ಉತ್ತಮ ಸಮಾಜಕ್ಕಾಗಿ

ಡಾ|| ರಾಜಕುಮಾರ ಜನ್ಮದಿನಾಚರಣೆ ಕಾರ್ಯಕ್ರಮ ಡಾ|| ರಾಜಕುಮಾರ ಜಾಗತಿಕ ಮಟ್ಟದ ಶ್ರೇಷ್ಠ ಕಲಾವಿದ: – ಸಾಹಿತಿ ಬಸವರಾಜ ಜಗಜಂಪಿ

Dr Prince's Birthday Celebration Prince is the world's greatest artist: - lyricist Basavarajah Jagjamampi

0

ಬೆಳಗಾವಿ: (news belgaum)ಡಾ|| ರಾಜಕುಮಾರ ಅವರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೇ ಜಾಗತಿಕ ಮಟ್ಟದ ಶ್ರೇಷ್ಠ ಕಲಾವಿದರಾಗಿದ್ದಾರೆ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಂಗಳವಾರ (ಏ.24) ಹಮ್ಮಿಕೊಂಡಿದ್ದ ಡಾ|| ರಾಜಕುಮಾರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ|| ರಾಜಕುಮಾರ ಅವರು ಎಲ್ಲ ಪಾತ್ರಗಳಿಗೂ ಹೇಳಿ ಮಾಡಿಸಿದ ನಟರಾಗಿದ್ದರು, ಪಾತ್ರಗಳಲ್ಲಿ ಅವರು ಪರಕಾಯ ಪ್ರವೇಶ ಮಾಡುತ್ತಿದ್ದರು. ರಾಜಕುಮಾರ ಅವರಿಗೆ ಅಹಂ ಇರಲಿಲ್ಲ. ಅವರು ಸರಳತೆ ಹಾಗೂ ವಿನಯವನ್ನು ಮೈಗೂಡಿಸಿಕೊಂಡಿದ್ದರು ಎಂದು ಹೇಳಿದರು.
News Belgaum-ಡಾ|| ರಾಜಕುಮಾರ ಜನ್ಮದಿನಾಚರಣೆ ಕಾರ್ಯಕ್ರಮ ಡಾ|| ರಾಜಕುಮಾರ ಜಾಗತಿಕ ಮಟ್ಟದ ಶ್ರೇಷ್ಠ ಕಲಾವಿದ:  - ಸಾಹಿತಿ ಬಸವರಾಜ ಜಗಜಂಪಿಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದು ರಾಜಕುಮಾರ ಅವರ ಉದ್ದೇಶವಾಗಿತ್ತು. ಅವರ ಎಲ್ಲ ಚಿತ್ರಗಳು ಸಾಮಾಜಿಕ ಸಂದೇಶವನ್ನು ಹೊಂದಿವೆ ಎಂದರು.ವರಕವಿ ಎಂದರೆ ದ.ರಾ. ಬೇಂದ್ರೆ ಅವರು ನೆನಪಾಗುತ್ತಾರೆ. ಅದೇ ರೀತಿ ವರ ನಟನೆಂದರೇ ಡಾ|| ರಾಜಕುಮಾರ ಅವರು ನೆನಪಾಗುತ್ತಾರೆ ಎಂದರು.
ಡಾ|| ರಾಜ್ ಅವರು ಕನ್ನಡ ಚಲಚಿತ್ರಗಳಲ್ಲಿ ಮಾತ್ರ ನಟಿಸಿರುವುದು ಇತಿಹಾಸವಾಗಿದ್ದು, ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಡಾ|| ರಾಜಕುಮಾರ ಅವರ ಹೆಸರಿನಲ್ಲಿ 4500ಕ್ಕೂ ಹೆಚ್ಚು ಅಭಿಮಾನಿ ಸಂಘಗಳಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಅವಿನಾಶ ಪೋತದಾರ ಅವರು ಮಾತನಾಡಿ, ಕನ್ನಡ ಚಲಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ರಾಜಕುಮಾರ ಅವರಿಗೆ ಸಲ್ಲುತ್ತದೆ. ರಾಜಕುಮಾರ ಅವರು ಶ್ರೇಷ್ಠ ನಟರಷ್ಟೇ ಅಲ್ಲದೇ ಮಹಾಮಾನವತಾವಾದಿಯಾಗಿದ್ದರು ಎಂದು ಹೇಳಿದರು.
ರಾಜಕುಮಾರ ಅವರ ಚಲನಚಿತ್ರ ಹಾಗೂ ಗೀತೆಗಳು ಇಂದಿಗೂ ಜನರ ಮನದಲ್ಲಿವೆ. ನೂರು ವರ್ಷಕ್ಕೊಮ್ಮೆ ಮಾತ್ರ ರಾಜಕುಮಾರ ಅವರಂಥ ಮಹಾನ ವ್ಯಕ್ತಿ ಜನಿಸಲು ಸಾಧ್ಯ ಎಂದರು.
ಬೆಳಗಾವಿಯಲ್ಲಿ ತಮ್ಮ ಕುಟುಂಬದ ಮಾಲೀಕತ್ವದ ನರ್ತಕಿ ಚಿತ್ರಮಂದಿರವನ್ನು ಪ್ರಾರಂಭಿಸಿದಾಗ 5 ವರ್ಷಗಳ ಕಾಲ ಡಾ|| ರಾಜಕುಮಾರ ಅವರ ಚಲನಚಿತ್ರಗಳನ್ನೇ ಪ್ರದರ್ಶಿಸಲಾಗಿತ್ತು. ರಾಜಕುಮಾರ ಅವರ ಚಲಚಿತ್ರಗಳು ನಗರದಲ್ಲಿಯೂ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದವು ಎಂದು ನೆನಪಿಸಿಕೊಂಡರು.
ನಗರದಲ್ಲಿ ಶೀಘ್ರದಲ್ಲಿಯೇ ಒಂದು ವಾರಕಾಲ ಡಾ|| ರಾಜಕುಮಾರ ಚಲನಚಿತ್ರೋತ್ಸವವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ರಂಗಸಂಪದ ಅಧ್ಯಕ್ಷರಾದ ಡಾ|| ಅರವಿಂದ ಕುಲಕರ್ಣಿ ಅವರು ಮಾತನಾಡಿ, ನಾಯಕನಟನಾಗಿಯೇ 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಕೀರ್ತಿ ರಾಜಕುಮಾರ ಅವರಿಗೆ ಸಲ್ಲುತ್ತದೆ. ಯಾವ ಚಿತ್ರದಲ್ಲಿಯೂ ಅವರು ಧೂಮಪಾನ ಹಾಗೂ ಮದ್ಯಪಾನವನ್ನು ಸೇವಿಸುವ ಪಾತ್ರದಲ್ಲಿ ನಟಿಸಲಿಲ್ಲ. ಎಂಬುದು ವಿಶೇಷ ಎಂದು ಹೇಳಿದರು.
ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವುದು ರಾಜಕುಮಾರ ಅವರ ಉದ್ದೇಶವಾಗಿತ್ತು. ಅವರ ಎಲ್ಲ ಚಿತ್ರಗಳು ಸಾಮಾಜಿಕ ಸಂದೇಶವನ್ನು ಹೊಂದಿವೆ ಎಂದರು.
ಸಿರೀಶ ಜೋಶಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ರಾಜಕುಮಾರ ಅವರು ರಂಗಭೂಮಿಯಿಂದ ಬಂದ ನಟರಾಗಿದ್ದು, ಅತ್ಯುತ್ತಮ ಗಾಯಕರು ಕೂಡ ಆಗಿದ್ದರು ಎಂದು ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಅಧ್ಯಕ್ಷತೆ ವಹಿಸಿದ್ದರು. ಮಲ್ಹಾರಿ ಜೋಶಿ, ಸುರಭಿ ಮೆಲೋಡಿಸ್ ತಂಡದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಅನಂತ ಪಪ್ಪು ಅವರು ನಿರೂಪಿಸಿ, ವಂದಿಸಿದರು.
ರಾಜಕುಮಾರ ಛಾಯಾಚಿತ್ರ ಪ್ರದರ್ಶನ:
ಕನ್ನಡ ಸಾಹಿತ್ಯ ಭವನದಲ್ಲಿ ರಾಜಕುಮಾರ ಅವರ ಜನ್ಮದಿನಾಚರಣೆ ನಿಮಿತ್ಯ ರಾಜಕುಮಾರ ಅವರ ಅಭಿಮಾನಿಯಾಗಿರುವ ಮಲ್ಹಾರಿ ಜೋಶಿ ಅವರು ರಾಜಕುಮಾರ ಅವರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದ್ದರು.
ರಾಜಕುಮಾರ ಅವರು ಬೆಳಗಾವಿ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಛಾಯಾಚಿತ್ರಗಳು ಸೇರಿದಂತೆ ಅನೇಕ ಅಪರೂಪದ ಛಾಯಾಚಿತ್ರಗಳು ಪ್ರದರ್ಶನದಲ್ಲಿ ನೋಡುಗರ ಮನಸೆಳೆದವು.
ಡಾ|| ರಾಜ್ ಚಿತ್ರಗಳ ಗೀತಗಾಯನ:
ಕಾರ್ಯಕ್ರಮದ ನಂತರ ಸುರಭಿ ಕರೋಕೆ ಮೆಲೋಡಿಸ್ ತಂಡದವರು ಡಾ|| ರಾಜಕುಮಾರ ಅವರ ಚಲಚಿತ್ರಗೀತೆಗಳನ್ನು ಪಸ್ತುತ ಪಡಿಸಿದರು.
ಹೊಸ ಬೆಳಕು ಮೂಡುತಿದೆ, ನಾವಾಡುವ ನುಡಿಯೇ ಕನ್ನಡ ನುಡಿ, ಎಲ್ಲೆಲ್ಲಿ ನೋಡಲಿ, ಬೆಳದಿಂಗಳಾಗಿ ಬಾ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿ ಕೇಳುಗರನ್ನು ರಂಜಿಸಿದರು. Dr Prince’s Birthday Celebration Prince is the world’s greatest artist: – lyricist Basavarajah Jagjamampi

Leave A Reply

 Click this button or press Ctrl+G to toggle between Kannada and English

Your email address will not be published.