ಉತ್ತಮ ಸಮಾಜಕ್ಕಾಗಿ

ಚುನಾವಣಾ ಜಾಹೀರಾತು: ಪ್ರಮಾಣಪತ್ರ ಕಡ್ಡಾಯ

Election Advertising: Certificate is mandatory

0

ಅನುಮತಿ ಇಲ್ಲದೇ ಪ್ರಸಾರ ಮಾಡಿದರೆ ಕ್ರಮ-ಕೇಬಲ್ ಆಪರೇಟರ್‍ಗಳಿಗೆ ಎಚ್ಚರಿಕೆ

ಚುನಾವಣಾ ಜಾಹೀರಾತು: ಪ್ರಮಾಣಪತ್ರ ಕಡ್ಡಾಯ- Tarun kranti 1ಬೆಳಗಾವಿ: (news belgaum)“ “ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಜಾಹೀರಾತುಗಳನ್ನು ಸ್ಥಳೀಯ ಕೇಬಲ್ ಟಿವಿ ಅಥವಾ ಇತರೆ ಉಪಗ್ರಹ ಚಾನೆಲ್‍ಗಳಲ್ಲಿ ಪ್ರಸಾರ ಮಾಡಬೇಕಾದರೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ವೀಕ್ಷಣಾ ಸಮಿತಿ(ಎಂಸಿಎಂಸಿ)ಯ ಅನುಮತಿ ಕಡ್ಡಾಯವಾಗಿದೆ. ಅನುಮತಿ ಇಲ್ಲದೇ ಜಾಹೀರಾತು ಪ್ರಸಾರ ಮಾಡಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ(ಮಾ.8) ನಡೆದ ಸ್ಥಳೀಯ ಕೇಬಲ್ ನೆಟ್‍ವರ್ಕಗಳ ಎಂಎಸ್‍ಓ ಹಾಗೂ ಆಪರೇಟರ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ನೀತಿಸಂಹಿತೆ ಜಾರಿಗೆ ಬಂದ ಮೇಲೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಸ್ಕ್ರೋಲ್ ಸೇರಿದಂತೆ ಯಾವುದೇ ರೀತಿಯ ಜಾಹೀರಾತು ಪ್ರಸಾರ ಮಾಡಬೇಕಾದರೆ ಆಯಾ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳ ಕಡೆಯಿಂದ ಎಂಸಿಎಂಸಿ ನೀಡಿರುವ ಪ್ರಮಾಣಪತ್ರವನ್ನು ಕೇಬಲ್ ಆಪರೇಟರ್‍ಗಳು ಕೇಳಿ ಪಡೆದುಕೊಳ್ಳಬೇಕು.
ಎಂಸಿಎಂಸಿಯು ಪ್ರತಿಯೊಂದು ಜಾಹೀರಾತುಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕವೇ ಪ್ರಮಾಣಪತ್ರ ನೀಡಿರುತ್ತದೆ. ಆದ್ದರಿಂದ ಪ್ರಮಾಣಪತ್ರವಿಲ್ಲದೇ ಜಾಹೀರಾತು ಪ್ರಸಾರ ಮಾಡಿದರೆ ಕೇಬಲ್ ಆಪರೇಟರ್‍ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಪಕ್ಷ-ಅಭ್ಯರ್ಥಿಗಳಿಗೆ ಸೂಚನೆ:
ಚುನಾವಣೆ ಸಂದರ್ಭದಲ್ಲಿ ಟಿವಿ ಚಾನೆಲ್, ಸ್ಥಳೀಯ ಕೇಬಲ್ ನೆಟವರ್ಕ ಅಥವಾ ಪತ್ರಿಕೆಗಳ ಮೂಲಕ ಜಾಹೀರಾತು ನೀಡುವಾಗ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ವೀಕ್ಷಣಾ ಸಮಿತಿ(ಎಂಸಿಎಂಸಿ)ಯ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಜಿಯಾವುಲ್ಲಾ ತಿಳಿಸಿದರು.
ಚುನಾವಣಾ ಪ್ರಚಾರ ವೆಚ್ಚವನ್ನು ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸುವುದರಿಂದ ಪ್ರತಿಯೊಂದು ಜಾಹೀರಾತು ಪ್ರಸಾರ ಮಾಡಬೇಕಾದರೆ ಆ ಜಾಹೀರಾತು ವಿವರ, ಸ್ಕ್ರಿಪ್ಟ್, ಪ್ರಸಾರದ ಅವಧಿ ಹಾಗೂ ಬಿಲ್ ಮೊತ್ತವನ್ನು ನಮೂದಿಸಿದ ಬಳಿಕವೇ ಎಂಸಿಎಂಸಿ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲೆಯ ಎಲ್ಲ ಎಂಎಸ್‍ಓ ಹಾಗೂ ಕೇಬಲ್ ಆಪರೇಟರ್‍ಗಳು ಚುನಾವಣೆ ಸಂದರ್ಭದಲ್ಲಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಕಾನೂನು ಉಲ್ಲಂಘಿಸಿರುವುದು ಕಂಡುಬಂದರೆ ದಂಡ ಮತ್ತು ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ರಮೇಶ ಕಳಸದ ಹಾಗೂ ಚುನಾವಣಾ ವೆಚ್ಚ ವೀಕ್ಷಣಾ ಸಮಿತಿ ನೋಡಲ್ ಅಧಿಕಾರಿ ಎಂ.ಪಿ.ಅನಿತಾ ಅವರು, ಅಭ್ಯರ್ಥಿಗಳ ಖರ್ಚು-ವೆಚ್ಚದ ಮೇಲೆ ಚುನಾವಣಾ ಆಯೋಗ ತೀವ್ರ ನಿಗಾ ವಹಿಸುವುದಿರಂದ ಜಾಹೀರಾತು ಪ್ರಸಾರಕ್ಕೆ ಸಂಬಂಧಿಸಿದಂತೆ ಎಲ್ಲ ನಿಯಮಗಳು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಬಿಆರ್‍ಡಿಎಸ್ ಪ್ರತಿನಿಧಿ ರಾಜು ಪಾಟೀಲ್, ಹಾಥವೇ ಎಂಎಸ್‍ಓ ಸೇರಿದಂತೆ ಅನೇಕ ಕೇಬಲ್ ಆಪರೇಟರ್‍ಗಳು ಸಭೆಯಲ್ಲಿ ಭಾಗವಹಿಸಿದ್ದರು.Election Advertising: Certificate is mandatory.

ಚುನಾವಣಾ ಪ್ರಚಾರ ಸಾಮಗ್ರಿ ಮುದ್ರಣ: ಮುದ್ರಕರ ಸಭೆ
ಮುದ್ರಕ, ಪ್ರಕಾಶಕರ ಮಾಹಿತಿ ಕಡ್ಡಾಯ-ಜಿಯಾವುಲ್ಲಾ
ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಪೋಸ್ಟರ್, ಕರಪತ್ರ, ಭಿತ್ತಿಪತ್ರ, ಮಡಕೆಪತ್ರ ಸೇರಿದಂತೆ ಯಾವುದೇ ರೀತಿಯ ಪ್ರಚಾರಸಾಮಗ್ರಿಗಳನ್ನು ಮುದ್ರಿಸುವಾಗ ಅದರ ಮೇಲೆ ಮುದ್ರಕರು ಹಾಗೂ ಪ್ರಕಾಶಕರ ಹೆಸರು, ವಿಳಾಸ ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್.ಜಿಯಾವುಲ್ಲಾ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ(ಮಾ.8) ನಡೆದ ಮುದ್ರಕರು ಹಾಗೂ ಪ್ರಕಾಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿಯು ಚುನಾವಣಾ ಪ್ರಚಾರ ಸಾಮಗ್ರಿ ಮುದ್ರಣಕ್ಕೆ ನೀಡಿದಾಗ ಅವರಿಂದ ಪ್ರಕಾಶಕರ ಘೋಷಣಾಪತ್ರವನ್ನು ಮುದ್ರಕರು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಪ್ರಕಾಶಕರು ತಮ್ಮ ಹೆಸರು, ವಿಳಾಸ ನಮೂದಿಸಿ ಸಹಿ ಮಾಡಿರುವ ಘೋಷಣಾಪತ್ರಕ್ಕೆ ಇಬ್ಬರು ಪರಿಚಿತರ ದೃಢೀಕರಣ ಕೂಡ ಅಗತ್ಯವಾಗಿದೆ.
ಪ್ರಕಾಶಕರಿಂದ ನಿಗದಿತ ಘೋಷಣಾಪತ್ರ ಪಡೆದುಕೊಂಡ ನಂತರವೇ ಚುನಾವಣಾ ಪ್ರಚಾರಸಾಮಗ್ರಿಗಳನ್ನು ನಿಯಮಾವಳಿ ಪ್ರಕಾರ ಮುದ್ರಿಸಿಕೊಡಬೇಕು ಎಂದು ಮುದ್ರಕರಿಗೆ ಜಿಲ್ಲಾಧಿಕಾರಿ ಜಿಯಾವುಲ್ಲಾ ಸೂಚನೆ ನೀಡಿದರು.

ಮುದ್ರಿತ ಪ್ರತಿ ಸಲ್ಲಿಸಲು ಸೂಚನೆ:
ಚುನಾವಣಾ ಪ್ರಚಾರಸಾಮಗ್ರಿ ಮುದ್ರಿಸಿದ ಬಳಿಕ ಪ್ರಕಾಶಕರು ಸಲ್ಲಿಸಿರುವ ಘೋಷಣಾಪತ್ರ ಹಾಗೂ ಮುದ್ರಿತ ಪ್ರಚಾರ ಸಾಮಗ್ರಿಯ ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿ ಸಲ್ಲಿಸಬೇಕು ಎಂದು ಸೂಚಿಸಿದರು.
ನಿಯಮಾವಳಿ ಹಾಗೂ ಚುನಾವಣಾ ಆಯೋಗದ ಸೂಚನೆಗಳನ್ನು ಉಲ್ಲಂಘಿಸಿದರೆ ಆರು ತಿಂಗಳವರೆಗೆ ಜೈಲುಶಿಕ್ಷೆ ಅಥವಾ 2000 ರೂಪಾಯಿ ದಂಡ ಅಥವಾ ಶಿಕ್ಷೆ ಮತ್ತು ದಂಡ ಎರಡನ್ನೂ ವಿಧಿಸಬಹುದಾಗಿದೆ ಎಂದು ವಿವರಿಸಿದರು.
ಯಾವುದೇ ರೀತಿಯ ದಂಡನೆಗೆ ಅವಕಾಶ ನೀಡದೇ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ 45 ದಿನಗಳ ಎಲ್ಲ ಮುದ್ರಕರು ಸಹಕರಿಸಬೇಕು ಎಂದು ಅವರು ಹೇಳಿದರು.
ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ರಮೇಶ್ ಕಳಸದ ಹಾಗೂ ಚುನಾವಣಾ ವೆಚ್ಚ ವೀಕ್ಷಕ ಸಮಿತಿ ನೋಡಲ್ ಅಧಿಕಾರಿ ಎಂ.ಪಿ.ಅನಿತಾ ಅವರು ಚುನಾವಣಾ ಪ್ರಚಾರ ಸಾಮಗ್ರಿ ಮುದ್ರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನಗಳು ಹಾಗೂ ಪ್ರಜಾಪ್ರಾತಿನಿಧ್ಯ ಕಾಯಿದೆಯ ಕುರಿತು ಮಾಹಿತಿ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ರೇನ್‍ಬೋ ಆಫ್‍ಸೆಟ್ ಪ್ರಿಂಟರ್ಸ್, ಮಲ್ಲಿಕಾರ್ಜುನ ಆಫಸೆಟ್ ಪ್ರಿಂಟರ್ಸ್, ಇಂಪ್ರೆಷನ್ಸ್ ಪ್ರಿಂಟಿಂಗ್ ಪ್ರೆಸ್, ಓಂಕಾರ ಪ್ರಿಂಟರ್ಸ್ ಸೇರಿದಂತೆ ವಿವಿಧ ಮುದ್ರಣಾಲಯಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.