ಉತ್ತಮ ಸಮಾಜಕ್ಕಾಗಿ

ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ಫಲಿತಾಂಶ

news belagavi

0

ಸ್ಥಳೀಯ ಸಂಘ ಸಂಸ್ಥೆಗಳ ಚುನಾವಣೆ ಫಲಿತಾಂಶ: ರಫೀಕ ಖಾನಾಪುರಿ ಬೆಂಬಲಿಗರ ಮೇಲುಗೈ

ಖಾನಾಪುರ:(news belgaum) ಸ್ಥಳೀಯ ಸಂಸ್ಥೆಗಳ ಚುನಾವಣೆಯು ರಾಷ್ಟ್ರ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಪ್ರತಿಷ್ಟೇಯ ಕಣವಾಗಿದ್ದರು. ಗಡಿನಾಡು ಬೆಳಗಾವಿ ಜಿಲ್ಲೆಯ ಖಾನಾಪುರದ ಪಟ್ಟಣ ಪಂಚಾಯತ ಸ್ಥಳೀಯ ನಾಯಕರ ಪ್ರತಿಷ್ಟೇಯ ಕಣವಾಗಿತ್ತು.
ಅದೇ ಪ್ರಕಾರ ಇಂದು ನಡೆದ ಚುನಾವಣಾ ಫಲಿತಾಂಶದಲ್ಲಿ ಖಾನಾಪುರ ಪಟ್ಟಣ ಪಂಚಾಯತದಲ್ಲಿ ಸ್ಥಳೀಯ ನಾಯಕ ಜೆಡಿಎಸ್ ಮುಖಂಡ ರಫೀಕ ಖಾನಾಪುರಿ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ. ಖಾನಾಪುರ ಪಟ್ಟಣ ಪಂಚಾಯತನಲ್ಲಿ ಒಟ್ಟಾರೆಯಾಗಿ ೨೦ವಾರ್ಡಗಳಿದ್ದು ಅದರಲ್ಲಿ ರಫೀಕ ಖಾನಾಪುರಿ ಬೆಂಬಲಿತ ಜೆಡಿಎಸ್ ಪಕ್ಷದ ಫಾಲೊವರ್ಸನ ೧೦ಅಭ್ಯರ್ಥಿಗಳು ವಿಜಯದ ಮಾಲೆ ಕೊರಳಿಗೆ ಹಾಕಿಕೊಂಡಿದ್ದಾರೆ.
ಜಯಶಾಲಿಯಾದ ಅಭ್ಯರ್ಥಿಗಳು
೧.ರಫೀಕ ಖಾನಾಪುರಿ, ೨.ಮೇಘಾ ಕುಂದರಗಿ, ೩.ಹನುಮಂತ ಪೂಜಾರಿ, ೪.ರಫೀಕ ವಾರಿಮನಿ,
೫.ಮೀನಾಕ್ಷಿ ಬೈಲೂರಕರ, ೬.ಮಜರ ಖಾನಾಪುರಿ, ೭ಫಾತೀಮಾ ಬೇಪಾರಿ, ೮ಸಾಯೇರಾ ಸನದಿ,
೯ಲಕ್ಷ್ಮಣ ಮಾದರ ಮತ್ತು ೧೦.ನಾರಾಯಣ ಓಗಲೆ.
ರಫೀಕ ಖಾನಾಪುರಿ ಬೆಂಗಲಿಗರ ಜಯಕ್ಕೆ ಖಾನಾಪುರ ತಾಲೂಕಿನ ಜೆಡಿಎಸ್ ಮುಖಂಡ ನಾಸೀರ ಬಾಗವಾನ ಅಭಿನಂದನೆ ಸಲ್ಲಿಸಿದ್ದಾರೆ.

ಜೊಲ್ಲೆ-ಹುಕ್ಕೇರಿ ಸಮಬಲ ಹೋರಾಟ:ಸದಲಗಾ ಪುರಸಭೆ ಅತಂತ್ರ

ಚಿಕ್ಕೋಡಿ ವ್ಯಾಪ್ತಿಯ ಸ್ಥಳೀಯ ಸಂಘ ಸಂಸ್ಥೆಗಳ ಅಂತಿಮ‌ ಫಲಿತಾಂಶ ಹೊರಬಿದ್ದಿದೆ.
ಹುಕ್ಕೇರಿ ಪುರಸಭೆ
ಬಿಜೆಪಿ: ೦೮
ಕಾಂಗ್ರೇಸ್:೧೨
ಪಕ್ಷೇತರ: ೦೩
ಕಾಂಗ್ರೇಸ್ ಪಾಲಾದ ಪುರಸಭೆ.
ಸಂಕೇಶ್ವರ ಪುರಸಭೆ
ಕಾಂಗ್ರೇಸ್:೧೧
ಬಿಜೆಪಿ: ೧೧
ಪಕ್ಷೇತರ: ೦೧
ಅತಂತ್ರ ಸ್ಥತಿಯಲ್ಲಿ ಪುರಸಭೆ.
ರಾಯಭಾಗ
ಪಟ್ಟಣ ಪಂಚಾಯತ
ಕಾಂಗ್ರೆಸ್ : ೧೨
ಬಿಜೆಪಿ: ೦೭
ಕಾಂಗ್ರೇಸ್ ಪಾಲಾದ ಪಪಂ.
ಕುಡಚಿ ಪುರಸಭೆ
ಕಾಂಗ್ರೇಸ್:೧೩
ಬಿಜೆಪಿ: ೧೦
ಕಾಂಗ್ರೇಸ್ ಪಾಲಾದ ಪುರಸಭೆ.
ನಿಪ್ಪಾಣಿ ನಗರಸಭೆ
ಕಾಂಗ್ರೇಸ್:೧೨
ಬಿಜೆಪಿ: ೧೩
ಪಕ್ಷೇತರ:೦೬
ಅತಂತ್ರವಾದ ನಿಪ್ಪಾಣಿ ನಗರಸಭೆ.
ಚಿಕ್ಕೋಡಿ ಪುರಸಭೆ
ಬಿಜೆಪಿ: ೧೩
ಕಾಂಗ್ರೇಸ್ :೧೦
ಬಿಜೆಪಿ ಪಾಲಾದ ಪುರಸಭೆ ಶಾಸಕ ಗಣೇಶ್ ಹುಕ್ಕೇರಿ ಮತ್ತು ಸಂಸದ ಪ್ರಕಾಶ್ ಹುಕ್ಕೇರಿಗೆ ಭಾರಿ ಮುಖಭಂಗ.
ಸದಲಗಾ ಪುರಸಭೆ
ಕಾಂಗ್ರೇಸ್: ೧೦
ಬಿಜೆಪಿ:೧೦
ಜೆಡಿಎಸ್: ೨
ಪಕ್ಷೇತರ: ೧
ಸದಲಗಾ ಪುರಸಭೆ ಅತಂತ್ರ ಫಲಿತಾಂಶ ಕಂಡಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ಫಲಿತಾಂಶ ಪ್ರಕಟ
ಬೆಳಗಾವಿ: ಜಿಲ್ಲೆಯಲ್ಲಿ ಜರುಗಿದ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಸೋಮವಾರ (ಸೆ.03) ಪ್ರಕಟಗೊಂಡಿದೆ.
14 ನಗರ ಸ್ಥಳೀಯ ಸಂಸ್ಥೆಗಳ 343 ವಾರ್ಡುಗಳ ಪೈಕಿ ಪಕ್ಷೇತರ ಅಭ್ಯರ್ಥಿಗಳು ಅತಿಹೆಚ್ಚು 144 ಸ್ಥಾನಗಳನ್ನು ಗಳಿಸಿದ್ದಾರೆ. ಬಿಜೆಪಿ ಪಕ್ಷದ 104 ಅಭ್ಯರ್ಥಿಗಳು, ಕಾಂಗ್ರೆಸ್‍ನ-85 ಹಾಗೂ ಜೆಡಿಎಸ್ ಪಕ್ಷದ 10 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ನಗರಸಭೆ:
ಗೋಕಾಕ ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ 30 ಪಕ್ಷೇತರ ಅಭ್ಯರ್ಥಿಗಳು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ.
ನಿಪ್ಪಾಣಿ ನಗರಸಭೆಯ ಒಟ್ಟು 31 ಸ್ಥಾನಗಳಲ್ಲಿ ಪಕ್ಷೇತರ-18 ಹಾಗೂ ಬಿಜೆಪಿಯ 13 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಪಟ್ಟಣ ಪಂಚಾಯತ:
ರಾಯಬಾಗ ಪಟ್ಟಣ ಪಂಚಾಯತನ ಒಟ್ಟು 19 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ 11 ಅಭ್ಯರ್ಥಿಗಳು ಹಾಗೂ 8 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಖಾನಾಪುರ ಪಟ್ಟಣ ಪಂಚಾಯತನ ಒಟ್ಟು 20 ಸ್ಥಾನಗಳಲ್ಲಿ 20 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಪುರಸಭೆ:
ರಾಮದುರ್ಗ ಪುರಸಭೆಯ ಒಟ್ಟು 27 ಸ್ಥಾನಗಳಲ್ಲಿ ಬಿಜೆಪಿ-16, ಕಾಂಗ್ರೆಸ್-10 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಬೈಲಹೊಂಗಲ ಪುರಸಭೆಯ ಒಟ್ಟು 27 ಸ್ಥಾನಗಳಲ್ಲಿ ಬಿಜೆಪಿ-6, ಕಾಂಗ್ರೆಸ್-18 ಹಾಗೂ 3 ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಸಂಕೇಶ್ವರ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ-11, ಕಾಂಗ್ರೆಸ್-11 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಸವದತ್ತಿ ಪುರಸಭೆಯ ಒಟ್ಟು 27 ಸ್ಥಾನಗಳಲ್ಲಿ ಬಿಜೆಪಿ-17, ಕಾಂಗ್ರೆಸ್-9 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮೂಡಲಗಿ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ-11, ಜೆಡಿಎಸ್-8 ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಚಿಕ್ಕೋಡಿ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ 23 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಕುಡಚಿ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ-8, ಕಾಂಗ್ರೆಸ್-14 ಹಾಗೂ ಓರ್ವ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
ಹುಕ್ಕೇರಿ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ-8, ಕಾಂಗ್ರೆಸ್-12 ಹಾಗೂ 3 ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
ಸದಲಗಾ ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ ಬಿಜೆಪಿ-13, ಜೆಡಿಎಸ್-2 ಹಾಗೂ 8 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಕೊಣ್ಣೂರು ಪುರಸಭೆಯ ಒಟ್ಟು 23 ಸ್ಥಾನಗಳಲ್ಲಿ 23 ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.