ಉತ್ತಮ ಸಮಾಜಕ್ಕಾಗಿ

ಜಿಲ್ಲೆಯಲ್ಲಿ 6 ಉಪ ಮತಗಟ್ಟೆ ಸ್ಥಾಪನೆ

Establishment of 6 sub-constituencies in the district

0

ಚುನಾವಣಾ ವೆಚ್ಚ ದರಪಟ್ಟಿ ಕುರಿತು ಚರ್ಚೆ: 230 ಮತಗಟ್ಟೆ ವಿಳಾಸ ಬದಲಾವಣೆ-ಜಿಯಾವುಲ್ಲಾ  
News Belgaum-ಚುನಾವಣಾ ವೆಚ್ಚ ದರಪಟ್ಟಿ ಕುರಿತು ಚರ್ಚೆ: 230 ಮತಗಟ್ಟೆ ವಿಳಾಸ ಬದಲಾವಣೆ-ಜಿಯಾವುಲ್ಲಾಬೆಳಗಾವಿ:(newsbelgaum) ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಜಿಲ್ಲೆಯಲ್ಲಿ ನಿಗದಿತ ಮತದಾರರಗಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ವಿಭಜಿಸಿ 6 ಉಪ ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ(ಮಾ.26) ಕರೆಯಲಾಗಿದ್ದ ನೋಂದಾಯಿತ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮೊದಲು ಒಟ್ಟು 4408 ಮಗತಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದೀಗ ಮತ್ತೆ 6 ಉಪ ಮತಗಟ್ಟೆಗಳ(ಆಕ್ಸಿಲರಿ ಪೋಲಿಂಗ್ ಸ್ಟೇಷನ್) ಸ್ಥಾಪನೆಗೆ ಪ್ರಸ್ತಾವ ಕಳಿಸಿರುವುದರಿಂದ ಒಟ್ಟು ಮತಗಟ್ಟೆಗಳ ಸಂಖ್ಯೆ 4414ಕ್ಕೆ ಏರಿದೆ ಎಂದು ವಿವರಿಸಿದರು.
11- ಬೆಳಗಾವಿ (ಉತ್ತರ) ಮತಕ್ಷೇತ್ರದಲ್ಲಿ ರಾಮತೀರ್ಥ ನಗರ (ಮತಗಟ್ಟೆ ಸಂಖ್ಯೆ 51 ಎ), ರಾಮನಗರ (153 ಎ), ಹೊಸ ವೀರಭದ್ರ ನಗರ (183 ಎ) ಮೂರು ಉಪ ಮತಗಟ್ಟೆ ಸ್ಥಾಪಿಸಲಾಗುವುದು.
ಅದೇ ರೀತಿ 13-ಬೆಳಗಾವಿ(ಗ್ರಾಮೀಣ) ಮತಕ್ಷೇತ್ರದಲ್ಲಿ ಕಂಗ್ರಾಳಿ (48 ಎ); 14-ಖಾನಾಪುರ ಮತಕ್ಷೇತ್ರದಲ್ಲಿ ನಂದಗಡ(107 ಎ) ಹಾಗೂ 18-ರಾಮದುರ್ಗ ಮತಕ್ಷೇತ್ರದಲ್ಲಿ ಮನಿಹಾಳ( 218 ಎ) ಉಪ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶದಲ್ಲಿ 1300 ಮತದಾರರು ಹಾಗೂ ನಗರ ಪ್ರದೇಶಗಳಲ್ಲಿ 1400 ಮತದಾರರಗಿಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳನ್ನು ಗುರುತಿಸಿ ಅದೇ ಮತಗಟ್ಟೆ ಸಂಖ್ಯೆಯ ಮುಂದೆ ‘ಎ’ ಸೇರ್ಪಡೆಗೊಳಿಸುವ ಮೂಲಕ ಉಪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ನಿಗದಿತ ಮತದಾರರನ್ನು ಹೊಂದಿರುವ ಮತಗಟ್ಟೆಯ ಮತದಾರರನ್ನು ಸಮಾನವಾಗಿ ವಿಭಜಿಸಿ ಉಪ ಮತಗಟ್ಟೆಗೆ ವರ್ಗಾಯಿಸಲಾಗುತ್ತದೆ ಎಂದರು.

117 ಮತಗಟ್ಟೆಗಳ ಕಟ್ಟಡ ಬದಲಾವಣೆ:
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿದ್ದ 4408 ಮತಗಟ್ಟೆಗಳ ಪೈಕಿ ಶಿಥಿಲಾವಸ್ಥೆಯಲ್ಲಿರುವ ಹಾಗೂ ಒಂದೇ ಮತಗಟ್ಟೆಯಲ್ಲಿ 4ಕ್ಕಿಂತ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವ ಒಟ್ಟು 117 ಮತಗಟ್ಟೆಗಳ ಕಟ್ಟಡಗಳನ್ನು ಕೂಡ ಬದಲಾಯಿಸಲಾಗಿದೆ ಎಂಬುದನ್ನು ಜಿಲ್ಲಾ ಚುನಾವಣಾಧಿಕಾರಿ ಜಿಯಾವುಲ್ಲಾ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಗಮನಕ್ಕೆ ತಂದರು.
ಅದೇ ರೀತಿ ಒಟ್ಟಾರೆ 230 ಮತಗಟ್ಟೆಗಳ ವಿಳಾಸ ಕೂಡ ಬದಲಾವಣೆಗೊಂಡಿದ್ದು, ಜಿಲ್ಲಾ ಚುನಾವಣಾಧಿಕಾರಿಗಳಿಂದ ಕಳುಹಿಸಲಾಗಿರುವ ಪ್ರಸ್ತಾವನೆಗೆ ಚುನಾವಣಾ ಆಯೋಗ ಅನುಮೋದನೆ ನೀಡಿದ ಬಳಿಕ ಮತಗಟ್ಟೆಗಳ ಸಂಪೂರ್ಣ ವಿವರ, ಕಟ್ಟಡಗಳ ಬದಲಾವಣೆ ಮತ್ತು ವಿಳಾಸ ಬದಲಾವಣೆಯ ಸಮಗ್ರ ಮಾಹಿತಿ ಹೊಂದಿರುವ ಪುಸ್ತಿಕೆಯನ್ನು ನಂತರ ರಾಜಕೀಯ ಪಕ್ಷಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ದರಪಟ್ಟಿ ಕುರಿತು ಚರ್ಚೆ:
ಚುನಾವಣಾ ಸಂದರ್ಭದಲ್ಲಿ ಪಕ್ಷ ಅಥವಾ ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚಗಳನ್ನು ಲೆಕ್ಕ ಹಾಕುವುದಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ತಯಾರಿಸಲಾಗಿರುವ ಚುನಾವಣಾ ಪ್ರಚಾರ ಸಾಮಗ್ರಿ, ವಾಹನ, ಪೆಂಡಾಲ್ ಸೇರಿದಂತೆ ವಿವಿಧ ವಸ್ತು ಹಾಗೂ ಸೇವೆಗಳ ದರಪಟ್ಟಿಯ ಬಗ್ಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಚರ್ಚೆ ನಡೆಸಲಾಯಿತು.
ಪ್ರತಿನಿಧಿಗಳ ಅಭಿಪ್ರಾಯದ ಮೇರೆಗೆ ಕುರ್ಚಿಗಳು, ಶಲ್ಯ ಸೇರಿದಂತೆ ಕೆಲವೊಂದು ವಸ್ತು ಹಾಗೂ ಸೇವೆಗಳ ದರವನ್ನು ಕಡಿಮೆ ಮಾಡಲು ಜಿಲ್ಲಾ ಚುನಾವಣಾಧಿಕಾರಿ ಎಸ್.ಜಿಯಾವುಲ್ಲಾ ಅವರು ಒಪ್ಪಿಗೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಅಗತ್ಯವಿರುವ ಅನುಮತಿಗಳನ್ನು ತುರ್ತಾಗಿ ನೀಡಲು ಅನುಕೂಲವಾಗವಂತೆ ಚುನಾವಣಾ ಆಯೋಗವು ‘ಸುಗಮ’ ಮತ್ತು ‘ಸುವಿಧಾ’ ಎಂಬ ಸಾಫ್ಟವೇರ್ ಅಭಿವೃದ್ಧಿಪಡಿಸುತ್ತಿದ್ದು, ಆನ್‍ಲೈನ್ ಅನುಮತಿಗೆ ಅನುಕೂಲ ಆಗಲಿದೆ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಮತಯಂತ್ರ, ವಿವಿಪ್ಯಾಟ್ ಹಾಗೂ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ ಕಾರ್ಯಚಟುವಟಿಕೆಗಳ ಕುರಿತಂತೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಮಾಧ್ಯಮದವರಿಗೆ ವಿಶೇಷ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ಇನ್ನಷ್ಟು ವಿಸ್ತøತ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾ ಚುನಾವಾಣಧಿಕಾರಿ ಎಸ್.ಜಿಯಾವುಲ್ಲಾ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಚುನಾವಣೆಗೆ ನಿಗದಿಪಡಿಸಿದ ದರಪಟ್ಟಿಯ ಬಗ್ಗೆ ವಿವರಿಸಿದರು. ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಏನಾದರೂ ಸಲಹೆಗಳಿದ್ದರೆ ಲಿಖಿತವಾಗಿ ಸಲ್ಲಿಸಿದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಭಾರತೀಯ ಜನತಾ ಪಕ್ಷದ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಮೋಹನ್ ರಡ್ಡಿ, ನಗರ ಘಟಕದ ಪಿ.ಎಂ.ವಗ್ಗನ್ನವರ, ಬಹುಜನ ಸಮಾಜ ಪಕ್ಷ, ಸಿಪಿಐ ಪಕ್ಷ, ಎನ್‍ಸಿಪಿ ಪ್ರತಿನಿಧಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗ್ದುಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.Debate on Election Expenditure List: 230 Booth Address Change – Ziaullah

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.