ಉತ್ತಮ ಸಮಾಜಕ್ಕಾಗಿ

ಪ್ರತಿಯೊಬ್ಬರಿಗೂ ಪರಿಸರದ ಕಾಳಜಿ ಅತ್ಯಗತ್ಯ ಅಧ್ಯಕ್ಷ ಪ್ರೊ. ಜಿ.ಕೆ. ಖಡಬಡಿ ಹೇಳಿದರು.

Environmental concern for everyone is essentially President Pro. GK The quarry said.

0

ಬೆಳಗಾವಿ: (news belgaum)ಅಭಿವೃದ್ಧಿಯ ಹೆಸರಿನಲ್ಲಿ ಗಿಡ-ಮರಗಳನ್ನು ನಾಶ ಮಾಡುವುದನ್ನು ನಿಲ್ಲಿಸಿ, ಪರಿಸರ ರಕ್ಷಣೆ ಮಾಡಲು ಎಲ್ಲರೂ ಮುಂದಾಗಬೇಕೆಂದು ಪರಿಸರ ಮಿತ್ರ ಸಂಘದ ಅಧ್ಯಕ್ಷ ಪ್ರೊ. ಜಿ.ಕೆ. ಖಡಬಡಿ ಹೇಳಿದರು.
News Belgaum-ಪ್ರತಿಯೊಬ್ಬರಿಗೂ ಪರಿಸರದ ಕಾಳಜಿ ಅತ್ಯಗತ್ಯ  ಅಧ್ಯಕ್ಷ ಪ್ರೊ. ಜಿ.ಕೆ. ಖಡಬಡಿ ಹೇಳಿದರು. News Belgaum-ಪ್ರತಿಯೊಬ್ಬರಿಗೂ ಪರಿಸರದ ಕಾಳಜಿ ಅತ್ಯಗತ್ಯ  ಅಧ್ಯಕ್ಷ ಪ್ರೊ. ಜಿ.ಕೆ. ಖಡಬಡಿ ಹೇಳಿದರು. 1ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಪರಿಸರ ಮಿತ್ರ ಸಂಘ ಸೇರಿದಂತೆ ಇನ್ನಿತರ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಭವನದಲ್ಲಿ ಮಂಗಳವಾರ (ಜೂ.5) ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.News Belgaum-ಪ್ರತಿಯೊಬ್ಬರಿಗೂ ಪರಿಸರದ ಕಾಳಜಿ ಅತ್ಯಗತ್ಯ  ಅಧ್ಯಕ್ಷ ಪ್ರೊ. ಜಿ.ಕೆ. ಖಡಬಡಿ ಹೇಳಿದರು. 3
ಮನುಷ್ಯ ತನ್ನ ದುರಾಸೆಗಳನ್ನು ಈಡೇರಿಸಿಕೊಳ್ಳಲು ಅರಣ್ಯವನ್ನು ಹಾಳು ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡದೇ ಪರಿಸರ ರಕ್ಷಣೆ ಮಾಡಬೇಕು. ಪ್ರತಿಯೊಬ್ಬರಿಗೂ ಪರಿಸದ ಬಗ್ಗೆ ಕಾಳಜಿ ಅತ್ಯಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯರು ಇಂದು ಉತ್ತಮವಾಗಿರುವ ಪರಿಸರದಿಂದ ಕೂಡಿದ ದೇಶ ನಿರ್ಮಾಣ ಮಾಡುವುದನ್ನು ಮರೆತು ಕಾಂಕ್ರೀಟ್ ದೇಶ ನಿಮಾರ್ಣಕ್ಕೆ ಕೈ ಹಾಕುತಿದ್ದಾರೆ. ಇದರಿಂದ ವಾತಾವರಣದಲ್ಲಿ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಕೋಪಗಳಿಗೆ ಹಾದಿ ಮಾಡಿಕೊಟ್ಟಂತಾಗುತ್ತಿದೆ. ಇದನ್ನೆಲ್ಲ ತಡೆಗಟ್ಟಲು ನಮ್ಮ ಯುವಕರು ಮುಂದೆ ಬಂದು ನಾಡಿನ ರಕ್ಷಣೆಗಾಗಿ ಕಾಡು ರಕ್ಷಣೆ ಮಾಡಲು ಸಜ್ಜಾಗಬೇಕೆಂದು ಸಲಹೆ ನೀಡಿದರು.
ಸಮುದ್ರ ಮಂಥನದ ವೇಳೆಯಲ್ಲಿ ಶಿವನು ಹಾಲಾಹಲ ಸೇವಿಸಿ ನೀಲಕಂಠನಾದಂತೆ, ಗಿಡ-ಮರಗಳು ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೀರಿಕೊಂಡು ಪರಿಸರದ ನೀಲಕಂಠನಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರಿಂದ ಪರಿಸರ ಉಳಿಸುವುದು ಇಂದಿನ ಯುಗದಲ್ಲಿ ಅವಶ್ಯವಾಗಿದೆ. ಪರಿಸರ ರಕ್ಷಣೆ ಮಾಡುವುದು ನಮ್ಮೆಲರ ಹೊಣೆ. ವಿದ್ಯಾರ್ಥಿಗಳಿಗೆ ಗಿಡ ನೆಡಲು ಪ್ರೇರಣೆ ನೀಡಬೇಕೆಂದು ಹೇಳಿದರು.
ವಿಶ್ವ ಸಂಸ್ಥೆ ಈ ವರ್ಷ “ಪ್ಲಾಸ್ಟಿಕ್ ಮಾಲಿನ್ಯ ತಡೆಯೋಣ” ಎಂಬ ವ್ಯಾಖ್ಯಾವನ್ನು ಘೋಷಣೆ ಮಾಡಿದೆ. ಆ ವ್ಯಾಖ್ಯಾನದಂತೆ ಪ್ಲಾಸ್ಟಿಕ್ ಮುಕ್ತ ನಾಡು ನಿರ್ಮಾಣ ಮಾಡಲು ಎಲ್ಲರೂ ಬದ್ಧರಾಗೋಣ ಎಂದು ಸ್ವಾಮೀಜಿಯವರು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಪರಿಸರದ ಬಗ್ಗೆ ಮಾತನಾಡಿದರು. ಅರಣ್ಯ ಇಲಾಖೆಯ ವತಿಯಿಂದ ಸಸಿ ಮತ್ತು ಬಟ್ಟೆಯ ಕೈಚೀಲ ವಿತರಣೆ ಮಾಡಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಕರೆ ನೀಡಲಾಯತು.
ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಕಿರಣ ಕಿಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ, ಅರಣ್ಯ ಉಪಸಂರಕ್ಷಾಣಾಧಿಕಾರಿ ಅಶೋಕ ಪಾಟೀಲ, ಎಸ್.ಎಸ್. ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಕೆ.ಬಿ. ಹಿರೇಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ವಿಜಯಕುಮಾರ ಮಗದುಮ್, ಲಘು ಉದ್ಯಮಿ ಪ್ರಿಯಾ ಪುರಾಣಿಕ್, ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಮೋಹನ ಗುಂಡ್ಲೂರ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಗೋಪಾಲಕೃಷ್ಣ ಸನತಂಗಿ ಸ್ವಾಗತಿಸಿದರು. ಡಾ. ನವೀನ್ ಡಿ. ವಂದಿಸಿದರು. ಶಿವಲೀಲಾ ಪೂಜಾರ ನಿರೂಪಿಸಿದರು.
ಕಾಲ್ನಡಿಗೆ ಜಾಥಾ:
ಕಾರ್ಯಕ್ರಮಕ್ಕೂ ಮುಂಚೆ ನಗರದ ರಾಣಿ ಚನ್ನಮ್ಮ ವೃತ್ತದಿಂದ ಹಮ್ಮಿಕೊಳ್ಳಲಾಗಿದ್ದ ಕಾಲ್ನಡಿಗೆ ಜಾಥಾಗೆ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಆರ್.ಜೆ. ಸತೀಶ ಸಿಂಗ್ ಅವರು ಚಾಲನೆ ನೀಡಿದರು.
ಚನ್ನಮ್ಮ ವೃತ್ತದಿಂದ ಆರಂಭವಾದ ಕಾಲ್ನಡಿಗೆ ಜಾಥಾ ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದವರೆಗೆ ಜರುಗಿತು.

ಅಪರ ಜಿಲ್ಲಾಧಿಕಾರಿ ಎಚ್.ಬಿ. ಬೂದೆಪ್ಪ, ಮಹಾನಗರ ಪಾಲಿಕೆಯ ಆಯುಕ್ತರಾದ ಕೃಷ್ಟಗೌಡ ತಾಯಣ್ಣವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.