ಉತ್ತಮ ಸಮಾಜಕ್ಕಾಗಿ

ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುತ್ತೇನೆ: ಚರ್ಚೆಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ

Farmers' door to be delivered to debt-free letter: CM Kumaraswamy

0

ಬೆಂಗಳೂರು: ಬೆಳಗಾವಿ: (news belgaum)ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರೈತರ ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಕರೆದಿದ್ದ ಸಭೆ ಇಂದು ಗೊಂದಲದಿಂದ ನಡೆಯಿತು.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಗೋವಿಂದ ಕಾರಜೋಳ ಸೇರಿ ವಿವಿಧ ಪಕ್ಷಗಳ ನಾಯಕರು 200 ಕ್ಕೂ ಹೆಚ್ಚು ರೈತ ಸಂಘಗಳ ಮುಖಂಡರು ಭಾಗವಹಿಸಿದ್ದರು.
News Belgaum-Auto Draft 11 News Belgaum-Auto Draft 12 ಚರ್ಚೆಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು, ನಾನು ಚುನಾವಣೆ ಪೂರ್ವದಲ್ಲೇ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದೇನೆ ಅದರಿಂದ ಹಿಂದೆ ಸರಿಯುವುದಿಲ್ಲ. ನಾನು ಪಲಾಯನ ಮಾಡುವುದಿಲ್ಲ. ಸಾಲಮನ್ನಾ ಸಂಬಂಧ ಡಿಸಿಎಂ ಪರಮೇಶ್ವರ್ ಮತ್ತು ನಾನು ಇಬ್ಬರೂ ಚರ್ಚಿಸಿದ್ದೇವೆ ಎಂದರು.
ರೈತರ ಸಾಲಮನ್ನಾ ಮಾಡುವುದರಿಂದ ನಗರ ಪ್ರದೇಶದ ಅಭಿವೃದ್ಧಿಯ ಹಣವನ್ನು ರೈತರ ಸಾಲಮನ್ನಾಗಾಗಿ ಬಳಕೆಯಾಗಲಿದೆ. ಅದರಿಂದ ಬೆಂಗಳೂರಿನ ನಾಗರಿಕರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ. ಇದು ಸರಿಯಲ್ಲ. ಸಾಲಮನ್ನಾ ಮಾಡಿದರೂ ಸಹ ಖಜಾನೆಯೂ ಭದ್ರವಾಗಿರಲಿದೆ ಹಾಗೂ ರೈತರ ಸಾಲ ಮನ್ನಾ ಕೂಡ ಆಗಲಿದೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕೆಲ ರೈತ ಮುಖಂಡರು ಸಂಪೂರ್ಣ ಸಾಲಮನ್ನಾ ಮಾಡುವಂತೆ ಪಟ್ಟುಹಿಡಿದರು. ಈ ವೇಳೆ ರೈತ ಮುಖಂಡರ ನಡುವೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ರೈತ ಮುಖಂಡರು ಯಾರೂ ಗೊಂದಲಕ್ಕೊಳಗಾಗದೇ ಸಾಲಮನ್ನಾ ಕುರಿತಂತೆ ಸಲಹೆ ನೀಡುವಂತೆ ಸಿಎಂ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ರೈತ ಸಂಘಗಳು ಮತ್ತು ಮೂವತ್ತು ಜಿಲ್ಲೆಗಳ ರೈತ ಮುಖಂಡರಿಂದ ಸಲಹೆಗಳನ್ನು ಪಡೆದು ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಾಲಮನ್ನಾ ಮಾಡಲು ಸಮಯಾವಕಾಶ ಕೋರಿದರು.
15 ದಿನ ಕಾಲಾವಕಾಶ ಕೋಡಿ, ಸಂಪುಟ ರಚೆನೆ ಕಸರತ್ತು ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಆನಂತರ ರಾಹುಲ್ ಗಾಂಧಿಯವರ ಜೊತೆಯೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನನಗೆ ನಿಮ್ಮ ಬೆಂಬಲ ಅವಶ್ಯಕತೆ ಇದೆ ಎಂದು ಕೇಳಿಕೊಂಡರು.
ರಾಜ್ಯದ ರೈತರ ಸಂಪೂರ್ಣ ಬೆಳೆ ಸಾಲಮನ್ನಾ ಮಾಡಲು ಚಿಂತನೆ ನಡೆಸಿದ್ದು, 1-4-2009 ರಿಂದ ಕಳೆದ 2017 ಡಿಸೆಂಬರ್ ವರೆಗೆ ಪಡೆದಿರುವ ಕೃಷಿ ಸಾಲವನ್ನು ಎರಡು ಅಂತದಲ್ಲಿ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ ಗ್ರಾಮೀಣ ಸಹಕಾರ, ನಗರ ಸಹಕಾರ ಬ್ಯಾಂಕುಗಳ ಸಾಲಮನ್ನಾ, ಎರಡನೇ ಹಂತದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡಲಾಗುವುದು ಎಂದು ಹೇಳಿದರು.
ಕೆಲ ಕೈಗಾರಿಕೋದ್ಯಮಿಗಳು ಮತ್ತು ಅಧಿಕಾರಿಗಳು ಕೃಷಿ ಹೆಸರಿನಲ್ಲಿ ಸಾಲ ಪಡೆದಿದ್ದಾರೆ. ಯಾರೆಲ್ಲ ಮೂರು ವರ್ಷದಿಂದ ಆದಾಯ‌ ತೆರಿಗೆ ಕಟ್ಟುತ್ತಿದ್ದಾರೆ, ಅವರ ಸಾಲಮನ್ನಾ ಮಾಡಬೇಕೆ ಎಂದು ಚರ್ಚಿಸಬೇಕು ಎಂದು ತಿಳಿಸಿದರು.
ಸಂಪೂರ್ಣವಾಗಿ ರೈತರ ಋಣಮುಕ್ತ ಪತ್ರ ಕೊಡೋದು ನನ್ನ ಗುರಿಯಾಗಿದ್ದು, ಎಷ್ಟು ಸಾವಿರ ಕೋಟಿ ಬಂದ್ರೂ ಋಣಮುಕ್ತ ಪತ್ರ ನೀಡುವುದು ನನ್ನ ಹೊಣೆ. ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.
ಆರ್ಥಿಕ ಶಿಸ್ತು ಉಳಿಸಿ ರೈತರನ್ನು ಋಣಮುಕ್ತ ಮಾಡುತ್ತೇವೆ. ನೋಡಲ್ ಅಧಿಕಾರಿಯಾಗಿ ಆಯಾ ಜಿಲ್ಲೆಗಳ ಡಿಸಿಗಳ ನೇಮಕ ಮಾಡಲಾಗುತ್ತದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅನುಭವವನ್ನೂ ಪಡೆಯುತ್ತೇನೆ ಎಂದು ತಿಳಿಸಿದರು.Farmers’ door to be delivered to debt-free letter: CM Kumaraswamy

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.