ್ಲಿ ಸೌಜನ್ಯ ಮತ್ತು ಸಾಮಥ್ರ್ಯವಿರುವುದರಿಂದಅರವಿಂದರು ಹೇಳಿದ ಈ ಮೂರು ವಿಕಾಸಗಳನ್ನು ಅಭಿವೃದ್ಧಿಪಡಿಸುವ ಅವಕಾಶಗಳು ಬಹಳಷ್ಟಿವೆ. ಅವುಗಳಿಂದ ಕನ್ನಡ ಸಾಹಿತ್ಯಲೋಕ ಹೊಸದನ್ನುಕಾಣಲಿ ಎಂದು ಹಾರೈಸಿದರು.
ವಿದ್ವಾಂಸರಾದಡಾ. ವೆಂಕಟಗಿರಿ ದಳವಾಯಿ ಅವರುಅಭಿನಂದನ ನುಡಿಗಳನ್ನಾಡಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಟ್ರಸ್ಟ್‍ಅಧ್ಯಕ್ಷರಾದ ಪ್ರೊ. ರಾಘವೇಂದ್ರ ಪಾಟೀಲ ಅವರು ವಹಿಸಿದ್ದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿಗಳಾದ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಡಾ. ಸಿ. ಕೆ. ನಾವಲಗಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಸರಜೂಕಾಟ್ಕರ್‍ಅವರು ಪ್ರಶಸ್ತಿ ವಾಚನ ಮಾಡಿದರು. ಪ್ರೊ. ಚಂದ್ರಶೇಖರ ವಸ್ತ್ರದಕಾರ್ಯಕ್ರಮ ನಿರೂಪಿಸಿದರು. ಆಶಾ ಕಡಪಟ್ಟಿಅವರು ವಂದನಾರ್ಪಣೆ ಮಾಡಿದರು. ಪ್ರಾರಂಭದಲ್ಲಿಡಾ. ನಿರ್ಮಲಾ ಬಟ್ಟಲ ಹಾಗೂ ನಯನಾಗಿರಿಗೌಡರ ನೇತೃತ್ವದ ಎಮ್.ಎಸ್.ಆರ್.ಬಿ.ಎಡ್. ಕಾಲೇಜ ವಿದ್ಯಾರ್ಥಿಗಳಿಂದ “ಎನಿತುಇನಿದು ಈ ಕನ್ನಡನುಡಿಯು”ಸ್ವಾಗತಗೀತೆಹಾಡಿದರು.

ಗಡಿಪ್ರದೇಶದಲ್ಲಿಕನ್ನಡದ ಕೆಲಸವನ್ನು ಸಮರ್ಥರೀತಿಯಿಂದ ಮಾಡುತ್ತಿರುವಟ್ರಸ್ಟ್ ಗಳಿಗೆ ಕನ್ನಡ ಮತ್ತು ಸಂಸ್ಕøತಿಇಲಾಖೆಯ ಕೆಲವು ಹಿರಿಯ ಅಧಿಕಾರಿಗಳೇ ಅಡ್ಡಗಾಲನ್ನು ಹಾಕುತ್ತಿದ್ದಾರೆಂದು ಬೆಟಗೇರಿಕೃಷ್ಣಶರ್ಮಟ್ರಸ್ಟ್‍ಅಧ್ಯಕ್ಷರಾದ ಪ್ರೊ. ರಾಘವೇಂದ್ರ ಪಾಟೀಲ ಅವರುಅಸಮಾಧಾನವನ್ನು ವ್ಯಕ್ತಪಡಿಸಿದರು.
ಡಾ. ಬೆಟಗೇರಿಕೃಷ್ಣಶರ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಅಧ್ಯಕ್ಷತೆಯನ್ನು ವಹಿಸಿ ಇಂದಿಲ್ಲಿ ಮಾತನಾಡುತ್ತಿದ್ದ ಪ್ರೊ. ಪಾಟೀಲ ಅವರು ಸಂಸ್ಕøತಿಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಟ್ರಸ್ಟಿನ ಪ್ರತಿಯೊಂದುಕಾರ್ಯಕ್ರಮದಲ್ಲಿತಮ್ಮ ಮೂಗು ತೂರಿಸಿ ಕನ್ನಡದ ಕಾರ್ಯಕಲಾಪಗಳಲ್ಲಿ ಅಡ್ಡಿಯನ್ನುಂಟು ಮಾಡುತ್ತಿದ್ದಾರೆಎಂದುದೂರಿದರು.
ಸಂಸ್ಕøತಿಇಲಾಖೆಯು ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಟ್ರಸ್ಟಗಳಿಗೆ ಅತಿ ಹೆಚ್ಚು ಅನುದಾನವನ್ನು ನೀಡುತ್ತಿದ್ದು, ಈ ಕಡೆಯಟ್ರಸ್ಟ್ ಗಳಿಗೆ ಅನುದಾನದಲ್ಲಿಕಡಿತವನ್ನು ಮಾಡುತ್ತಿದ್ದಾರೆಂದು ಹೇಳಿದರು.
ಟ್ರಸ್ಟ್‍ನ ಘಟನಾವಳಿಯಲ್ಲಿ ಅವಶ್ಯಕತೆಯಿದ್ದಾಗ ಸಭೆಗಳನ್ನು ನಡೆಸಬೇಕೆಂದು ಹೇಳಿದ್ದರೂ ಅಧಿಕಾರಿಗಳು 6 ತಿಂಗಳಿಗೆ ಒಂದು ಸಲ ಮಾತ್ರ ಸಭೆ ನಡೆಸಬೇಕೆಂದುಕರಾರು ಹಾಕುತ್ತಿದ್ದಾರೆ. ಪ್ರಶಸ್ತಿಯ ಮೊತ್ತವನ್ನು ಹತ್ತು ಸಾವಿರರೂಪಾಯಿಗೆ ಮಾತ್ರ ಸೀಮಿತಗೊಳಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಈ ತರದ ಕರಾರುಗಳು ಕನ್ನಡದ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತವೆಎಂದು ಪ್ರೊ. ಪಾಟೀಲ ಖೇದ ವ್ಯಕ್ತಪಡಿಸಿದರು.
ಇದುವರೆಗೆಕನ್ನಡ ಮತ್ತು ಸಂಸ್ಕøತಿ ಇಲಾಖೆ ಟ್ರಸ್ಟಗಳಿಗೆ ಕೊಟ್ಟಿರುವ ಸ್ವಾಯತ್ತತೆಯನ್ನು ಹಿಂತೆಗೆದುಕೊಳ್ಳುವ ಕೆಲಸಕ್ಕೆ ಕೈಹಾಕಿದೆ. ಇದರಿಂದಎಲ್ಲಟ್ರಸ್ಟ್ ಗಳು ಒಂದುರೀತಿಯ ಪಾರತಂತ್ರ್ಯವನ್ನುಅನುಭವಿಸುತ್ತಿವೆ.
ಇಲಾಖೆಯ ಹಿರಿಯ ಅಧಿಕಾರಿಗಳು ಹೊಸ ಆದೇಶಗಳನ್ನು ಹೊರಡಿಸುವ ಪೂರ್ವದಲ್ಲಿಎಲ್ಲ ಟ್ರಸ್ಟ್‍ಗಳ ಅಧ್ಯಕ್ಷರ ಹಾಗು ತಜ್ಞರ ಸಮಕ್ಷಮ ಸಭೆಕರೆದು ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಪ್ರೊ. ಪಾಟೀಲ ಅವರು ಒತ್ತಾಯಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.