ಉತ್ತಮ ಸಮಾಜಕ್ಕಾಗಿ

ಡ್ರಗ್ಸ್, ಮಟಕಾ, ಗಾಂಜಾ, ಚರಸ್ ನಡೆಯಲು ಕಾರಣ, ಪೊಲೀಸರ:ಶಾಸಕ ಅಭಯ ಪಾಟೀಲ

news belagavi

0

ಬೆಳಗಾವಿ: (news belgaum)ನಗರದಲ್ಲಿ ಡ್ರಗ್ಸ್, ಮಟಕಾ, ಗಾಂಜಾ, ಚರಸ್ ನಡೆಯಲು ನೇರವಾಗಿ ಉನ್ನತ ಪೊಲೀಸ್ ಅಧಿಕಾರಿಗಳೇ ಕಾರಣ, ಪೊಲೀಸರ ಮೇಲೆಯೇ ನಿವೃತ್ತ ನ್ಯಾಯಾಧೀಶರೊಬ್ಬರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಬೇಕು ಎಂದು ಶಾಸಕ ಅಭಯ ಪಾಟೀಲ ಇಂದು ಒತ್ತಾಯಿಸಿದರು. ಪೊಲೀಸ್ ಅಧಿಕಾರಿಗಳು ಭಾಗಿಯಾಗದೆಯೇ ಇಂತಹ ಅಕ್ರಮಗಳು ನಗರದಲ್ಲಿ ನಡೆಯಲು ಸಾಧ್ಯವೇ ಇಲ್ಲ. ಪೊಲೀಸರೇ ಇಂತಹ ಅಕ್ರಮಗಳನ್ನು ನಡೆಸಲು ಬಿಟ್ಟಿದ್ದಾರೆ ಎನ್ನುವುದರಲ್ಲಿ ಸಂಶಯವೂ ಇಲ್ಲ ಎಂದರು. ಉನ್ನತ ಅಧಿಕಾರಿಗಳೇ ಇಂತಹ ಅಕ್ರಮಗಳ ಪೋಷಕರು ಎಂದರು.
ಡಿಸಿಪಿ ಸೀಮಾ ಲಾಟಕರ ಮಟಕಾ ಅಡ್ಡೆ ಮೇಲೆ ಮಾಡಿದ ದಾಳಿ ಅಭಿನಂದನಾರ್ಹ. ಇಂತಹ ಅಪರಾಧ ಚಟುವಟಿಕೆಗಳ ಬಗ್ಗೆ ಆಳ ಅಗಲದ ತನಿಖೆ ಮುಂದುವರೆಸಬೇಕು ಎಂದರು.
ಅಕ್ರಮ ಗಾಂಜಾ & ಚರಸ್ ಮಾರಾಟ & ಸೇವನೆ ನಡೆಯುತ್ತಿರುವ ಬಗ್ಗೆ ಸ್ವತಃ ನಾನೇ ನೇರವಾಗಿ ಕಮಿಷ್ನರ್ ಡಾ. ರಾಜಪ್ಪ ಅವರಿಗೆ ದೂರವಾಣಿ ಮೂಲಕ ತಿಳಿಸಿದರೂ ನಾಳೆ ಬಂದು ನೋಡುತ್ತೇನೆ, ಬೆಂಗಳೂರಿನಲ್ಲಿದ್ದೇನೆ ಎಂಬ ಉತ್ತರ ಕೊಡುತ್ತಾರೆ ಎಂದರೆ ಏನರ್ಥ ಎಂದು ಶಾಸಕ ಅಭಯ ಪಾಟೀಲ ಪೊಲೀಸ್ ಕಮಿಷ್ನರ್ ಕಾರ್ಯವೈಖರಿ ಬಗ್ಗೆ ವ್ಯಂಗ್ಯವಾಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.