ಉತ್ತಮ ಸಮಾಜಕ್ಕಾಗಿ

ಏಪ್ರೀಲ್ 8ರಂದು “ಮತದಾರರ ಮಿಂಚಿನ ನೋಂದಣಿ ಅಭಿಯಾನ”

"Electoral Lightning Registration Campaign" on April 8

0

ಬೆಳಗಾವಿ: (news belagavi)ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಚುನಾವಣಾ ಆಯೋಗವು ಇದೇ ಏಪ್ರೀಲ್-08 ರಂದು ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ “ಮಿಂಚಿನ ನೋಂದಣಿ ಅಭಿಯಾನ” ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮತಗಟ್ಟೆಯಲ್ಲೇ ಲಭ್ಯವಿರುತ್ತಾರೆ. ನಮೂನೆ 6, 7, 8 ಹಾಗೂ 8ಎ ಗಳನ್ನು ಒದಗಿಸಿ, ಸೂಕ್ತ ದಾಖಲೆಗಳೊಂದಿಗೆ ಅರ್ಜಿದಾರರ ಸಹಿಯೊಂದಿಗೆ ಹಿಂಪಡೆದು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತೆಗೆದು ಹಾಕುವುದು ಹಾಗೂ ತಿದ್ದುಪಡಿ ಮಾಡಿಕೊಳ್ಳಲು ಹಾಗೂ ಇತ್ಯಾದಿಗಳಿಗಾಗಿ ನಮೂನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.
ಏಪ್ರೀಲ್ 8ರಂದು “ಮತದಾರರ ಮಿಂಚಿನ ನೋಂದಣಿ ಅಭಿಯಾನ”- Tarun kranti 1ಅಲ್ಲದೇ ಆಯೋಗದ ವೆಬ್‍ಸೈಟ್: (www.ceokarnataka.kar.nic.in)ದಲ್ಲಿಯೂ ಕೂಡ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಹಿಂದೆ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದು, ಈಗ ಬಿಟ್ಟು ಹೋಗಿದ್ದರೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಇದೇ ಏಪ್ರೀಲ್ 14ರ ವರೆಗೆ ಅವಕಾಶವಿರುತ್ತದೆ ಎಂದು ಬೆಳಗಾವಿ ಜಿಲ್ಲೆಯ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಮಚಂದ್ರನ್ ಆರ್. ಅವರು ತಿಳಿಸಿದರು.”Electoral Lightning Registration Campaign” on April 8

ತಾಲೂಕಿನ ವಿವಿಧ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆಭೇಟಿ

ಏಪ್ರೀಲ್ 8ರಂದು “ಮತದಾರರ ಮಿಂಚಿನ ನೋಂದಣಿ ಅಭಿಯಾನ”- Tarun krantiಬೆಳಗಾವಿ ನಗರದ ತಾಲೂಕಿನ ವಿವಿಧ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಬುಧವಾರ (ಏ.6) ರಂದು ಭೇಟಿ ನೀಡಿ ಪರಿಶೀಲಿಸಿದರು.Visit the various SSLC examination centers in the taluk

Leave A Reply

 Click this button or press Ctrl+G to toggle between Kannada and English

Your email address will not be published.