ಉತ್ತಮ ಸಮಾಜಕ್ಕಾಗಿ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತ: ಜಿಲ್ಲೆಯಲ್ಲಿ ಶೇ.70.59 ಮತದಾನ

news belagavi

0

ಬೆಳಗಾವಿ:(news belagavi) ಜಿಲ್ಲೆಯಲ್ಲಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶುಕ್ರವಾರ (ಆ.31) ಶಾಂತಿಯುತವಾಗಿ ಜರುಗಿತು. ಜಿಲ್ಲೆಯಲ್ಲಿ ಒಟ್ಟಾರೆ ಶೇ. 70.59 ರಷ್ಟು ಮತದಾನವಾಗಿದೆ.
News Belgaum-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತ:  ಜಿಲ್ಲೆಯಲ್ಲಿ ಶೇ.70.59 ಮತದಾನ News Belgaum-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತ:  ಜಿಲ್ಲೆಯಲ್ಲಿ ಶೇ.70.59 ಮತದಾನ 1ಜಿಲ್ಲೆಯ ಗೋಕಾಕ ಹಾಗೂ ನಿಪ್ಪಾಣಿ ನಗರಸಭೆ, ರಾಯಬಾಗ ಮತ್ತು ಖಾನಾಪೂರ ಪಟ್ಟಣ ಪಂಚಾಯತ ಹಾಗೂ ರಾಮದುರ್ಗ, ಬೈಲಹೊಂಗಲ, ಸಂಕೇಶ್ವರ, ಸವದತ್ತಿ, ಮೂಡಲಗಿ, ಚಿಕ್ಕೋಡಿ, ಕುಡಚಿ, ಹುಕ್ಕೇರಿ, ಸದಲಗಾ ಮತ್ತು ಕೊಣ್ಣೂರ ಪಟ್ಟಣ ಪಂಚಾಯತ ಸೇರಿದಂತೆ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳ 343 ವಾರ್ಡ್‍ಗಳಿಗೆ ಶುಕ್ರವಾರ ಮತದಾನ ನಡೆಯಿತು.
ಎಲ್ಲ ಮತಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಿತು. ಬೆಳಿಗ್ಗೆ ನಿಧಾನಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನದ ನಂತರ ವೇಗ ಪಡೆಯಿತು. ಮತದಾರರು ತಂಡೋಪತಂಡವಾಗಿ ಬಂದು ಮತ ಚಲಾಯಿಸಿದರು. ವಯೋವೃದ್ಧರು ಸಹ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು.

ಮತದಾನದ ಅಂಕಿ ಅಂಶ:
ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಜಿಲ್ಲಾದ್ಯಂತ ಒಟ್ಟು ಶೇ.11.96 ರಷ್ಟು ಮತದಾನ ಜರುಗಿತು. 11 ಗಂಟೆಗೆ ಶೇ.30.35, ಮಧ್ಯಾಹ್ನ 1 ಗಂಟೆಗೆ ಶೇ.45.23 ಹಾಗೂ 3 ಗಂಟೆಗೆ ಶೇ.57.84 ರಷ್ಟು ಮತದಾನವಾಗಿತ್ತು. ಅಂತಿಮವಾಗಿ ಶೇ.70.59 ರಷ್ಟು ಮತದಾನವಾಯಿತು.

ಕ್ಷೇತ್ರವಾರು ಮತದಾನ:
ಜಿಲ್ಲೆಯ ಸದಲಗಾ ಪುರಸಭೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಶೇ. 87.63 ರಷ್ಟು ಮತದಾನ ನಡೆಯಿತು. ಗೋಕಾಕ ಪುರಸಭೆ ಅತಿ ಕಡಿಮೆ ಶೇ.58.66 ರಷ್ಟು ಮತದಾನವಾಯಿತು.
ನಿಪ್ಪಾಣಿ ಶೇ.72.37, ಬೈಲಹೊಂಗಲ ಶೇ. 68.95, ರಾಮದುರ್ಗ ಶೇ.65.96 , ಸಂಕೇಶ್ವರ ಶೇ.72.06 , ಸವದತ್ತಿ ಶೇ.74.56 , ಮೂಡಲಗಿ ಶೇ. 75.97, ಚಿಕ್ಕೋಡಿ ಶೇ.76.36 , ಕುಡಚಿ ಶೇ.68.82 , ಹುಕ್ಕೇರಿ ಶೇ.74.38 , ಕೊಣ್ಣೂರ ಶೇ.67.62 , ರಾಯಬಾಗ ಶೇ.68.47 , ಖಾನಾಪೂರ ಶೇ.76.94 ರಷ್ಟು ಮತದಾನವಾಗಿದೆ

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: