ಉತ್ತಮ ಸಮಾಜಕ್ಕಾಗಿ

news belgaum:ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ ಸಸಿಗೆ ನೀರೆರೆಯುವ ಮೂಲಕ ಪ್ರದರ್ಶನಕ್ಕೆ ಚಾಲನೆ Drive to the show by watering

Drive to the show by watering

0

ಬೆಳಗಾವಿ,(News belgaum) “ನನ್ನನ್ನು ಹೀಗೆ ಹರಿಯಲು ಬಿಡಿ ಪಾಪನಾಶಿನಿಯಾಗಿ; ನಿಮ್ಮ ಅಘನಾಶಿನಿಯಾಗಿ” ಎಂದು ಬೇಡಿಕೊಳ್ಳುವ – ಜಗತ್ತಿನ ವಿಶಿಷ್ಟ ನದಿಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ “ಅಘನಾಶಿನಿ” ನದಿಯು ತನ್ನ ಒಡಲಾಳದ ಮಾತುಗಳನ್ನು ಹಂಚಿಕೊಳ್ಳುವ ಸಾಕ್ಷ್ಯಚಿತ್ರದ ಪ್ರದರ್ಶನವು ಪರಿಸರಪ್ರೇಮಿಗಳ ಮನಗೆದ್ದಿತು.
News Belgaum-“ಅಘನಾಶಿನಿ”ಯ ಒಡಲಾಳದ ಮಾತಿಗೆ ತಲೆದೂಗಿದ ಜನರು! 1 News Belgaum-“ಅಘನಾಶಿನಿ”ಯ ಒಡಲಾಳದ ಮಾತಿಗೆ ತಲೆದೂಗಿದ ಜನರು! 2ಜಿಲ್ಲಾ ಪಂಚಾಯ್ತಿ, ಕೆಎಲ್‍ಇ ಸಂಸ್ಥೆ ಉನ್ನತ ಶಿಕ್ಷಣ ಮತ್ತು ಸಂಶೋಧನಾ News Belgaum-“ಅಘನಾಶಿನಿ”ಯ ಒಡಲಾಳದ ಮಾತಿಗೆ ತಲೆದೂಗಿದ ಜನರು!ಸಂಸ್ಥೆಯ ಆಶ್ರಯದಲ್ಲಿ ಕೆಎಲ್‍ಇ ಸಂಸ್ಥೆಯ ಕನ್ವೆನ್ಷನ್ ಸಭಾಂಗಣದಲ್ಲಿ ಶುಕ್ರವಾರ(ಫೆ.16) ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಲಾಗಿತ್ತು.
ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಿ.ಎ.ಮೇಘಣ್ಣವರ ಸಸಿಗೆ ನೀರೆರೆಯುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್., ಮಹಾನಗರ ಪಾಲಿಕೆಯ ಆಯುಕ್ತರಾದ ಶಶಿಧರ ಕುರೇರ್, ಕೆಎಲ್‍ಇ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ವಿ.ಡಿ.ಪಾಟೀಲ, ಪ್ರಾಚಾರ್ಯೆ ಎಂ.ಎಸ್.ಮಹಾಂತಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
“ಅಘನಾಶಿನಿ” ಸಾಕ್ಷ್ಯಚಿತ್ರದ ಪ್ರದರ್ಶನಕ್ಕಿಂತ ಮುಂಚೆ ಪ್ರಾಸ್ತಾವಿಕವಾಗಿ ಮಾತನಾಡಿದ ಚಿತ್ರದ ನಿರ್ದೇಶಕ ಅಶ್ವಿನಿಕುಮಾರ್ ಭಟ್ ಅವರು, “ಜಗತ್ತಿನ ವಿಶಿಷ್ಟ ಲಕ್ಷಣಗಳನ್ನು ಹೊಂದಿರುವ ನದಿಗಳಲ್ಲಿ ಅಘನಾಶಿನಿಯು ಒಂದು. ಈ ನದಿಗೆ ಯಾವುದೇ ಅಣೆಕಟ್ಟೆ ಕಟ್ಟಿಲ್ಲ ಹಾಗೂ ನದಿಗುಂಟ ಯಾವುದೇ ಕೈಗಾರಿಕೆ ಕೂಡ ಇಲ್ಲ. ಅದು ಅಘನಾಶಿನಿನಿಯ ಸೌಭಾಗ್ಯ” ಎಂದು ಹೇಳಿದರು.
ಪ್ರಕೃತಿಯಲ್ಲಿರುವ ಎಲೆ-ಕಾಯಿ ಬಳ್ಳಿಗಳಿಂದ ಹಿಡಿದು ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ. ಯಾವುದೂ ನಿಷ್ಪ್ರಯೋಜಕವಲ್ಲ; ಅಭಿವೃದ್ಧಿ ಅಗತ್ಯ ಆದರೆ ನಮ್ಮ ಅಸ್ತಿತವಕ್ಕೇ ಧಕ್ಕೆ ತರುವಂತಹ ಅಭಿವೃದ್ಧಿ ನಮಗೆ ಯಾಕೆ ಬೇಕು ಎಂದು ಪ್ರಶ್ನಿಸಿದ ಅವರು, 124 ಕಿಮೀ ಹರಿಯುವ ಅಘನಾಶಿನಿಯ ಒಡಲಾಳದ ಮಾತುಗಳನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶದಿಂದ ಈ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ªಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು-
“ನನ್ನನ್ನು ಹೀಗೆ ಹರಿಯಲು ಬಿಡಿ ಪಾಪನಾಶಿನಿಯಾಗಿ; ನಿಮ್ಮ ಅಘನಾಶಿನಿಯಾಗಿ” ಎಂದು ಬೇಡಿಕೊಳ್ಳುವ ಮಾತುಗಳೊಂದಿಗೆ ಕೊನೆಗೊಳ್ಳುವ 41 ನಿಮಿಷದ “ಅಘನಾಶಿನಿ”ಸಾಕ್ಷ್ಯಚಿತ್ರವು ದೇಶ-ವಿದೇಶಗಳಲ್ಲಿ ಈಗಾಗಲೇ ಹತ್ತಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯಮಟ್ಟದ ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಒಂದು ನದಿಯ ಒಡಲಾಳದ ಮಾತುಗಳನ್ನು ಮನಮುಟ್ಟುವಂತೆ ಚಿತ್ರೀಸಿರುವ ಇಂತಹ ಅದ್ಭುತ ಚಿತ್ರವನ್ನು ಎಲ್ಲರಿಗೂ ತೋರಿಸಲೇಬೇಕು ಎಂಬ ಕಾರಣಕ್ಕೆ ಇಂದು ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು ಎಂದು ಹೇಳಿದರು.
ನದಿ ಹಾಗೂ ಅದರ ಸುತ್ತಮುತ್ತಲ ಪರಿಸರ, ಪ್ರಾಣಿಸಂಕುಲ, ಪಕ್ಷಗಳ ಒಡನಾಟದ ಬದುಕು ಅನಾವರಣಗೊಳಿಸುವ ಈ ಸಾಕ್ಷ್ಯಚಿತ್ರದ ಬಗ್ಗೆ ರಾಮಚಂದ್ರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದ ನಿರ್ದೇಶಕ ಅಶ್ವಿನಿಕುಮಾರ್ ಭಟ್ ಹಾಗೂ ಸಹ ನಿರ್ದೇಶಕಿ ಆಗಿರುವ ಅವರ ಪತ್ನಿ ಸಹನಾ ಅವರನ್ನು ಅಭಿನಂದಿಸಲಾಯಿತು.
ಕೊನೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಅವರು, “ಒಂದು ನದಿಯ ಸುಂದರ ಕಥೆಯನ್ನು ತಿಳಿಸಿಕೊಡುವ ಇಂತಹ ಅತ್ಯುತ್ತಮ ಸಾಕ್ಷ್ಯಚಿತ್ರವನ್ನು ತಯಾರಿಸಿ ನಿರ್ದೇಶಕರು ಹಾಗೂ ಅದನ್ನು ನಮ್ಮೆಲ್ಲರಿಗೆ ತೋರಿಸಲು ಸ್ವತಃ ಮುತುವರ್ಜಿ ವಹಿಸಿ ಎಲ್ಲ ವ್ಯವಸ್ಥೆ ಕಲ್ಪಿಸಿದ ಪರಿಸರಪ್ರೇಮಿ ರಾಮಚಂದ್ರನ್ ಅವರಿಗೆ ವಿಶೇಷ ಧನ್ಯವಾದಗಳು” ಎಂದು ಹೇಳಿದರು.
ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಪರಿಸರಪ್ರೇಮಿಗಳು ಸೇರಿದಂತೆ ನೂರಾರು ಜನರು ಸಾಕ್ಷ್ಯಚಿತ್ರವನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.Drive to the show by watering

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: