ಉತ್ತಮ ಸಮಾಜಕ್ಕಾಗಿ

ಚುನಾವಣಾ ಅಪರಾಧ- ಮಾಹಿತಿ ಕಾರ್ಯಾಗಾರ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆ ಬಳಕೆ ಅಪರಾಧ- ಮಹೇಶ್ ವೈದ್ಯ

Election Crime - Use of religious symbol for promoting Information Workshop Crime - Mahesh Vaidya

0

ಬೆಳಗಾವಿ:(news belgaum) “ಚುನಾವಣಾ ಪ್ರಚಾರ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಪಕ್ಷಗಳು ತಮ್ಮ ಚಿಹ್ನೆ ಮಾತ್ರ ಬಳಸತಕ್ಕದ್ದು. ಒಂದು ವೇಳೆ ತಮ್ಮ ಚಿಹ್ನೆ ಜತೆಗೆ ಯಾವುದೇ ಧಾರ್ಮಿಕ ಗುರುಗಳ ಚಿತ್ರ ಅಥವಾ ಧಾರ್ಮಿಕ ಚಿಹ್ನೆ ಬಳಸುವುದು ಚುನಾವಣಾ ಅಪರಾಧ ಆಗುತ್ತದೆ” ಎಂದು ಗದಗ ಎಸ್ಪಿ ಕಚೇರಿಯ ಕಾನೂನು ಅಧಿಕಾರಿ ಮಹೇಶ್ ವೈದ್ಯ ಹೇಳಿದರು.
ಚುನಾವಣಾ ಅಪರಾಧಗಳ ಕುರಿತು ವಿಟಿಯು ಸಭಾಂಗಣದಲ್ಲಿ ಭಾನುವಾರ(ಮಾ.25) ಏರ್ಪಡಿಸಲಾಗಿದ್ದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣಾ ಅಪರಾಧ- ಮಾಹಿತಿ ಕಾರ್ಯಾಗಾರ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆ ಬಳಕೆ ಅಪರಾಧ- ಮಹೇಶ್ ವೈದ್ಯ- Tarun kranti ಚುನಾವಣಾ ಅಪರಾಧ- ಮಾಹಿತಿ ಕಾರ್ಯಾಗಾರ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆ ಬಳಕೆ ಅಪರಾಧ- ಮಹೇಶ್ ವೈದ್ಯ- Tarun kranti 1 ಚುನಾವಣಾ ಅಪರಾಧ- ಮಾಹಿತಿ ಕಾರ್ಯಾಗಾರ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆ ಬಳಕೆ ಅಪರಾಧ- ಮಹೇಶ್ ವೈದ್ಯ- Tarun kranti 2 ಚುನಾವಣಾ ಅಪರಾಧ- ಮಾಹಿತಿ ಕಾರ್ಯಾಗಾರ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆ ಬಳಕೆ ಅಪರಾಧ- ಮಹೇಶ್ ವೈದ್ಯ- Tarun kranti 3 ಚುನಾವಣಾ ಅಪರಾಧ- ಮಾಹಿತಿ ಕಾರ್ಯಾಗಾರ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆ ಬಳಕೆ ಅಪರಾಧ- ಮಹೇಶ್ ವೈದ್ಯ- Tarun kranti 4ಮತದಾರರ ಮೇಲೆ ಪ್ರಭಾವ ಬೀರಲು ಧಾರ್ಮಿಕ ಚಿಹ್ನೆ, ಗುರುಗಳು ಅಥವಾ ಭಾಷಾ ಬಾಂಧವ್ಯಕ್ಕೆ ಧಕ್ಕೆ ತರುವಂತಹ ಯಾವುದೇ ರೀತಿಯ ಚಿಹ್ನೆ ಅಥವಾ ಧ್ವಜಗಳ ಬಳಕೆ ಕೂಡ ಅಪರಾಧವಾಗಬಲ್ಲದು.
ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದಂತೆ ಫ್ಲೈಯಿಂಗ್ ಸ್ಕ್ವಾಡ್ ಮಾತ್ರವಲ್ಲ; ಯಾವುದೇ ನಾಗರಿಕ ವೈಯಕ್ತಿಕವಾಗಿ ದೂರು ನೀಡಬಹುದು.
ಅಭ್ಯರ್ಥಿಯ ಚಾರಿತ್ರ್ಯ ಕುರಿತು ನೀಡುವ ಸುಳ್ಳು ಹೇಳಿಕೆಗಳು, ಮತದಾರರಿಗೆ ಲಂಚ, ಆಮಿಷ, ಬೆದರಿಕೆ, ಅನುಚಿತ ಪ್ರಭಾವ, ಬಹಿಷ್ಕಾರ ಬೆದರಿಕೆಗಳು ಕೂಡ ಚುನಾವಣಾ ಅಪರಾಧಗಳಾಗಿವೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರು ದಾಖಲಿಸುವಾಗ ಕನಿಷ್ಠ ಇಬ್ಬರು ವ್ಯಕ್ತಿಗಳನ್ನು ಆರೋಪಿಗಳಿರಬೇಕು. ಸ್ಥಳದಲ್ಲಿ ಸಿಕ್ಕ ವ್ಯಕ್ತಿ ಹಾಗೂ ಅಭ್ಯರ್ಥಿ ಅಥವಾ ಚುನಾವಣಾ ಏಜೆಂಟ್ ಅವರನ್ನು ಆರೋಪಿಗಳನ್ನಾಗಿಸಿದಾಗ ಮಾತ್ರ ದೋಷಾರೋಪಣೆ ಪಟ್ಟಿ ಸಲ್ಲಿಸಬಹುದು. ಈ ಪ್ರಕ್ರಿಯೆ ಪಾಲಿಸದಿದ್ದರೆ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತದೆ ಎಂದು ವಿವರಿಸಿದರು.
ಚುನಾವಣೆ ವೇಳೆ ಭಾರತೀಯ ದಂಡಸಂಹಿತೆ, ಜನತಾ ಪ್ರಾತಿನಿಧ್ಯ ಕಾಯ್ದೆ ಮಾತ್ರವಲ್ಲದೆ ಇನ್ನೂ ಅನೇಕ ಕಾಯ್ದೆ-ಕಾನೂನುಗಳ ಬೇರೆ ಬೇರೆ ಕಲಂ ಗಳ ಅನ್ವಯ ಪ್ರಕರಣ ದಾಖಲಿಸಬಹುದು ಎಂದರು.
ಮಾದರಿ ನೀತಿಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಪರಾಧಗಳ ನಡುವೆ ವ್ಯತ್ಯಾಸ ಇದೆ. ನೀತಿ ಸಂಹಿತೆ ಎಂಬುದು ಚುನಾವಣಾ ಆಯೋಗ ಹಾಗೂ ರಾಜಕೀಯ ಪಕ್ಷಗಳ ನಡುವಿನ ಒಡಂಬಡಿಕೆಯಾಗಿದೆ. ಆದ್ದರಿಂದ ಚುನಾವಣಾ ಸಂದರ್ಭದಲ್ಲಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುವಾಗ ಪ್ರಕರಣದ ಸ್ವರೂಪ ಮತ್ತು ಕಲಂಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಫ್ಲೈಯಿಂಗ್ ಸ್ಕ್ವಾಡ್ ತಂಡಗಳಿಗೆ ಸಲಹೆ ನೀಡಿದರು.
ಮಾದರಿ ನೀತಿಸಂಹಿತೆ ನೋಡಲ್ ಅಧಿಕಾರಿ ರಮೇಶ ಕಳಸದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ, ಭೂದಾಖಲೆ ಹಾಗೂ ಭೂಮಾಪನ ಇಲಾಖೆಯ ಜಂಟಿ ನಿರ್ದೇಶಕ ಜಗದೀಶ ರೂಗಿ, ರಾಜ್ಯಮಟ್ಟದ ಮಾಸ್ಟರ್ ಟ್ರೇನರ್ ಎನ್.ವಿ.ಶಿರಗಾಂವಕರ, ಡಿವೈಎಸ್ಪಿ ನಾಗರಾಜ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಮತ್ತಿತರರು ಉಪಸ್ಥಿತರಿದ್ದರು.Election Crime – Use of religious symbol for promoting Information Workshop Crime – Mahesh Vaidya

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.